More

    ಐಪಿಎಲ್ ವೀಕ್ಷಕವಿವರಣೆಕಾರರಿಗೆ ವರ್ಕ್ ಫ್ರಂ ಹೋಮ್!

    ಬೆಂಗಳೂರು: ಕರೊನಾ ಹಾವಳಿಯಿಂದಾಗಿ ಈಗ ಹೆಚ್ಚಿನವರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಐಪಿಎಲ್‌ನಲ್ಲೂ ವೀಕ್ಷಕವಿವರಣೆಕಾರರಿಗೆ ವರ್ಕ್ ಫ್ರಂ ಹೋಮ್ ಅನ್ವಯಿಸುವ ನಿರೀಕ್ಷೆ ಇದೆ. ಐಪಿಎಲ್ 13ನೇ ಆವೃತ್ತಿಯನ್ನು ಯುಎಇಗೆ ಸ್ಥಳಾಂತರಿಸಲು ಈಗಾಗಲೆ ಬಿಸಿಸಿಐನಿಂದ ಸಿದ್ಧತೆ ಶುರುವಾಗಿದೆ. ಒಂದು ವೇಳೆ ಭಾರತದಲ್ಲಿ ಐಪಿಎಲ್ ಟೂರ್ನಿ ನಡೆದರೂ ವೀಕ್ಷಕವಿವರಣೆಕಾರರಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ಲಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ಐಪಿಎಲ್ ಕಾಮೆಂಟರಿ ಬಳಗದಲ್ಲಿ 71 ವರ್ಷದ ಸುನೀಲ್ ಗಾವಸ್ಕರ್‌ರಂಥ ಹಿರಿಯರೂ ಇದ್ದಾರೆ. ಹೀಗಾಗಿ ಇವರಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಕರೊನಾ ವೈರಸ್ ಹಾವಳಿಯ ನಡುವೆ ಪ್ರೇಕ್ಷಕರಿಲ್ಲದೆ ಐಪಿಎಲ್ ಟೂರ್ನಿ ಆಯೋಜನೆಗೊಳ್ಳುತ್ತಿದ್ದು, ಜೈವಿಕ ಸುರಕ್ಷಾ ವಾತಾವರಣ ನಿರ್ಮಿಸಿಕೊಂಡರೂ, ವೀಕ್ಷಕವಿವರಣೆಕಾರರಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವ ಅವಕಾಶ ಕಲ್ಪಿಸಲು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಚಿಂತನೆ ನಡೆಸಿದೆ. ಕರೊನಾ ಹಾವಳಿಯ ನಡುವೆ ಇದು ಕೂಡ ನವವಾಸ್ತವದ ಅಂಗವಾಗಿರಲಿದೆ ಎನ್ನಲಾಗಿದೆ.

    ಇದನ್ನೂ ಓದಿ: VIDEO| ಕ್ರಿಸ್ ಗೇಲ್ ಕೆರಿಬಿಯನ್ ಡ್ಯಾನ್ಸ್ ವಿಡಿಯೋ ವೈರಲ್

    ಈಗಾಗಲೆ ಸ್ಟಾರ್ ಸ್ಪೋರ್ಟ್ಸ್ ಚಾನಲ್‌ನಲ್ಲಿ ದಕ್ಷಿಣ ಆಫ್ರಿಕಾದ 3ಟಿ ಕ್ರಿಕೆಟ್ ಪಂದ್ಯದ ವೇಳೆ ವೀಕ್ಷಕವಿವರಣೆಕಾರರು ವರ್ಚುವಲ್ ಕಾಮೆಂಟರಿ ನೀಡಿರುವುದು ಯಶಸ್ವಿಯಾಗಿದೆ. ಆಕಾಶ್ ಚೋಪ್ರಾ, ದೀಪ್ ದಾಸ್‌ಗುಪ್ತಾ ಮತ್ತು ಇರ್ಫಾನ್ ಪಠಾಣ್ ಅವರು 3ಟಿ ಕ್ರಿಕೆಟ್ ಪಂದ್ಯಕ್ಕೆ ಮನೆಯಿಂದಲೇ ವೀಕ್ಷಕವಿವರಣೆ ನೀಡಿದ್ದರು. ತಮ್ಮ ಹೊಸ ಕಾಮೆಂಟರಿ ಬಾಕ್ಸ್ ಹೇಗಿದೆ ಎಂದು ಇರ್ಫಾನ್ ಪಠಾಣ್ ಟ್ವಿಟರ್‌ನಲ್ಲಿ ಮನೆಯಲ್ಲಿನ ಸಿದ್ಧತೆಯ ಚಿತ್ರವನ್ನು ಪ್ರಕಟಿಸಿದ್ದರು.

    ಪತ್ನಿ ಜತೆ ಟ್ರೆಕ್ಕಿಂಗ್​ ಹೋದ ನೆನಪಲ್ಲಿ ಕ್ರಿಕೆಟಿಗ ಅಜಿಂಕ್ಯ ರಹಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts