More

    ಗುರುವಾರ ಮತ್ತೆ ಮೂವರು ಸಂಸದರ ಅಮಾನತು: ಸಸ್ಪೆಂಡ್ ಆದ ಸಂಸದರ ಸಂಖ್ಯೆ ಎಷ್ಟು ಗೊತ್ತೆ?

    ನವದೆಹಲಿ: ಡಿಸೆಂಬರ್ 13 ರಂದು ಜರುಗಿದ ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳಿಗೆ ಅಡ್ಡಿಪಡಿಸಿದ ಮತ್ತು ಘೋಷಣೆಗಳನ್ನು ಕೂಗಿದ ಕಾರಣಕ್ಕಾಗಿ ಸಂಸದರನ್ನು ಅಮಾನತುಗೊಳಿಸುವ ಕ್ರಮವು ಗುರುವಾರವೂ ಮುಂದುವರಿಯಿತು. 140ಕ್ಕೂ ಹೆಚ್ಚು ವಿರೋಧ ಪಕ್ಷದ ಸಂಸದರನ್ನು ಡಿಸೆಂಬರ್ 14 ರಿಂದ ಅಮಾನತುಗೊಳಿಸಲಾಗಿದೆ.

    ಕಾಂಗ್ರೆಸ್​ನ ಮೂವರು ಸಂಸದರಾದ ದೀಪಕ್ ಬೈಜ್, ನಕುಲ್ ನಾಥ್, ಡಿಕೆ ಸುರೇಶ್ ಅವರನ್ನು ಗುರುವಾರ ಲೋಕಸಭೆಯಿಂದ ಅಮಾನತುಗೊಳಿಸಲಾಗಿದ್ದು, ಸಂಸತ್ತಿನಲ್ಲಿ ಅಮಾನತುಗೊಂಡಿರುವ ಪ್ರತಿಪಕ್ಷಗಳ ಒಟ್ಟು ಸದಸ್ಯರ ಸಂಖ್ಯೆ ಈ ಮೂಲಕ 146ಕ್ಕೆ ಏರಿಕೆಯಾಗಿದೆ.

    ಗುರುವಾರ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸದನದಲ್ಲಿ ಪ್ರತಿಭಟನೆ ನಡೆಸದಂತೆ ಮೂವರು ಕಾಂಗ್ರೆಸ್ ಸಂಸದರಿಗೆ ಎಚ್ಚರಿಕೆ ನೀಡಿದರು. ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗಿದರು. ಪ್ರಶ್ನೋತ್ತರ ಅವಧಿ ಮುಗಿದ ಕೂಡಲೇ ಸ್ಪೀಕರ್ ಪ್ರತಿಭಟನಾನಿರತ ಸದಸ್ಯರಿಗೆ ಎಚ್ಚರಿಕೆ ನೀಡಿ, ಮೂವರು ಕಾಂಗ್ರೆಸ್ ಸಂಸದರನ್ನು ಹೆಸರಿಸಿದರು.

    ಡಿಸೆಂಬರ್ 4 ರಂದು ಚಳಿಗಾಲದ ಅಧಿವೇಶನ ಆರಂಭವಾಗಿದೆ. ಡಿಸೆಂಬರ್ 14 ರಂದು 14 ಸಂಸದರನ್ನು ಅಮಾನತುಗೊಳಿಸಲಾಗಿದೆ, ಡಿ. 18ರಂದು 78 ಮತ್ತು ಡಿ. 19ರಂದು 49 ಮತ್ತು ಈಗ ಇನ್ನೂ ಇಬ್ಬರನ್ನು ಅಮಾನತುಗೊಳಿಸಲಾಗಿದೆ.

    ವಿರೋಧ ಪಕ್ಷಗಳ ಸಂಸದರ ಪ್ರತಿಭಟನೆ:

    ಪ್ರತಿಪಕ್ಷದ ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಇಂಡಿಯಾ ಮೈತ್ರಿಕೂಟದ ಸಂಸದರು ಗುರುವಾರ ಸಂಸತ್ತಿನಿಂದ ದೆಹಲಿಯ ವಿಜಯ್ ಚೌಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

    23 ಸಾವು, 358 ಹೊಸ ಕೋವಿಡ್ ಪ್ರಕರಣ: ಮಾಸ್ಕ್, ಆರ್‌ಟಿ-ಪಿಸಿಆರ್ ಟೆಸ್ಟ್​, ಮೂರನೇ ಡೋಸ್​ ಕಡ್ಡಾಯವೇ?

    ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣ: ಬಂಧಿತರ ಕಸ್ಟಡಿ ಜ. 5ರವರೆಗೆ ವಿಸ್ತರಿಸಿದ್ದೇಕೆ?

    ಚುನಾವಣಾ ಆಯುಕ್ತರ ನೇಮಕಾತಿ ಮಸೂದೆಗೆ ಲೋಕಸಭೆ ಅಸ್ತು: ವಿವಾದಾತ್ಮಕ ಹೊಸ ಕಾನೂನು ಏನು ಹೇಳುತ್ತದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts