More

    ಬಿಯರ್ ಮೇಲೆ 10 ರೂ. ಹೆಚ್ಚುವರಿ ವಸೂಲಿ ಮಾಡಿದ್ದವನಿಗೆ ಜೈಲು; ಬಾರ್ ಲೈಸೆನ್ಸ್ ಹೊಂದಿದ್ದ ಮಾಲೀಕನಿಗೆ 75,000 ರೂ. ದಂಡ

    ಉತ್ತರಪ್ರದೇಶ: ಮದ್ಯದ ಅಂಗಡಿಯಲ್ಲಿ ಇತರೆ ಬ್ರಾಂಡ್​​ಗಳ ಮೇಲೆ ಹತ್ತು ರೂಪಾಯಿಗಳಿಂದ ಇಪ್ಪತ್ತು ರೂಪಾಯಿಗಳವರೆಗೆ ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಜೈಲಿಗೆ ಕಳುಹಿಸಲಾಗಿದೆ.

    ನೋಯಿಡಾದ ಜಲಾಲ್ಪುರ್ ಏರಿಯಾದಲ್ಲಿದ್ದ ಮದ್ಯದಂಗಡಿ ಒಂದರಲ್ಲಿ 500 ಎಂ.ಎಲ್.ನ ಕಿಂಗ್ ಫಿಶರ್ ಸ್ಟ್ರಾಂಗ್ ಬಿಯರ್​ಗೆ ರವಿ ಸಿಂಗ್ ಎಂಬಾತ 120 ರೂ. ಬದಲಿಗೆ 130 ರೂಪಾಯಿ ವಸೂಲಿ ಮಾಡಿದ್ದ. ಅಲ್ಲದೆ ಈ ಮದ್ಯದ ಅಂಗಡಿಯಲ್ಲಿ ಇತರೆ ಬ್ರಾಂಡ್ ಗಳ ಮೇಲೂ ಹತ್ತು ರೂಪಾಯಿಗಳಿಂದ ಇಪ್ಪತ್ತು ರೂಪಾಯಿಗಳವರೆಗೆ ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿರುವ ದೂರು ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಗ್ರಾಹಕನ ಸೋಗಿನಲ್ಲಿ ವ್ಯಕ್ತಿಯೊಬ್ಬನನ್ನು ಕಳುಹಿಸಿದ್ದು, ಬಿಯರ್ ಗೆ ಹೆಚ್ಚುವರಿ 10 ರೂಪಾಯಿ ಪಡೆದಿದ್ದನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

    ಇದನ್ನೂ ಓದಿ: ಬೆಡ್‌ರೂಂನಲ್ಲಿ ಮಲಗಿ ಬುಸುಗುಟ್ಟಿದ 6 ಅಡಿ ಉದ್ದ ವಿಷಕಾರಿ ಹಾವು!
    ಆರೋಪಿ ರವಿ ಸಿಂಗ್ ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಅಷ್ಟೇ ಅಲ್ಲ ಬಾರ್ ಲೈಸೆನ್ಸ್ ಹೊಂದಿದ್ದ ಮಾಲೀಕನಿಗೆ ಬರೋಬ್ಬರಿ 75,000 ರೂಪಾಯಿ ದಂಡ ವಿಧಿಸಲಾಗಿದೆ.

    ಇದನ್ನೂ ಓದಿ: ನನ್ನ ಹೆಂಡ್ತಿಗೆ ಸೊಳ್ಳೆಗಳು ಕಚ್ಚುತ್ತಿವೆ ಕಾಪಾಡಿ.. ಕೆಲವೇ ಕ್ಷಣದಲ್ಲಿ ಸೊಳ್ಳೆ ಬತ್ತಿ ಕೊಟ್ಟ ಪೊಲೀಸ್!
    ಮಾತನಾಡಿರುವ ಅಬಕಾರಿ ಅಧಿಕಾರಿಯೊಬ್ಬರು, ಮೊದಲ ಬಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಈ ದಂಡ ವಿಧಿಸಲಾಗಿದೆ. ಮತ್ತೊಮ್ಮೆ ಉಲ್ಲಂಘಿಸಿದರೆ ಒಂದೂವರೆ ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಇದು ಮರುಕಳಿಸಿದರೆ ಶಾಶ್ವತವಾಗಿ ಲೈಸೆನ್ಸ್ ರದ್ದುಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts