More

    ತಾಜ್​ ಮಹಲ್​ಗೊಂದು ಪ್ರತಿಸ್ಪರ್ಧಿ: ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಮಸೀದಿ ಬಗ್ಗೆ ಬಿಜೆಪಿ ಮುಖಂಡ ನೀಡಿದ ವಿವರಗಳು ಕುತೂಹಲಕಾರಿ

    ಅಯೋಧ್ಯೆ: ಇಲ್ಲಿನ ಧನ್ನಿಪುರ ಗ್ರಾಮದಲ್ಲಿ ಐದು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಮಸೀದಿಯು ತಾಜ್ ಮಹಲ್‌ಗಿಂತಲೂ ಆಕರ್ಷಕವಾಗಿರಲಿದೆ.

    ಬಿಜೆಪಿ ಮುಖಂಡ ಮತ್ತು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಜಿ ಅರ್ಫಾತ್ ಶೇಖ್ ಅವರು ಗುರುವಾರ ಹೇಳಿದ್ದಾರೆ.

    ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಿಂದ ಕೇವಲ 25 ಕಿಮೀ ಅಂತರದಲ್ಲಿ ಈ ಮಸೀದಿಯನ್ನು ನಿರ್ಮಿಸಲಾಗುತ್ತಿದೆ.

    ಅಯೋಧ್ಯೆಯ ವಿವಾದಿತ ರಾಮ ಜನ್ಮಭೂಮಿ-ಬಾಬರಿ ಮಸೀದಿ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಳೆದ ವರ್ಷ ನವೆಂಬರ್ 9 ರಂದು ಸುಪ್ರೀಂ ಕೋರ್ಟ್ ದಾರಿ ಮಾಡಿಕೊಟ್ಟಿತ್ತು. ಅಲ್ಲದೆ, ಉತ್ತರ ಪ್ರದೇಶದ ಪಟ್ಟಣದಲ್ಲಿರುವ “ಪ್ರಮುಖ” ಸ್ಥಳದಲ್ಲಿ ಹೊಸ ಮಸೀದಿ ನಿರ್ಮಾಣಕ್ಕಾಗಿ.ಸುನ್ನಿ ವಕ್ಫ್ ಮಂಡಳಿಗೆ ಪರ್ಯಾಯವಾಗಿ 5 ಎಕರೆ ಜಾಗವನ್ನು ನೀಡಲು ಕೇಂದ್ರಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ಐದು ಎಕರೆ ಮಂಜೂರು ಮಾಡಿತು.

    ಹೊಸ ಮಸೀದಿಯು ಭಾರತದಲ್ಲಿಯೇ ಅತಿ ದೊಡ್ಡ ಮಸೀದಿಯಾಗಲಿದೆ, ವಿಶ್ವದ ಅತಿ ದೊಡ್ಡದಾದ 21 ಅಡಿ ಎತ್ತರ ಮತ್ತು 36 ಅಡಿ ಅಗಲದ ಕೇಸರಿ ಬಣ್ಣದ ಕುರಾನ್ ಹೊಂದಲಿದೆ ಎಂದು ಹಾಜಿ ಅರ್ಫಾತ್ ಶೇಖ್ ಹೇಳಿದರು.

    ಈ ಮಸೀದಿಯಲ್ಲಿ ಮೊದಲ ಪ್ರಾರ್ಥನೆಯನ್ನು ಮೆಕ್ಕಾದ ಇಮಾಮ್ ಇಮಾಮ್-ಎ-ಹರಾಮ್ ಅಬ್ದುಲ್ ರಹಮಾನ್ ಎಐ-ಸುಡೈಸ್ ಸಲ್ಲಿಸಲಿದ್ದಾರೆ.

    “ಈ ಮಸೀದಿಯು ತಾಜ್ ಮಹಲ್‌ಗಿಂತ ಹೆಚ್ಚು ಸುಂದರವಾಗಿರುತ್ತದೆ ಎಂದು ನಮಗೆ ವಿಶ್ವಾಸವಿದೆ. ಇದು ‘ದವಾ ಮತ್ತು ದುವಾ’ದ (ಔಷಧ ಮತ್ತು ಹಾರೈಕೆ) ಕೇಂದ್ರವಾಗುತ್ತದೆ. ಏಕೆಂದರೆ, ಇದು ಜನರಿಗೆ ನಮಾಜ್ ಮಾಡಲು ಅವಕಾಶ ನೀಡುವುದು ಮಾತ್ರವಲ್ಲದೆ 500 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆಯನ್ನು ಹೊಂದುವ ಮೂಲಕ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಉತ್ತರಪ್ರದೇಶದಿಂದ ಯಾರೂ ಕ್ಯಾನ್ಸರ್ ಚಿಕಿತ್ಸೆಗಾಗಿ ಮುಂಬೈಗೆ ಹೋಗಬೇಕಾಗುವುದಿಲ್ಲ” ಎಂದು ಹಾಜಿ ಅರ್ಫತ್ ಶೇಖ್ ಹೇಳಿದರು.

    ಇದು ದಂತ, ವೈದ್ಯಕೀಯ ಮತ್ತು ಇಂಜಿನಿಯರಿಂಗ್‌ ಕಾಲೇಜುಗಳನ್ನು ಸಹ ಹೊಂದಲಿದೆ. ಎಲ್ಲರಿಗೂ ವೆಜ್ ಲಂಗರ್ (ಅಡುಗೆ ಮನೆ) ಸೌಲಭ್ಯವೂ ಇರುತ್ತದೆ. ಎಲ್ಲಾ ಸಮುದಾಯದ ಜನರು ಊಟ ಮಾಡುವ ಮೊಟ್ಟ ಮೊದಲ ಮಸೀದಿ ಇದಾಗಲಿದೆ. ಒಂದೇ ಬಾರಿಗೆ 5,000 ಜನರು ಒಟ್ಟಿಗೆ ಊಟ ಮಾಡುವ ಸೌಲಭ್ಯ ಇಲ್ಲಿರಲಿದೆ ಎಂದು ಅವರು ವಿವರಿಸಿದರು.

    ಗುರುವಾರ ಮತ್ತೆ ಮೂವರು ಸಂಸದರ ಅಮಾನತು: ಸಸ್ಪೆಂಡ್ ಆದ ಸಂಸದರ ಸಂಖ್ಯೆ ಎಷ್ಟು ಗೊತ್ತೆ?

    23 ಸಾವು, 358 ಹೊಸ ಕೋವಿಡ್ ಪ್ರಕರಣ: ಮಾಸ್ಕ್, ಆರ್‌ಟಿ-ಪಿಸಿಆರ್ ಟೆಸ್ಟ್​, ಮೂರನೇ ಡೋಸ್​ ಕಡ್ಡಾಯವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts