More

    ರಾಜ್ಯೋತ್ಸವದಂದು ವಿಶ್ವದಾಖಲೆಯ ಪ್ರಯತ್ನ; 10 ಸಾವಿರ ಅಡಿ ಉದ್ದದ ಕನ್ನಡ ಬಾವುಟ ಪ್ರದರ್ಶನ

    ಬೆಂಗಳೂರು: ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ನಾಡು-ನುಡಿಯ ವಿಚಾರದಲ್ಲಿ ವಿಶೇಷ ಪ್ರಯತ್ನ-ಪ್ರದರ್ಶನಗಳು ನಡೆಯುತ್ತಿರುತ್ತವೆ. ಅದೇ ರೀತಿ ಈ ಸಲ ವಿಶ್ವದಾಖಲೆಯ ಪ್ರಯತ್ನವೊಂದು ನಡೆಯುತ್ತಿದೆ. ಕನ್ನಡ ಬಾವುಟದ ವಿಚಾರದಲ್ಲಿ ಇಂಥದ್ದೊಂದು ಯತ್ನ ನಡೆಯಲಿದೆ.

    ಈಗಾಗಲೇ ಸರ್ಕಾರಿ ಶಾಲೆಗಳ ಸುಧಾರಣೆ ನಿಟ್ಟಿನಲ್ಲಿ ಅಭಿಯಾನ ನಡೆಸುತ್ತಿರುವ ಕನ್ನಡ ಮನಸುಗಳು ಎಂಬ ಬಳಗ ಈ ಪ್ರಯತ್ನವೊಂದನ್ನು ಮಾಡಲು ಮುಂದಾಗಿದೆ. ಕನ್ನಡದ ಕೆಲಸದಲ್ಲಿ ತೊಡಗಿಕೊಂಡು ಐದು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ರಾಜ್ಯೋತ್ಸವದಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

    ಕನ್ನಡ ಮನಸುಗಳು ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿರುವ ನಾವು ನಿಮ್ಮೆಲ್ಲರ ಪ್ರೋತ್ಸಾಹದಿಂದ ಸುದೀರ್ಘ 5 ವರ್ಷಗಳ ಪಯಣವನ್ನು ಮುಗಿಸಿರುತ್ತೇವೆ. ಈ ಸಂಭ್ರಮಾಚರಣೆಯನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿ, ಅನೇಕ ಸಮಾನ ಮನಸ್ಕ ಕನ್ನಡ ಸಂಘಟನೆಗಳ ಜೊತೆ ಚರ್ಚಿಸಿ ಬೆಳಗಾವಿಯಲ್ಲಿ

    ಈ ಸಲ ನ. 1ರಂದು ಅತಿ ಉದ್ದದ ಕನ್ನಡ ಬಾವುಟ ಪ್ರದರ್ಶನ ಮತ್ತು ಮೆರವಣಿಗೆ ಮಾಡಿ ಅದನ್ನು ಲಂಡನ್ ಬುಕ್ ಆಫ್ ರೆಕಾರ್ಡ್ಸ್​​ಗೆ ಸೇರಿಸಲು ಯೋಜನೆ ಹಾಕಿಕೊಂಡಿದ್ದೇವೆ. ಈ ಹಿಂದೆ ಬೆಂಗಳೂರಿನಲ್ಲಿ 2,040 ಮೀಟರ್ ಉದ್ದದ ಬಾವುಟ ಪ್ರದರ್ಶನ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಈ ಭಾರಿ ಸುಮಾರು 10000 ಅಡಿ ಅಂದರೆ ಸುಮಾರು 3,200 ಮೀಟರ್ ಉದ್ದದ ಬಾವುಟ ಬೆಳಗಾವಿಯ ಚೆನ್ನಮ್ಮ ಸರ್ಕಲ್ ಬಳಿ ಪ್ರದರ್ಶಿಸಲಾಗುತ್ತದೆ. ಇದರಲ್ಲಿ ಅನೇಕ ಸಮಾನ ಮನಸ್ಕ ಕನ್ನಡ ಸಂಘಟನೆಗಳು ಕೈಜೋಡಿಸಲಿವೆ ಎಂದು ಕನ್ನಡ ಮನಸುಗಳ ಪವನ್​ ತಿಳಿಸಿದ್ದಾರೆ.

    ‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’: ನಿರೀಕ್ಷೆಗೂ ಮೀರಿ ನಿಜವಾಯ್ತಾ ಕಾರ್ಣಿಕ?

    ಪತಿ ಮೂರು ದಿನಗಳಿಂದ ನಾಪತ್ತೆ; ಮನೆಯಲ್ಲಿ ಪತ್ನಿಯ ಶವ ಪತ್ತೆ!

    ರಕ್ತದ ಬದಲು ಮೂಸಂಬಿ ಜ್ಯೂಸ್​ ಕೊಟ್ಟು ರೋಗಿ ಸಾವು ಪ್ರಕರಣ; ಬಯಲಾಯ್ತು ಅಸಲಿ ಕಾರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts