More

    ವಿಶ್ವಕಪ್ ಕ್ರಿಕೆಟ್​: ಭಾರತದ ಇಂದಿನ ಭರ್ಜರಿ ಗೆಲುವನ್ನು ‘ಕಾಪಿ-ಪೇಸ್ಟ್’ ಎಂದಿದ್ದೇಕೆ ಗೂಗಲ್?

    ಕೋಲ್ಕತ: ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ದಕ್ಷಿಣ ಆಫ್ರಿಕದ ಎದುರು ಭರ್ಜರಿ ಜಯ ಗಳಿಸಿದ್ದು, ಕ್ರಿಕೆಟ್​ಪ್ರಿಯರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ವಿರಾಟ್​ ಕೊಹ್ಲಿಯ ಅಬ್ಬರದ ಆಟದಿಂದಾಗಿ ಕ್ರೀಡಾಭಿಮಾನಿಗಳು ಈ ವಿಜಯವನ್ನು ವಿರಾಟೋತ್ಸವ ಎಂದು ಸಂಭ್ರಮಿಸಲಾರಂಭಿಸಿದ್ದಾರೆ.

    ಭಾರತ ದಕ್ಷಿಣ ಆಫ್ರಿಕ ತಂಡದ ವಿರುದ್ಧ 243 ರನ್​ಗಳ ಭರ್ಜರಿ ವಿಜಯ ದಾಖಲಿಸಿದೆ. ಅದರಲ್ಲೂ ಏಕದಿನ ಪಂದ್ಯಗಳಲ್ಲಿನ 49ನೇ ಶತಕವನ್ನು ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಮಾಡುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿ ದಾಖಲೆ ನಿರ್ಮಿಸಿದ್ದಾರೆ.

    ಆ ಮೂಲಕ ತಮ್ಮ ಹುಟ್ಟಿದ ದಿನದವನ್ನು ಅವಿಸ್ಮರಣೀಯ ಆಗಿಸಿಕೊಂಡಿದ್ದಲ್ಲದೆ, ಅಭಿಮಾನಿಗಳಿಗೂ ಭರ್ಜರಿ ಖುಷಿ ನೀಡಿದ್ದಾರೆ. ಒಟ್ಟಿನಲ್ಲಿ ಕೋಲ್ಕತದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕ 27.1 ಓವರ್​​ಗಳಲ್ಲಿ 83 ರನ್​ಗಳಿಗೆ ಆಲೌಟ್​​ ಆಗಿ ಹೀನಾಯ ಸೋಲು ಕಂಡಿದೆ.

    ಇದನ್ನೂ ಓದಿ: ರಾತ್ರಿ ಸರಿಯಾಗಿ ನಿದ್ರೆ ಬರದಿದ್ದರೆ ಅದಕ್ಕೆ ಇವೇ ಕಾರಣಗಳಂತೆ!

    ನಮ್ಮ ಕ್ರಿಕೆಟ್ ತಂಡ ಮತ್ತೊಮ್ಮೆ ವಿಜಯಶಾಲಿಯಾಗಿದೆ. ದಕ್ಷಿಣ ಆಫ್ರಿಕ ವಿರುದ್ಧ ಅಮೋಘ ಪ್ರದರ್ಶನ ನೀಡಿದ ತಂಡಕ್ಕೆ ಅಭಿನಂದನೆಗಳು. ತಂಡವಾಗಿ ಉತ್ತಮ ಕೆಲಸ. ಇಂದು ಸುಂದರ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿಗೆ ತಂಡದವರೂ ಚೆನ್ನಾಗಿ ಆಡಿ ಹುಟ್ಟುಹಬ್ಬದ ಉಡುಗೊರೆಯನ್ನೂ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

    ಇದನ್ನೂ ಓದಿ: ಇನ್​ಫೊಸಿಸ್​ ನಾರಾಯಣಮೂರ್ತಿ ಅವರ ಆ ಮಾತು ‘ವಾರಕ್ಕೆ 70 ಗಂಟೆಗಳ ಕೆಲಸದ ನಡುವೆ’ ಕಳೆದುಹೋಯ್ತಾ?

    ಮತ್ತೊಂದು ದೃಢವಾದ ವಿಜಯಕ್ಕಾಗಿ ಮೆನ್​ ಇನ್​ ಬ್ಲ್ಯೂಗೆ ಅಭಿನಂದನೆಗಳು. ಪಂದ್ಯಾವಳಿಯುದ್ದಕ್ಕೂ ಅಮೋಘ ಆಟವಾಡಿ, ಏಕದಿನ ಶತಕಗಳ ದಾಖಲೆ ಸರಿಗಟ್ಟಿದ ವಿರಾಟ್​​ಗೆ ಇದು ನಿಜವಾಗಿಯೂ ವಿಶೇಷ ದಿನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

    ಇದನ್ನೂ ಓದಿ: ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

    ಹೀಗೆ ಹಲವರು ಭಾರತದ ವಿಜಯಕ್ಕೆ ಸಂಭ್ರಮ ವ್ಯಕ್ತಪಡಿಸಿ, ಅಭಿನಂದನೆಗಳನ್ನು ತಿಳಿಸಿದ್ದಾರೆ. ಆದರೆ ಗೂಗಲ್ ಇಂಡಿಯಾ ಈ ಗೆಲುವನ್ನು ವಿಶೇಷ ರೀತಿಯಲ್ಲಿ ವ್ಯಾಖ್ಯಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇಂದಿನ ಪಂದ್ಯವನ್ನು ‘ಕಾಪಿ-ಪೇಸ್ಟ್’ ಎಂದು ಗೂಗಲ್ ವಿಶೇಷ ರೀತಿಯಲ್ಲಿ ಬಣ್ಣಿಸಿದೆ. ಅರ್ಥಾತ್, ಇದೇ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಆಡಿದ್ದ ಪಂದ್ಯದಲ್ಲಿನ ಪರ್ಫಾರ್ಮೆನ್ಸೇ ಇಲ್ಲಿ ಮರುಕಳಿಸಿದೆ ಎಂದು ಅದು ಅಂದು ಮಾಡಿದ್ದ ಎಕ್ಸ್ ಪೋಸ್ಟ್ ಕೋಟ್ ಮಾಡಿ ಸಂತೋಷ ಹಂಚಿಕೊಂಡಿದೆ.

    ಮಕ್ಕಳ ಯಕ್ಷಗಾನವನ್ನು ನಿಲ್ಲಿಸಿದ ಪೊಲೀಸರು: ಕಾರಣ ಇದೇನಾ?

    ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts