More

    ಒಂದೇ ದಿನದಲ್ಲಿ 25 ಜನರಲ್ಲಿ ಕರೊನಾ ಸೋಂಕು ಪತ್ತೆ; ಭಾರತದಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾದ ದಿನವಿದು

    ನವದೆಹಲಿ: ಚೀನಾದ ಕರೊನಾ ವೈರಸ್​ ಭಾರತಕ್ಕೆ ಬಂದು ಇಲ್ಲಿನ ಜನರ ಮೇಲೆ ತನ್ನ ದಾಳಿಯನ್ನು ನಡೆಸುತ್ತಿದೆ. ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೈರಸ್​ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿವೆಯಾದರೂ ಜನರ ನಿರ್ಲಕ್ಷ್ಯದಿಂದಾಗಿ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಭಾನುವಾರಂದು ಈವರೆಗಿನ ಹೆಚ್ಚು ಸಂಖ್ಯೆಯಾಗಿ ಭಾರತದಲ್ಲಿ 25 ಜನರಲ್ಲಿ ಸೋಂಕು ಪತ್ತೆಯಾಗಿದೆ.

    ನಿನ್ನೆ (ಮಾ.15) ದೇಶದಲ್ಲಿ 25 ಜನರಲ್ಲಿ ಸೋಂಕು ಇರುವುದು ಧೃಡವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 100ರ ಗಡಿ ದಾಟಿ 110ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ನಿನ್ನೆ 18 ಜನರಲ್ಲಿ ಸೋಂಕಿರುವುದು ಧೃಡವಾಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 32ಕ್ಕೆ ಏರಿದೆ. ಅತಿ ಹೆಚ್ಚು ಸೋಂಕಿತರಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ, 22 ಪ್ರಕರಣದೊಂದಿಗೆ ಕೇರಳ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಆರು ಜನರಲ್ಲಿ ಸೋಂಕಿರುವುದು ಧೃಡವಾಗಿದೆ. ನಿನ್ನೆ ಉತ್ತರಖಂಡದಲ್ಲಿ ಮೊದಲ ಕರೊನಾ ವೈರಸ್​ ಪತ್ತೆಯಾಗಿದೆ.

    ಈವರೆಗೆ ದೇಶದಲ್ಲಿ ವೈರಸ್​ ದಾಳಿಗೆ ಗುರಿಯಾದವರಲ್ಲಿ ಒಟ್ಟು 13 ಜನರನ್ನು ಚಿಕಿತ್ಸೆಯ ಮೂಲಕ ಗುಣಪಡಿಸಿಕೊಳ್ಳಲಾಗಿದೆ. ಕಲಬುರಗಿಯಲ್ಲಿ ಒಬ್ಬ ಮತ್ತು ದೆಹಲಿಯಲ್ಲಿ ಒಬ್ಬಾತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್​)

    ಪ್ರೇಯಸಿಗೆ ಹೊಡೆದ ಯುವಕನಿಗೆ ಕ್ಲಾಸ್​ ತೆಗೆದುಕೊಂಡಿದ್ದ ನೇಹಾ ಧೂಪಿಯಾ ಪತಿಗಿದ್ದಾರಂತೆ ಐವರು ಗರ್ಲ್​ಫ್ರೆಂಡ್ಸ್

    ಈ ವಿಡಿಯೋ ನೋಡಿ ತಲೆಗೆ ಹುಳ ಬಿಟ್ಕೋಬೇಡಿ: ವಿಚಿತ್ರ ಜೀವಿ ನೋಡಿ ತಲೆ ಕೆರೆದುಕೊಂಡು ಏನಿದು ಅಂತಿದ್ದಾರೆ ಕೆಲವರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts