More

    ಹೊಸ ಹೂಡಿಕೆದಾರರಿಗೆ ಫ್ಲೆಕ್ಸಿ ಕ್ಯಾಪ್​ ಮ್ಯೂಚುವಲ್ ಫಂಡ್​ಗಳು ಸೂಕ್ತ ಏಕೆ? ಇವುಗಳು ಸುರಕ್ಷಿತವೇ? ಲಾಭ ಎಷ್ಟು?

    ಮುಂಬೈ: ಅನೇಕ ಮ್ಯೂಚುವಲ್ ಫಂಡ್ ಹೂಡಿಕೆದಾರರು, ವಿಶೇಷವಾಗಿ ಹೊಸ ಮತ್ತು ಅನನುಭವಿ ಹೂಡಿಕೆದಾರರು, ಮಾರುಕಟ್ಟೆಯಲ್ಲಿನ ಪ್ರಸ್ತುತ ಚಂಚಲತೆ ಮತ್ತು ಅನಿಶ್ಚಿತತೆಗಳ ಬಗ್ಗೆ ಹೆಚ್ಚು ಆತಂಕಗೊಳ್ಳುತ್ತಾರೆ. ಅವರು ಲಾರ್ಜ್ ಕ್ಯಾಪ್‌ಗಳ ಮೇಲೆ ಅಥವಾ ಮಿಡ್ ಕ್ಯಾಪ್ ಇಲ್ಲವೇ ಇತರ ಫಂಡ್​ಗಳ ಮೇಲೆ ಬಾಜಿ ಕಟ್ಟಬೇಕೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಅಲ್ಲದೆ, ಮಾರುಕಟ್ಟೆಯ ಮನಸ್ಥಿತಿ ಬದಲಾದಾಗ ಒಂದು ವರ್ಗದಿಂದ ಇನ್ನೊಂದು ವರ್ಗದ ಫಂಡ್​ಗೆ ಯಾವಾಗ ಬದಲಾಯಿಸಬೇಕೆಂದು ಅವರು ಗೊತ್ತಾಗುವುದಿಲ್ಲ.

    ನೀವು ಹೊಸಬರು, ಅನನುಭವಿಗಳೇ ಆಗಿದ್ದೀರಾ? ಹಾಗಿದ್ದರೆ, ಇಲ್ಲೊಂದು ಸುಲಭ ಮಾರ್ಗವಿದೆ. ಫ್ಲೆಕ್ಸಿ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಮಾರ್ಗ.

    ಫ್ಲೆಕ್ಸಿ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಫಂಡ್ ಮ್ಯಾನೇಜರ್‌ಗಳಿಗೆ ಮಾರುಕಟ್ಟೆ ಬಂಡವಾಳೀಕರಣ ಮತ್ತು ವಲಯಗಳ ಕಂಪನಿಗಳಲ್ಲಿ ಹೂಡಿಕೆ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತವೆ. ಇದನ್ನು ಸರಳವಾಗಿ ಹೇಳುವುದಾದರೆ, ಎಲ್ಲ ರೀತಿಯ ಷೇರುಗಳಲ್ಲಿ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಉದಾಹರಣೆ ಲಾರ್ಜ್​ ಕ್ಯಾಪ್ ಮ್ಯೂಚುವಲ್ ಫಂಡ್​ಗಳಲ್ಲಿ ಲಾರ್ಜ್​ ಕ್ಯಾಪ್​ಗಳಲ್ಲಿ (ಬೃಹತ್​ ಕಂಪನಿಯ ಷೇರುಗಳಲ್ಲಿ) ಮಾತ್ರ ಹೂಡಿಕೆ ಮಾಡಲು ಫಂಡ್​ ಮ್ಯಾನೇಜರ್​ಗಳಿಗೆ ಅನುಮತಿ ನೀಡಲಾಗುತ್ತದೆ. ಆದರೆ, ಫ್ಲೆಕ್ಸಿ ಕ್ಯಾಪ್​ ಫಂಡ್​ಗಳು ಲಾರ್ಜ್​, ಮೀಡಿಯಂ, ಸ್ಮಾಲ್​ ಅಥವಾ ಇನ್ನಾವುದೇ ವರ್ಗದ ಷೇರುಗಳಲ್ಲಿ ಹೂಡಿಕೆ ಮಾಡಬಹುದಾಗಿದೆ.

    ಇದರರ್ಥ ಫಂಡ್ ಮ್ಯಾನೇಜರ್‌ಗಳು ಮಾರುಕಟ್ಟೆಯಲ್ಲಿ ತಮ್ಮ ವಿವೇಚನೆ ಬಳಸಿ ಎಲ್ಲಿ ಬೇಕಾದರೂ ಹೂಡಿಕೆ ಮಾಡಬಹುದು. ಈ ಫ್ಲೆಕ್ಸಿಬಿಲಿಟಿಯ ಕಾರಣದಿಂದಾಗಿ ಇದಕ್ಕೆ ಈ ಹೆಸರು ಬಂದಿದೆ.

    ಫ್ಲೆಕ್ಸಿ ಕ್ಯಾಪ್ ಫಂಡ್​ ಯೋಜನೆಗಳನ್ನು ಮಧ್ಯಮ ಹೂಡಿಕೆದಾರರಿಗೆ ದೀರ್ಘಾವಧಿಯಲ್ಲಿ ಸಂಪತ್ತನ್ನು ಸೃಷ್ಟಿಸಲು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ. ತಾತ್ತ್ವಿಕವಾಗಿ, 5ರಿಂದ 7 ವರ್ಷಗಳ ಅವಧಿಯಲ್ಲಿ ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಲಹೆ ನೀಡಲಾಗುತ್ತದೆ.

    ಮೊದಲೇ ಹೇಳಿದಂತೆ, ಈ ಯೋಜನೆಗಳು ಫಂಡ್ ಮ್ಯಾನೇಜರ್‌ನ ದೃಷ್ಟಿಕೋನವನ್ನು ಅವಲಂಬಿಸಿ ಎಲ್ಲಿ ಬೇಕಾದರೂ ಹೂಡಿಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತವೆ. ಹೂಡಿಕೆದಾರರು ಈ ಅಂಶದ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು. ಹೂಡಿಕೆದಾರರು ತಮ್ಮ ಅಪಾಯ ಸಹಿಷ್ಣುತೆಗೆ (ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ) ಅನುಗುಣವಾಗಿ ಯೋಜನೆಯನ್ನು ಆರಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು.

    ನೀವು ಫ್ಲೆಕ್ಸಿ ಕ್ಯಾಪ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಇಂತಹ ಕೆಲವು ಮ್ಯೂಚುವಲ್ ಫಂಡ್​ಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ. ಹೊಸ ವರ್ಷ 2024ರಲ್ಲಿ ಹೂಡಿಕೆ ಮಾಡಲು ಒಂದಿಷ್ಟು ಫ್ಲೆಕ್ಸಿ ಕ್ಯಾಪ್ ಯೋಜನೆಗಳು ಹೀಗಿವೆ. ಇವುಗಳು ಕಳೆದೊಂದು ವರ್ಷದಲ್ಲಿ ಗಳಿಸಿದ ಲಾಭದ ಪ್ರಮಾಣವನ್ನೂ ಇಲ್ಲಿ ನೀಡಲಾಗಿದೆ.

    ಯುಟಿಐ ಫ್ಲೆಕ್ಸಿ ಕ್ಯಾಪ್ ಫಂಡ್ ( ಒಂದು ವರ್ಷದ ಲಾಭ ಶೇಕಡಾ 15.23)
    ಜೆಎಂ ಫ್ಲೆಕ್ಸಿ ಕ್ಯಾಪ್ ಫಂಡ್ 34.39%
    ಬ್ಯಾಂಕ್​ ಆಫ್​ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್ 34.09%
    ಇನ್ವೆಸ್ಕೊ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್ 29.93%
    ನಿಪ್ಪಾನ್​ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್ 28.87%
    ಡಿಎಸ್​ಪಿ ಫ್ಲೆಕ್ಸಿ ಕ್ಯಾಪ್ ಫಂಡ್ 27.52%
    ಮಹಿಂದ್ರಾ ಮೆನುಲೈಫ್​ ಫ್ಲೆಕ್ಸಿ ಕ್ಯಾಪ್ ಫಂಡ್ 27.30%
    ಎಚ್​ಎಸ್​ಬಿಸಿ ಫ್ಲೆಕ್ಸಿ ಕ್ಯಾಪ್ ಫಂಡ್ 26.62%
    ಎಚ್​ಡಿಎಫ್​ಸಿ ಫ್ಲೆಕ್ಸಿ ಕ್ಯಾಪ್ ಫಂಡ್ 26.47%
    ಫ್ರ್ಯಾಂಕ್ಲಿನ್​ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್ 25.32%
    ಬರೋಡಾ ಬಿಎನ್​ಪಿ ಪರಿಬಾಸ್​ ಫ್ಲೆಕ್ಸಿ ಕ್ಯಾಪ್ ಫಂಡ್ 23.03%
    ಆದಿತ್ಯ ಬಿರ್ಲಾ ಸನ್ ಲೈಫ್ ಫ್ಲೆಕ್ಸಿ ಕ್ಯಾಪ್ ಫಂಡ್ (20.84%)
    ಬಂಧನ್​ ಫ್ಲೆಕ್ಸಿ ಕ್ಯಾಪ್ ಫಂಡ್ 19.73%
    ಕೆನರಾ ರೊಬೆಕೊ ಫ್ಲೆಕ್ಸಿ ಕ್ಯಾಪ್ ಫಂಡ್ 19.20%
    ಆಕ್ಸಿಸ್ ಫ್ಲೆಕ್ಸಿ ಕ್ಯಾಪ್ ಫಂಡ್ 16.70%

    ಕರಡಿಯನ್ನು ಓಡಿಸಿದ ಗೂಳಿಯ ಗುಟುರು: ಚೇತರಿಸಿದ ಸೂಚ್ಯಂಕದಲ್ಲಿ ಲಾಭ ಮಾಡಿದ ಷೇರುಗಳು ಯಾವವು?

    ತಾಜ್​ ಮಹಲ್​ಗೊಂದು ಪ್ರತಿಸ್ಪರ್ಧಿ: ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಮಸೀದಿ ಬಗ್ಗೆ ಬಿಜೆಪಿ ಮುಖಂಡ ನೀಡಿದ ವಿವರಗಳು ಕುತೂಹಲಕಾರಿ

    ಗುರುವಾರ ಮತ್ತೆ ಮೂವರು ಸಂಸದರ ಅಮಾನತು: ಸಸ್ಪೆಂಡ್ ಆದ ಸಂಸದರ ಸಂಖ್ಯೆ ಎಷ್ಟು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts