More

    ನೀತಾ ಮುಕೇಶ್​ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಏ. 3ರಿಂದ ವಿವಿಧ ಪ್ರದರ್ಶನ ಆರಂಭ

    ಮುಂಬೈ: ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ (ಎನ್​ಎಂಎಸಿಸಿ) ಸಂಗೀತ, ನೃತ್ಯ, ನಾಟಕ, ಫ್ಯಾಷನ್ ಹಾಗೂ ದೃಶ್ಯ ಕಲೆಗಳ ಪ್ರದರ್ಶನಗಳೊಂದಿಗೆ ಹೊರ ಜಗತ್ತಿಗೆ ತೆರೆದುಕೊಳ್ಳುತ್ತಿದೆ.

    ಎನ್​ಎಂಎಸಿಸಿಯ ಸ್ಟುಡಿಯೋ ಥಿಯೇಟರ್ ಮತ್ತು ದಿ ಕ್ಯೂಬ್ ನಲ್ಲಿ ಏಪ್ರಿಲ್​ 3ರಿಂದ ಆರಂಭವಾಗುವ ಕಲಾವಿದರ ವೈವಿಧ್ಯಮಯ ಪ್ರದರ್ಶನಗಳನ್ನು ಎಲ್ಲರೂ ಆನಂದಿಸಬಹುದಾಗಿದೆ. ದಿ ಕ್ಯೂಬ್​ ಹೊಸ ಮತ್ತು ಪ್ರಾಯೋಗಿಕ ರಂಗಭೂಮಿಯಿಂದ ಉದಯೋನ್ಮುಖ ಭಾರತೀಯ ಕಲಾವಿದರನ್ನು ಪ್ರೋತ್ಸಾಹಿಸಿ ಉತ್ತೇಜಿಸಲಿದೆ.

    ಇದನ್ನೂ ಓದಿ: ಮೋದಿ ಉಪನಾಮ ಪ್ರಕರಣ: ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದ ಸೂರತ್ ನ್ಯಾಯಾಲಯ

    ಸ್ಟುಡಿಯೋ ಥಿಯೇಟರ್​ನಲ್ಲಿ ಏಪ್ರಿಲ್​ 3 ರಿಂದ 9ರವರೆಗೆ ಪ್ರತಿದಿನ ವಿವಿಧ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಏ. 3ರಂದು ಮೇಮ್ ಖಾನ್ (ರಾಜಸ್ತಾನಿ ಜಾನಪದ ಮತ್ತು ಸೂಫಿ ಮ್ಯೂಸಿಕ್​), ಏ​. 4ರಂದು ಕೌಶಿಕಿ ಚಕ್ರವರ್ತಿ (ಹಿಂದುಸ್ತಾನಿ ಕ್ಲಾಸಿಕಲ್​ ಮ್ಯೂಸಿಕ್​), ಏ.​ 5ರಂದು ಉಸ್ತಾದ್ ಮುನವ್ವರ್ ಮಾಸೂಮ್ (ಕವ್ವಾಲಿ), ಏ.​ 6ರಂದು ಹಾರ್ದಿಕ್ ದವೆ (ಗುಜರಾತ್​ ಜಾನಪದ ಸಂಗೀತ), ಏ. 7ರಂದು ಅರುಣಾ ಸಾಯಿರಾಂ (ಕರ್ನಾಟಕ ಕ್ಲಾಸಿಕಲ್​ ಮ್ಯೂಸಿಕ್​​), ಏ. 8ರಂದು ಸಮರ್ಪಣ್ (ಕ್ಲಾಸಿಕಲ್​ ಫ್ಯೂಷನ್​ ಮ್ಯೂಸಿಕ್​), ಏ. 9ರಂದು ಪರ್ಬಯನ್ ಚಟರ್ಜಿ ಮತ್ತು ಯು. ರಾಜೇಶ್ ಅವರಿಂದ ಮಿಲಾಪ್ (ಹಿಂದುಸ್ಥಾನಿ ಮತ್ತು ಕರ್ನಾಟಕ ಮ್ಯೂಸಿಕ್​) ಕಾರ್ಯಕ್ರಮಗಳು ನಡೆಯಲಿವೆ.

    ದಿ ಕ್ಯೂಬ್​ನಲ್ಲಿ
    ಏ. 3ರಂದು ಸಾರಂಗ್ ಕುಲಕರ್ಣಿ ಮತ್ತು ಶಿಖರ್ ನಾದ್ ಖುರೇಷಿ (ಇಂಡಿಯನ್​ ಕ್ಲಾಸಿಕಲ್​ ಮತ್ತು ಫ್ಯೂಷನ್​), ಏ. 4ರಂದು ದಿವ್ಯಾ ವಾರಿಯರ್​, ಶ್ರುತಿ ಗೋಪಾಲ್​ ಮತ್ತು ಶಾಶ್ವತಿ ಗರಾಲ್​ ಘೋಷ್​ ಅವರಿಂದ ಅವಳ ಕಥೆ (ಇಂಡಿಯನ್​ ಕ್ಲಾಸಿಕಲ್​ ಡಾನ್ಸ್​), ಏ. 5ರಂದು ಮಾಲಿ ಮತ್ತು ಕಾಮಾಕ್ಷಿ ಖನ್ನಾ: ಲೈವ್ (ಪಾಪ್​, ಆರ್​ಎನ್​ಬಿ, ಸೋಲ್​ ಆ್ಯಂಡ್​ ಇಂಡೀ ಫೋಕ್), ಏ. 6ರಂದು ಯುಕಿ ಎಲ್ಲಿಯಾಸ್​ ಅವರಿಂದ ಎಲಿಫೆಂಟ್​ ಇನ್​ ದಿ ರೂಮ್​ (ಥಿಯೇಟರ್​). ಏ. 7ರಂದು ಮಹೇಶ್ ಬಚ್ವಾನ್ ಮತ್ತು ನಂದಿನಿ ಶಂಕರ್ (ಇಂಡಿಯನ್​ ಕ್ಲಾಸಿಕಲ್​ ಫ್ಯೂಷನ್​), ಏ. 8ರಂದು ತರುಣ್ ಬಲಾನಿ ಫೀಟ್​. ಪರಿಜಾದ್​ ಡಿ ಅವರಿಂದ ಸೀಸನಲ್ ಅಫೆಕ್ಟೆಡ್​ ಬೀಟ್ಸ್: ಲೈವ್ (ಎಲೆಕ್ಟ್ರಾನಿಕ್​ ಮ್ಯೂಸಿಕ್​, ಆಡಿಯೋ ವಿಸುವಲ್​), ಏ. 9ರಂದು ಮುಕ್ತಾ ಬರ್ವೆ ಅವರಿಂದ ಪ್ರಿಯ್​ ಭಾಯ್, ಏಕ್​ ಕವಿತಾ ಹವೀ ಆಹೆ (ಮರಾಠಿ ಥಿಯೇಟರ್​) ಕಾರ್ಯಕ್ರಮಗಳು ನಡೆಯಲಿವೆ.

    ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿಮ್ಮ ಟಿಕೆಟ್‌ಗಳನ್ನು ಈಗ http://nmacc.com ನಲ್ಲಿ ಬುಕ್ ಮಾಡಬಹುದು.

    ದಿ ಕ್ಯೂಬ್​ಗೆ 250 ರೂ. ಮತ್ತು ದಿ ಸ್ಟುಡಿಯೋ ಥಿಯೇಟರ್​ಗೆ ತಲಾ 500 ರೂ. ಟಿಕೆಟ್‌ ದರ ನಿಗದಿ ಮಾಡಲಾಗಿದೆ.

    ಇಷ್ಟೇ ಅಲ್ಲದೆ, ಎನ್​ಎಂಎಸಿಸಿಯಿಂದ ದಿ ಗ್ರೇಟ್ ಇಂಡಿಯನ್ ಮ್ಯೂಸಿಕಲ್ ಕಾರ್ಯಕ್ರಮ ಕೂಡ ಕೆಲವೇ ದಿನಗಳಲ್ಲಿ ದಿ ಗ್ರ್ಯಾಂಡ್ ಥಿಯೇಟರ್‌ನಲ್ಲಿ ಪ್ರಾರಂಭಗೊಳ್ಳಲಿದೆ. ಇದು ಏಪ್ರಿಲ್​ 3ರಿಂದ ಏ.23ರವರೆಗೆ ನಡೆಯಲಿದೆ. ಮ್ಯೂಸಿಕಲ್​ ಕಾರ್ಯಕ್ರಮದಲ್ಲಿ ಭಾರತೀಯ ನೃತ್ಯ, ನಾಟಕ, ಸಂಗೀತ, ಕಲೆ ಸೇರಿ ಮುಂತಾದವು ಪ್ರದರ್ಶನಗೊಳ್ಳಲಿದೆ. ಅಲ್ಲದೆ, ಏಪ್ರಿಲ್​ 3 ರಿಂದ ಜೂನ್​ 4ರವರೆಗೆ ‘ಇಂಡಿಯಾ ಇನ್ ಫ್ಯಾಶನ್’ ವೇಷಭೂಷಣ ಕಲಾ ಪ್ರದರ್ಶನ ನಡೆಯಲಿದೆ.

    ಇದನ್ನೂ ಓದಿ: ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುರುಡು ಕಾಂಚಾಣ ಕುಣಿತ: ಬೆಳಗಾವಿ, ಗದಗಿನಲ್ಲಿ 26 ಲಕ್ಷ ರೂ. ಸೀಜ್​

    ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿಮ್ಮ ಟಿಕೆಟ್‌ಗಳನ್ನು ಈಗ http://nmacc.com ನಲ್ಲಿ ಬುಕ್ ಮಾಡಬಹುದು.

    ಮೋದಿ ಉಪನಾಮ ಪ್ರಕರಣ: ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದ ಸೂರತ್ ನ್ಯಾಯಾಲಯ

    ಬಿಯರ್ ಮೇಲೆ 10 ರೂ. ಹೆಚ್ಚುವರಿ ವಸೂಲಿ ಮಾಡಿದ್ದವನಿಗೆ ಜೈಲು; ಬಾರ್ ಲೈಸೆನ್ಸ್ ಹೊಂದಿದ್ದ ಮಾಲೀಕನಿಗೆ 75,000 ರೂ. ದಂಡ

    ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುರುಡು ಕಾಂಚಾಣ ಕುಣಿತ: ಬೆಳಗಾವಿ, ಗದಗಿನಲ್ಲಿ 26 ಲಕ್ಷ ರೂ. ಸೀಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts