More

    ರಾಜ್ಯದಲ್ಲಿಂದು 1,464 ಕರೊನಾ ಪ್ರಕರಣ ದೃಢ; ಕೊಪ್ಪಳದಲ್ಲಿ ಎರಡನೇ ದಿನವೂ ಶೂನ್ಯ ಕೇಸ್!

    ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಶೇ. 1ಕ್ಕಿಂತ ಕಡಿಮೆಯಾಗಿದ್ದ ಕರೊನಾ ಪಾಸಿಟಿವಿಟಿ ಪ್ರಮಾಣ ಇಂದು ಕೊಂಚ ಏರಿಕೆಯಾಗಿದೆ. ರಾಜ್ಯಾದ್ಯಂತ 1,464 ಪ್ರಕರಣಗಳು ಬೆಳಕಿಗೆ ಬಂದಿದ್ದು, ಪಾಸಿಟಿವಿಟಿಪ್ರಮಾಣ ಶೇ. 1.29ಕ್ಕೆ ಹೆಚ್ಚಿದೆ. ಈ ಮೂಲಕ ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 28,86,702ಕ್ಕೆ ಏರಿದೆ.

    ಇಂದು 2,706 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 28,24,197 ಸೋಂಕಿತರು ಗುಣಮುಖರಾದಂತಾಗಿದ್ದು, 26,256 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ರಾಜ್ಯದಲ್ಲಿಂದು 29 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟಾರೆ ಮೃತರ ಸಂಖ್ಯೆ 36,226ಕ್ಕೆ ಏರಿಕೆಯಾಗಿದೆ. ಇಂದಿನ ಕರೊನಾ ಮರಣ ಪ್ರಮಾಣ ಶೇ. 1.98ರಷ್ಟಿದೆ.

    ಇಂದು ಬೆಂಗಳೂರಿನಲ್ಲಿ 352 ಪ್ರಕರಣಗಳು ಕಾಣಿಸಿಕೊಂಡಿವೆ. ಜಿಲ್ಲೆಯ ಒಟ್ಟಾರೆ ಪ್ರಕರಣಗ ಸಂಖ್ಯೆ 12,22,807ಕ್ಕೆ ಹೆಚ್ಚಿದ್ದು ಅದರಲ್ಲಿ 10,046 ಸಕ್ರಿಯ ಪ್ರಕರಣಗಳು ಬಾಕಿಯಿವೆ. ದಕ್ಷಿಣ ಕನ್ನಡದಲ್ಲಿ 200, ಮೈಸೂರಿನಲ್ಲಿ 117 ಹಾಗೂ ಹಾಸನದಲ್ಲಿ 108 ಪ್ರಕರಣಗಳು ದೃಢವಾಗಿವೆ. ಬಾಗಲಕೋಟೆ, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ರಾಮನಗರ, ವಿಜಯಪುರ ಹಾಗೂ ಯಾದಗಿರಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಒಂದಂಕಿಯಲ್ಲಿದೆ. ನಿನ್ನೆ ಒಂದೂ ಪ್ರಕರಣ ಪತ್ತೆಯಾಗಿರದ ಕೊಪ್ಪಳದಲ್ಲಿ ಇಂದೂ ಕೂಡ ಒಂದೂ ಪ್ರಕರಣ ಕಾಣಿಸಿಕೊಂಡಿಲ್ಲ. (ಏಜೆನ್ಸೀಸ್)

    ಎರಡು ಟಗರಿಗೆ 4.5 ಲಕ್ಷ ರೂಪಾಯಿ! ಎರಡನ್ನೂ ಸೇರಿ 320ಕೆಜಿ!

    ದ್ವಿತೀಯ ಪಿಯು ರಿಸಲ್ಟ್ ಬಗ್ಗೆ ಸಮಾಧಾನವಿಲ್ಲವೇ? ಇಲ್ಲಿದೆ ನಿಮಗೊಂದು ಅವಕಾಶ

    ಚಿನ್ನದ ಫೆರಾರಿ ಕಾರನ್ನ ಎಲ್ಲಾದರು ಕಂಡಿರಾ? ಆನಂದ್ ಮಹೀಂದ್ರಾ ಸಿಟ್ಟಿಗೆ ಕಾರಣವಾಯ್ತು ಈ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts