More

    ಪ್ರಿಯತಮೆಗೆ ಗರ್ಭನಿರೋಧಕ ಮಾತ್ರೆ ಕೊಟ್ಟು ಹಸೆಮಣೆ ಏರಿದ ಭೂಪ! ಮದುವೆ ದಿನವೇ ಮಸಣ ಸೇರಿದ ಯುವತಿ

    ಮೀರತ್​: ಯುವಕನೊಬ್ಬ ವರ್ಷಗಳ ಕಾಲ ಯುವತಿಯೊಬ್ಬಳನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ಆಕೆ ಗರ್ಭಿಣಿಯಾದಾಗ ಅವಳಿಗೆ ಗರ್ಭ ನಿರೋಧಕ ಮಾತ್ರೆ ಕೊಟ್ಟು ತಾನು ಮಾತ್ರ ಬೇರೆ ಹುಡುಗಿಯೊಡನೆ ಮದುವೆಯಾಗಲು ಹೊರಟಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಇದನ್ನೂ ಓದಿ: ಮಾನಸಿಕ ಅಸ್ವಸ್ಥ ಗಂಡನೆದುರೇ ನಡೆಯುತ್ತಿತ್ತು ಅತ್ತಿಗೆಯ ಅಫೇರ್​! ವಿಷಯ ಗೊತ್ತಿದ್ದ ಮೈದುನನಿಗೆ ಅತ್ತಿಗೆ ಮಾಡಿದ್ದೇನು?

    24 ವರ್ಷದ ರಾಹುಲ್​ ಯುವತಿಯೊಬ್ಬಳನ್ನು ಪ್ರೀತಿಸುವುದಾಗಿ ನಂಬಿಸಿದ್ದ. ನಾನು ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಹೇಳಿ ಆಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಈ ಮಧ್ಯೆ ರಾಹುಲ್​ಗೆ ಮದುವೆ ನಿಶ್ಚಯವಾಗಿದೆ. ಇನ್ನೊಂದತ್ತ ಆತ ಪ್ರೀತಿಸುತ್ತಿದ್ದ ಯುವತಿಯೂ ಗರ್ಭಿಣಿಯಾಗಿದ್ದಾಳೆ. ಡಿಸೆಂಬರ್​ 7ಕ್ಕೆ ರಾಹುಲ್​ ಮದುವೆ ನಿಶ್ಚಯವಾಗಿತ್ತು. ಆದರೆ ನೀನು ಈ ಮದುವೆಯಾಗುವಂತಿಲ್ಲ. ನಿನ್ನಿಂದಾಗಿ ನಾನು ತಾಯಿ ಆಗುತ್ತಿದ್ದೇನೆ ಎಂದು ಯುವತಿ ಹಠ ಹಿಡಿದು ಕುಳಿತಿದ್ದಾನೆ. ಮಾತು ಕೇಳದ ರಾಹುಲ್​, ಯುವತಿಗೆ ಗರ್ಭ ನಿರೋಧಕ ಮಾತ್ರೆ ಕೊಟ್ಟು ತಿನ್ನಲು ಹೇಳಿದ್ದಾನೆ.

    ಇದನ್ನೂ ಓದಿ: ಮೊಮ್ಮಗಳೊಂದಿಗಿನ ಸ್ನೇಹವನ್ನು ಪ್ರಶ್ನಿಸಿದ್ದಕ್ಕೆ ಅಜ್ಜಿಯ ಕಥೆಯನ್ನೇ ಮುಗಿಸಿಬಿಟ್ಟ! ಲವ್​ ಜಿಹಾದ್​ಗೆ ಅಜ್ಜಿ, ಮೊಮ್ಮಗ ಬಲಿ?

    ಆ ಕ್ಷಣಕ್ಕೆ ಸುಮ್ಮನಾದ ಯುವತಿ ರಾಹುಲ್​ನ ಮದುವೆ ದಿನದಂದೇ ಗರ್ಭ ನಿರೋಧಕ ಮಾತ್ರೆ ಸೇವಿಸಿದ್ದಾಳೆ. ಐದು ತಿಂಗಳ ಗರ್ಭವತಿಯಾಗಿದ್ದ ಯುವತಿ ಮಾತ್ರೆ ಸೇವಿಸಿದ ತಕ್ಷಣ ರಕ್ತಸ್ರಾವ ಆರಂಭವಾಗಿದೆ. ಆಗ ಮನೆಯವರಿಗೆ ವಿಚಾರ ಗೊತ್ತಾಗಿದ್ದು ಆಕೆಯನ್ನು ಮೀರತ್​ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮತ್ತು ಗರ್ಭದಲ್ಲಿದ್ದ ಮಗು ಇಬ್ಬರೂ ಸಾವನ್ನಪ್ಪಿದ್ದಾರೆ. ಈ ವಿಚಾರವಾಗಿ ಯುವತಿಯ ಕುಟುಂಬ ಪೊಲೀಸ್​ ದೂರು ದಾಖಲಿಸಿದ್ದು, ಹಸೆಮಣೆ ಏರಲೊರಟಿದ್ದ ರಾಹುಲ್​ನನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

    ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

    ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts