More

    ಇದು ವಿಶ್ವದ ಅತಿದೊಡ್ಡ ಬಾಳೆಹಣ್ಣು! ಇದರ ಒಟ್ಟು ತೂಕ ಎಷ್ಟು ಅಂತ ಗೊತ್ತಾದ್ರೆ ಹುಬ್ಬೇರೋದು ಖಚಿತ

    ನವದೆಹಲಿ: ಬಾಳೆಹಣ್ಣು ಅತ್ಯಂತ ಪೌಷ್ಟಿಕವಾದ ಹಣ್ಣುಗಳಲ್ಲಿ ಒಂದಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಬಾಳೆಹಣ್ಣನ್ನು ಸವಿಯಲು ಹಲವಾರು ವಿಧಾನಗಳಿವೆ. ಅದು ಕೇಕ್, ಮಫಿನ್, ಐಸ್ ಕ್ರೀಮ್ ಅಥವಾ ಪ್ಯಾನ್‌ಕೇಕ್ ಯಾವುದೇ ರೂಪವಿರಲಿ ನಾವೆಲ್ಲರೂ ಬಾಳೆಹಣ್ಣನ್ನು ಸವಿಯಲು ಇಷ್ಟಪಡುತ್ತೇವೆ.

    ಈ ಹಣ್ಣಿನಲ್ಲಿ ಪೊಟ್ಯಾಸಿಯಂ ಸಮೃದ್ಧವಾಗಿದೆ ಮತ್ತು ಜೀರ್ಣಕ್ರಿಯೆಗೆ ಉತ್ತಮವಾಗಿದೆ. ಅದಕ್ಕಾಗಿಯೇ ಎಲ್ಲರು ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದೀಗ ಒಂದು ಜಾತಿಯ ಬಾಳೆಹಣ್ಣಿನ ಬಗ್ಗೆ ಆಸಕ್ತಿದಾಯಕ ಸಂಗತಿಯನ್ನು ನಾವು ನಿಮಗೆ ಪರಿಚಯಿಸಲಿದ್ದೇವೆ. ಇತ್ತೀಚೆಗೆ ಟ್ವಿಟರ್​ನಲ್ಲಿ ವಿಶಿಷ್ಟವಾದ ದೈತ್ಯಾಕಾರದ ಬಾಳೆಹಣ್ಣಿನ ವಿಡಿಯೋ ವೈರಲ್​ ಆಗಿದೆ.

    ಇದನ್ನೂ ಓದಿ: ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುರುಡು ಕಾಂಚಾಣ ಕುಣಿತ: ಬೆಳಗಾವಿ, ಗದಗಿನಲ್ಲಿ 26 ಲಕ್ಷ ರೂ. ಸೀಜ್​

    ಇಂಡೋನೇಷ್ಯಾದ ಹತ್ತಿರವಿರುವ ಪಪುವಾ ನ್ಯೂಗಿನಿಯಾ ದ್ವೀಪಗಳಲ್ಲಿ ದೊಡ್ಡ ಗಾತ್ರದ ಬಾಳೆಹಣ್ಣನ್ನು ಬೆಳೆಯಲಾಗುತ್ತದೆ. ಇಲ್ಲಿ ಬಾಳೆ ಮರವು ತೆಂಗಿನ ಮರದ ಎತ್ತರದಲ್ಲಿದೆ ಮತ್ತು ಹಣ್ಣುಗಳು ದೊಡ್ಡದಾಗಿ ಬೆಳೆಯುತ್ತವೆ. ಪ್ರತಿ ಬಾಳೆಹಣ್ಣು ಸುಮಾರು 3 ಕೆಜಿ ತೂಗುತ್ತದೆ. ಇದು ಹಣ್ಣು ಹಣ್ಣಾಗಲು ಸುಮಾರು ಐದು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಈ ಹಣ್ಣನ್ನು ವ್ಯಾಪಕವಾಗಿ ಬೆಳೆಯುವುದಿಲ್ಲ.

    ಟ್ವಿಟರ್​ನಲ್ಲಿ ವೈರಲ್​ ಆಗಿರುವ ವಿಡಿಯೋವನ್ನು ಈವರೆಗೆ 41 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿದವರೆಲ್ಲ ಹುಬ್ಬೇರಿಸುವ ಮೂಲಕ ಬಗೆ ಬಗೆಯ ಕಾಮೆಂಟ್​ಗಳನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

    https://twitter.com/Ananth_IRAS/status/1638348986905133057?s=20

    ನೀತಾ ಮುಕೇಶ್​ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಏ. 3ರಿಂದ ವಿವಿಧ ಪ್ರದರ್ಶನ ಆರಂಭ

    ಹೆಣ್ಣು, ಹೊನ್ನು, ಮಣ್ಣು ಸಿಗಬೇಕು ಅಂದ್ರೆ ಪುಣ್ಯ ಬೇಕು; ಆನಂದ್ ಸಿಂಗ್

    ಬಿಯರ್ ಮೇಲೆ 10 ರೂ. ಹೆಚ್ಚುವರಿ ವಸೂಲಿ ಮಾಡಿದ್ದವನಿಗೆ ಜೈಲು; ಬಾರ್ ಲೈಸೆನ್ಸ್ ಹೊಂದಿದ್ದ ಮಾಲೀಕನಿಗೆ 75,000 ರೂ. ದಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts