More

    ಎರಡು ಟಗರಿಗೆ 4.5 ಲಕ್ಷ ರೂಪಾಯಿ! ಎರಡನ್ನೂ ಸೇರಿ 320ಕೆಜಿ!

    ಲಖನೌ: ಬಕ್ರೀದ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಬ್ಬ ಆಚರಿಸುವವರೆಲ್ಲರೂ ಮಾರುಕಟ್ಟೆಯಲ್ಲಿ ಕುರಿ ವ್ಯಾಪಾರದಲ್ಲಿ ಬಿಜಿಯಾಗಿದ್ದಾರೆ. ಹೀಗಿರುವಾಗ ಜೋಡಿ ಟಗರುಗಳು ಬರೋಬ್ಬರಿ 4.5 ಲಕ್ಷ ರೂಪಾಯಿ ಮಾರಾಟವಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಈ ರೀತಿಯ ವಿಶೇಷ ವ್ಯಾಪಾತರ ನಡೆದಿದೆ. ಕುರಿ ಸಾಕುವ ವ್ಯಕ್ತಿಯೊಬ್ಬ ಎರಡು ವರ್ಷಗಳಿಂದ ಜೋಡಿ ಟಗರನ್ನು ಸಾಕಿದ್ದಾನೆ. ಪ್ರತಿದಿನ ಅವುಗಳಿಗೆ ಗೋಡಂಬಿ, ಪಿಸ್ತಾ, ಬಾದಾಮಿ, ಸಿಹಿತಿಂಡಿಗಳು ನೀಡಿ ಸಾಕಿದ್ದಾನೆ. ದಿನವೊಂದಕ್ಕೆ ಆ ಟಗರುಗಳ ಪಾಲನೆಗೆ ಬರೋಬ್ಬರಿ 600 ರೂಪಾಯಿ ಖರ್ಚಾಗಿದೆಯಂತೆ.

    ಜೋಡಿ ಟಗರುಗಳನ್ನು ಗೋಮತಿ ಮಾರ್ಕೆಟ್ ಬಳಿಯ ವ್ಯಕ್ತಿಯೊಬ್ಬ ಖರೀದಿಸಿದ್ದಾನೆ. 4.5 ಲಕ್ಷ ರೂಪಾಯಿಗೆ ವ್ಯಾಪಾರ ಮಾಡಲಾಗಿದೆ. ಅದರಲ್ಲಿ ಒಂದು ಟಗರು 170 ಕೆಜಿ ತೂಕವಿದ್ದರೆ ಇನ್ನೊಂದು ಟಗರು 150 ಕೆಜಿ ತೂಕವಿದೆ.

    ಇತ್ತೀಚೆಗೆ ಮಂಡ್ಯದಲ್ಲಿ ಜೋಡಿ ಬಂಡೂರು ಟಗರು 1.25 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು. (ಏಜೆನ್ಸೀಸ್)

    ದ್ವಿತೀಯ ಪಿಯು ರಿಸಲ್ಟ್ ಬಗ್ಗೆ ಸಮಾಧಾನವಿಲ್ಲವೇ? ಇಲ್ಲಿದೆ ನಿಮಗೊಂದು ಅವಕಾಶ

    ಚಿನ್ನದ ಫೆರಾರಿ ಕಾರನ್ನ ಎಲ್ಲಾದರು ಕಂಡಿರಾ? ಆನಂದ್ ಮಹೀಂದ್ರಾ ಸಿಟ್ಟಿಗೆ ಕಾರಣವಾಯ್ತು ಈ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts