More

    ನಾಲ್ಕು ವರ್ಷದ ಬಾಲಕವಿ; ಕವನ ಸಂಕಲನಕ್ಕೆ ಒಪ್ಪಂದ ಮಾಡಿಕೊಂಡ ಇಂಗ್ಲೆಂಡ್​ನ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ

    ನವದೆಹಲಿ: ಕೀಟ್ಸ್​ನ ಮೊದಲ ಕವನ ಸಂಕಲನ ಪ್ರಕಟಗೊಂಡಾಗ ಆತನ ವಯಸ್ಸು 21. ಅಂತೆಯೇ ಮೇರಿ ಶೆಲ್ಲಿ ಬರವಣಿಗೆ ಆರಂಭಿಸಿದಾಗ ಆಕೆಯ ಪ್ರಾಯ 18 ವರ್ಷ. ಅಷ್ಟು ಕಡಿಮೆ ವಯಸ್ಸಿನಲ್ಲಿಯೇ ಎಂಥ ಸಾಧನೆ ಮಾಡಿದ್ದರು. ಆದರೆ, ಈ ಸಾಧನೆಗಳೆಲ್ಲ ಈತನ ಮುಂದೆ ನಿಜಕ್ಕೂ ಕುಬ್ಜವಾಗುತ್ತವೆ. ಏಕೆಂದರೆ ನಾಲ್ಕು ವರ್ಷದ ನದೀಮ್​ ಶಮ್ಮಾ ಈಗಾಗಲೇ ಪುಸ್ತಕ ರಚನೆಗೆ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾನೆ.

    ಬ್ರಿಟಿಷ್​ ಮಕ್ಕಳ ಪುಸ್ತಕ ಪ್ರಕಾಸ ಸಂಸ್ಥೆ ವಾಕರ್ಸ್​ ಬುಕ್ಸ್​ ಕವನ ಸಂಕಲನ ರಚನೆಗಾಗಿ ನದೀಮ್​ ಜತೆ ಒಪ್ಪಂದ ಮಾಡಿಕೊಂಡಿದೆ. ಇಂಥದ್ದೊಂದು ಶ್ರೇಯಕ್ಕೆ ಪಾತ್ರನಾದ ವಿಶ್ವದಲ್ಲಿಯೇ ಅತಿ ಚಿಕ್ಕ ವಯಸ್ಸಿನ ವ್ಯಕ್ತಿ ಈತನಾಗಿದ್ದಾನೆ.

    ಇದನ್ನೂ ಓದಿ; ಕರೊನಾ ತಡೆಗೆ ಅಬ್ಬಾ ಇದೆಂಥ ಕಟ್ಟುನಿಟ್ಟು; ಮೂವರಿಗೆ ಸೋಂಕು; 80 ಸಾವಿರ ಜನರ ತೆರವು ಕಾರ್ಯಾಚರಣೆ..!

    ಇಂಗ್ಲೆಂಡ್​ನ ಯುನಿವರ್ಸಿಟಿ ಆಫ್​ ರೀಡಿಂಗ್​ನಲ್ಲಿ ಸಾಹಿತ್ಯದ ಪ್ರಾಧ್ಯಾಪಕಿಯಾಗಿರುವ ಯಾಸ್ಮೀನ್​ ಶಮ್ಮಾ ಈತನ ತಾಯಿ. ಇನ್ನೊಬ್ಬ ಪ್ರಾಧ್ಯಾಪಕಿ ಕೇಟ್​ ಕ್ಲಾಂಚಿ ಈತನ ಪ್ರತಿಭೆ ಹೊರ ಬರಲು ಕಾರಣರಾದವರು. ಈತನ ಕವನಗಳನ್ನು ಸೋಷಿಯಲ್​ ಮಿಡಿಯಾಗಳಲ್ಲಿ ಹಂಚಿಕೊಂಡು ಹೆಚ್ಚು ಜನಪ್ರಿಯವಾಗುವಂತೆ ಮಾಡಿದರು.

    ಸ್ಥಳೀಯ ಸಂಡೇ ಟೈಮ್ಸ್​ ಹಾಗೂ ಸ್ಕೈ ನ್ಯೂಸ್​ಗಳಲ್ಲಿ ಈತನ ಬಗ್ಗೆ ವರದಿಗಳು ಪ್ರಕಟಗೊಂಡವು. ಇದೇ ಕಾರಣಕ್ಕಾಗಿ ಈತ ವಾಕರ್ಸ್​ ಬುಕ್ಸ್​ ಸಂಸ್ಥೆಯ ಗಮನ ಸೆಳೆದಿದ್ದಾನೆ. ಈತನ ‘ಅಸ್ಟಾನಿಷಿಂಗ್​ ‘ ಹೆಸರಿನ ಕವನ ಸಂಕಲನ ಪ್ರಕಟಿಸುತ್ತಿದೆ.

    ಇದನ್ನೂ ಓದಿ; ಕರೊನಾ ಸಂಕಷ್ಟದಲ್ಲಿ ಖುಲಾಯಿಸಿದ ಅದೃಷ್ಟ; ಒಂದೇ ಮೀನಿಗೆ 20 ಲಕ್ಷ ರೂಪಾಯಿ..! ಏನಿದರ ವಿಶೇಷ? 

    ತನ್ನ ಕವನಗಳೆಲ್ಲ ಪುಸ್ತಕದಲ್ಲಿ ಪ್ರಕಟವಾಗುತ್ತಿವೆ ಎಂಬ ಖುಷಿ ನದೀಮ್​ದು. ನನಗೂ ಒಂದು ಪುಸ್ತಕ ಕೊಡ್ತೀರಾ ಎಂದು ಅಷ್ಟೇ ಮುದ್ದಾಗಿ, ಮುಗ್ಧವಾಗಿ ಕೇಳುತ್ತಾನೆ ನದೀಮ್​.

    https://www.vijayavani.net/first-batch-of-rafales-for-india-leaves-france/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts