More

    ಮೊಮ್ಮಗಳಿಗೆ ಅಜ್ಜ ಮಾಡಿದ ಮೆಸೇಜ್​ ನೋಡಿ ಭಾವುಕರಾದ ನೆಟ್ಟಿಗರು!

    ವಾಷಿಂಗ್ಟನ್: 60 ವರ್ಷ ದಾಟಿದವರು ಮತ್ತೆ ಮಕ್ಕಳಂತೆ ವರ್ತಿಸಲಾರಂಭಿಸುತ್ತಾರೆ ಎನ್ನುವ ಮಾತಿದೆ. ಆ ಕಾಲದಲ್ಲಿ ಅವರನ್ನು ಮಕ್ಕಳಂತೆಯೇ ನೋಡಿಕೊಳ್ಳಬೇಕು ಎಂದು ಅನೇಕರು ಹೇಳುತ್ತಿರುತ್ತಾರೆ. ಇಲ್ಲೊಬ್ಬ ಅಜ್ಜ ತನ್ನ ಮೊಮ್ಮಗಳಿಗೆ ಮಾಡಿರುವ ಮೆಸೇಜ್ ನೋಡಿದರೆ ಆ ಮಾತುಗಳೆಲ್ಲವೂ ಸತ್ಯ ಎಂದು ನಿಮಗನಿಸದೇ ಇರದು.

    ಟಿಕ್​ಟಾಕ್​ನಲ್ಲಿ ಮೇಗನ್ ಎಲಿಜಬೆತ್ ಹೆಸರಿನ ಯುವತಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾಳೆ. ಅದರಲ್ಲಿ ಆಕೆಯ 91 ವರ್ಷದ ಅಜ್ಜ ಆಕೆಗೆ ಮಾಡಿರುವ ಮೆಸೇಜ್​ಗಳ ಸ್ಕ್ರೀನ್​ಶಾಟ್​ಗಳನ್ನು ಆಕೆ ಶೇರ್ ಮಾಡಿದ್ದಾಳೆ. ಮೊಮ್ಮಗಳ ಬಗ್ಗೆ ಅಪಾರ ಕಾಳಜಿ ಇರುವ ಅಜ್ಜ, “ಮೊಮ್ಮಗಳೇ, 29 ವರ್ಷಗಳವರೆಗೆ ನೀವು ಸಿಂಗಲ್ ಆಗೇ ಇದ್ದರೆ ನೀವು ಸಾಯುತ್ತೀರಿ ಎನ್ನುವ ಆರ್ಟಿಕಲ್ ಒಂದನ್ನು ಓದಿದೆ. ಇನ್ನು ಮೂರು ತಿಂಗಳಲ್ಲಿ ನಿನ್ನ ಬರ್ತ್​ಡೇ ಇದೆ. ಈ ವಿಷಯ ನಿನಗೆ ತಿಳಿಯಲಿ ಎಂದು ಮೆಸೇಜ್ ಮಾಡಿದೆ” ಎಂದು ಬರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ಕಂಡು ಅವರು ಮೊಮ್ಮಗಳಿಗೆ ಆ ಮೆಸೇಜ್ ಮಾಡಿದ್ದಾರೆ. ಅದನ್ನು ಕಂಡ ಮೊಮ್ಮಗಳು ಒಕೆ, ಥ್ಯಾಂಕ್ಯೂ ಎಂದು ರಿಪ್ಲೇ ಮಾಡಿದ್ದಾಳೆ.

    ಹಾಗೆಯೇ ಇನ್ನೊಮ್ಮೆ, ಪ್ರೀತಿಯ ಮೇಗನ್, ಇತ್ತೀಚೆಗೆ ಆಲ್ಕೋಹಾಲ್ ಬಳಕೆ ಹೆಚ್ಚಾಗಿದೆಯಂತೆ. ನೀನು ಹೆಚ್ಚು ಕುಡಿಯುವುದಿಲ್ಲ ಎಂದು ನಂಬಿದ್ದೇನೆ. ನಿನ್ನ ಅಜ್ಜ ನಿನ್ನನ್ನು ಯಾವಾಗಲೂ ಪ್ರೀತಿಸುತ್ತಾನೆ ಎಂದು ಬರೆದುಕಳಿಸಿದ್ದಾರೆ. ಮತ್ತೊಮ್ಮೆ, ಮೇಗನ್, ನೀನು ಇಳಿಸಿಕೊಂಡಿದ್ದ ತೂಕವನ್ನು ಈಗ ಸರಿದೂಗಿಸಿಕೊಳ್ಳುತ್ತಿದ್ದೀಯ ಎಂದು ಭಾವಿಸಿದ್ದೇನೆ. ನಮ್ಮ ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಿದೆ ಎನ್ನುವುದನ್ನು ನೆನಪಿನಲ್ಲಿಡು ಎಂದು ಕಳುಹಿಸಿದ್ದಾರೆ. ಈ ಎಲ್ಲ ಮೆಸೇಜ್​ಗಳಿಗೆ ಮೇಗನ್ ಅಷ್ಟೇ ಪ್ರೀತಿಯಿಂದ ರಿಪ್ಲೇ ಮಾಡಿದ್ದಾರೆ.

    ಅಜ್ಜ ತನ್ನ ಬಗ್ಗೆ ಅದೆಷ್ಟು ಕೇರ್ ಮಾಡುತ್ತಾರೆ ಎನ್ನುವುದನ್ನು ಮೇಗನ್ ಟಿಕ್​ಟಾಕ್​ನಲ್ಲಿ ಎಲ್ಲರೆದುರು ಹೇಳಿಕೊಂಡಿದ್ದಾಳೆ. ಆಕೆಯ ಆ ವಿಡಿಯೋಗೆ ನೆಟ್ಟಿಗರು ಮನಸೋತಿದ್ದು, ಅಜ್ಜ ಇನ್ನಷ್ಟು ವರ್ಷ ಬದುಕಲೆಂದು ಹಾರೈಸಿದ್ದಾರೆ. (ಏಜೆನ್ಸೀಸ್)

    ರಾಜ್ಯದಲ್ಲಿಂದು 1,464 ಕರೊನಾ ಪ್ರಕರಣ ದೃಢ; ಕೊಪ್ಪಳದಲ್ಲಿ ಎರಡನೇ ದಿನವೂ ಶೂನ್ಯ ಕೇಸ್!

    ಎರಡು ಟಗರಿಗೆ 4.5 ಲಕ್ಷ ರೂಪಾಯಿ! ಎರಡನ್ನೂ ಸೇರಿ 320ಕೆಜಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts