More

    ಶಾಂಘೈಗೆ 100 ಕಿ.ಮೀ ಗಿಂತಲೂ ಹತ್ತಿರದಲ್ಲಿ ಅಮೆರಿಕ ಯುದ್ಧ ವಿಮಾನ ಹಾರಾಟ; ಅಚ್ಚರಿ ಮೂಡಿಸಿದ ದೊಡ್ಡಣ್ಣನ ನಡೆ

    ಹಾಂಗ್​ಕಾಂಗ್​: ಚೀನಾದ ಪ್ರಮುಖ ಕರಾವಳಿ ನಗರವಾದ ಶಾಂಘೈನಿಂದ ನೂರು ಕಿ.ಮೀಗಿಂತಲೂ ಹತ್ತಿರದಲ್ಲಿ ಅಮೆರಿಕದ ಯುದ್ಧ ವಿಮಾನ ಹಾರಾಟ ನಡೆಸಿದೆ. ಜತೆಗೆ ಇದೇ ಸ್ಥಳದಲ್ಲಿ ಯುದ್ಧ ನೌಕೆ ಕೂಡ ಬೀಡು ಬಿಟ್ಟಿದೆ.

    ಅಮೆರಿಕ- ಚೀನಾದಲ್ಲಿ ರಾಯಭಾರ ಕಚೇರಿಗಳ ಸ್ಥಗಿತ ಹಾಗೂ ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ವಿರಸದ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ಇನ್ನಷ್ಟು ಆತಂಕಕ್ಕೆ ಕಾರಣವಾಗಿವೆ.

    ಇದನ್ನೂ ಓದಿ; ಅಮೆರಿಕ ಸರ್ಕಾರಕ್ಕೇ 41 ಕೋಟಿ ರೂ. ಮುಂಡಾಯಿಸಿದ ಮುಕುಂದ್​ ಮೋಹನ್​; ಕರೊನಾ ಸಂಕಷ್ಟದಲ್ಲಿ ಖತರ್ನಾಕ್​ ಐಡಿಯಾ…!

    ಇದೇ ಮೊದಲ ಬಾರಿಗೆ ಅಮೆರಿಕದ ಯುದ್ಧ ವಿಮಾನಗಳು ಚೀನಾ ನಗರಕ್ಕೆ ಇಷ್ಟೊಂದು ಹತ್ತಿರದಲ್ಲಿ ಹಾರಾಟ ನಡೆಸಿವೆ ಎಂದು ಹೇಳಲಾಗಿದೆ. ಇನ್ನೊಂದೆಡೆ, ದಕ್ಷಿಣ ಚೀನಾ ಸಮುದ್ರಕ್ಕೆ ಚೀನಾದಿಂದ ಪ್ರವೇಶಿಸುವ ಮಾರ್ಗದಲ್ಲಿ ಚೀನಿ ಯೋಧರು ಕೂಡ ಯುದ್ಧಾಭ್ಯಾಸದಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗಿದೆ.

    ಆಗಸದಿಂದಲೇ ಜಲಾಂರ್ತಗಾಮಿಗಳನ್ನು ಉಡಾಯಿಸಬಲ್ಲ ಸಾಮರ್ಥ್ಯವುಳ್ಳ ಎಪಿ- 8 ವಿಮಾನ ಹಾಗೂ ಇಪಿ-3ಇ ವಿಮಾನಗಳು ಹಾರಾಟ ನಡೆಸಿವೆ. ಇವು ತೈವಾನ್​ ಕೊಲ್ಲಿ ಮೂಲಕ ಶಾಂಘೈ ಸಮೀಪಿಸಿವೆ ಎಂದು ಹೇಳಲಾಗಿದೆ. ದಕ್ಷಿಣ ಚೀನಾದ ಗ್ವಾಂಗ್​ಡಾಂಗ್​ ಪ್ರದೇಶದಲ್ಲಿ ಸಮೀಕ್ಷೆ ನಡೆಸಿವೆ ಎಂದು ವರದಿಯಾಗಿದೆ.

    ಇದನ್ನೂ ಓದಿ; ಭಾರತದಲ್ಲಿ ಅಡಗಿದ್ದಾಳೆ ಶ್ರೀಲಂಕಾ ಆತ್ಮಹತ್ಯಾ ಬಾಂಬರ್​​ನ ಪತ್ನಿ? 

    ಅಮೆರಿಕದ ಪ್ರಮುಖ ಯುದ್ಧನೌಕೆಗಳಲ್ಲಿ ಒಂದಾದ ಯುಎಸ್​ಎಸ್​ ರಫೇಲ್​ ಪೆರಾಲ್ಟಾ ನೌಕೆ ಮೇಲೆಯೇ ಈ ಯುದ್ಧ ವಿಮಾನಗಳನ್ನು ಗುರುತಿಸಲಾಗಿದೆ. ಅಲ್ಲಿಗೆ ದಕ್ಷಿಣ ಚೀನಾ ಸಮುದ್ರದಲ್ಲಿ ಎಲ್ಲ ಕಾರ್ಯಾಚರಣೆಗಳಿಗೂ ಅಮೆರಿಕ ಸರ್ವ ಸನ್ನದ್ಧವಾಗಿರುವುದು ಇದರಿಂದ ತಿಳಿದು ಬರುತ್ತದೆ ಎಂದೇ ವಿಶ್ಲೇಷಿಸಲಾಗಿದೆ.

    ಶತ್ರುಗಳ ಎದೆಯಲ್ಲಿ ಶುರುವಾಯ್ತು ನಡುಕ; ಫ್ರಾನ್ಸ್​ನಿಂದ ಟೇಕ್​ಆಫ್​ ಆಯ್ತು ರಫೇಲ್​…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts