More

    ಕರಡಿಯನ್ನು ಓಡಿಸಿದ ಗೂಳಿಯ ಗುಟುರು: ಚೇತರಿಸಿದ ಸೂಚ್ಯಂಕದಲ್ಲಿ ಲಾಭ ಮಾಡಿದ ಷೇರುಗಳು ಯಾವವು?

    ನವದೆಹಲಿ: ದಲಾಲ್​ ಸ್ಟ್ರೀಟ್​ನಲ್ಲಿ ಕರಡಿ ಹಾಗೂ ಗೂಳಿಯ ನಡುವೆ ತೀವ್ರ ಕಾಳಗ ನಡೆಯಿತು. ಕೊನೆಯಲ್ಲಿ ಗೂಳಿಯೇ ಮೇಲುಗೈ ಸಾಧಿಸಿತು.ಷೇರು ಮಾರುಕಟ್ಟೆಯ ಏರುಮುಖವನ್ನು ಗೂಳಿಯಾಗಿ, ಇಳಿಮುಖವನ್ನು ಕರಡಿಯಾಗಿ ಪರಿಗಣಿಸಲಾಗುತ್ತದೆ.

    ಗುರುವಾರದ ಆರಂಭಿಕ ವಹಿವಾಟಿನಲ್ಲಿ ಕರಡಿ ಹಿಡಿತ ಹೆಚ್ಚಾಗಿ ಷೇರುಗಳ ಸೂಚ್ಯಂಕ ಕುಸಿತದತ್ತ ಸಾಗಿತ್ತು. ಮಧ್ಯಾಹ್ನದ ನಂತರದ ವಹಿವಾಟಿನಲ್ಲಿ ಗೂಳಿಯು ಗುಟುರು ಹಾಕಿದ್ದರಿಂದ ಚೇತರಿಕೆ ಕಂಡಿತು.

    ಅಂತಿಮವಾಗಿ ಎಸ್ & ಪಿ ಬಿಎಸ್‌ಇ ಸೂಚ್ಯಂಕ 358.79 ಅಂಕ ಅಥವಾ ಶೇಕಡಾ 0.51 ಏರಿಕೆ ಕಂಡು 70,865.10 ಕ್ಕೆ ತಲುಪಿದರೆ; ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 104.90 ಅಂಕಗಳ ಶೇಕಡಾ 0.50 ಏರಿಕೆ ಕಂಡು 21,255.05 ಕ್ಕೆ ಸ್ಥಿರವಾಯಿತು.

    ಪ್ರಮುಖ ವಲಯದ ಸೂಚ್ಯಂಕಗಳಾದ ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಫೈನಾನ್ಶಿಯಲ್ ಸರ್ವಿಸಸ್ ಕ್ರಮವಾಗಿ ಶೇ.0.8 ಮತ್ತು ಶೇ.0.6ರಷ್ಟು ಏರಿಕೆ ಕಂಡಿವೆ. ನಿಫ್ಟಿ ಆಯಿಲ್ & ಗ್ಯಾಸ್ ಶೇ. 1.73 ರಷ್ಟು ಏರಿಕೆ ಕಂಡಿತು.

    ಪ್ರಮುಖ ಷೇರುಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಖರೀದಿಯ ನಂತರ ಸೂಚ್ಯಂಕಗಳು ಚೇತರಿಕೆ ಕಂಡವು.

    ಪವರ್ ಗ್ರಿಡ್, ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಎನ್‌ಟಿಪಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಿಪಿಸಿಎಲ್, ಬ್ರಿಟಾನಿಯಾ, ಅಪೊಲೊ ಹಾಸ್ಪಿಟಲ್ಸ್, ಟಾಟಾ ಸ್ಟೀಲ್ ಮತ್ತು ಭಾರ್ತಿ ಏರ್‌ಟೆಲ್ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು.

    ಬಜಾಜ್ ಆಟೋ, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಎಚ್‌ಸಿಎಲ್ ಟೆಕ್ ಮತ್ತು ಮಹೀಂದ್ರಾ ಮತ್ತು ಮಹೀಂದ್ರಾ, ಸಿಪ್ಲಾ ಷೇರುಗಳು ನಷ್ಟ ಅನುಭವಿಸಿದವು.

    ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್ ಮತ್ತು ಟೋಕಿಯೊ ಕುಸಿತ ಕಂಡರೆ, ಶಾಂಘೈ ಮತ್ತು ಹಾಂಗ್ ಕಾಂಗ್ ಲಾಭ ಮಾಡಿದವು.

    ಐರೋಪ್ಯ ಮಾರುಕಟ್ಟೆಗಳು ಲಾಭದಲ್ಲಿ ವಹಿವಾಟು ನಡೆಸಿದರೆ, ಅಮೆರಿಕದ ಮಾರುಕಟ್ಟೆಗಳು ಬುಧವಾರ ಕುಸಿತ ಕಂಡವು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 1,322.08 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಕೋವಿಡ್ ಪ್ರಕರಣಗಳ ಹೆಚ್ಚಳ, ವಿದೇಶಿ ಹೂಡಿಕೆ ಮಾರಾಟ ಮತ್ತು ಲಾಭ ಮಾಡಿಕೊಳ್ಳಲು ಹೂಡಿಕೆದಾರರ ಮಾರಾಟ ಮುಂತಾದ ಸಂಗತಿಗಳ ಕಾರಣ ಬುಧವಾರ ಷೇರು ಮಾರುಕಟ್ಟೆಗಳ ಮೇಲೆ ಒತ್ತಡ ಸಾಕಷ್ಟಿತ್ತು, ಆದರೆ, ಗುರುವಾರದ ಚೇತರಿಕೆಯು ಹೂಡಿಕೆದಾರರು ಸಕಾರಾತ್ಮಕವಾಗಿಯೇ ಮುಂದುವರಿದಿರುವುದನ್ನು ಸೂಚಿಸುತ್ತದೆ.

    ತಾಜ್​ ಮಹಲ್​ಗೊಂದು ಪ್ರತಿಸ್ಪರ್ಧಿ: ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಮಸೀದಿ ಬಗ್ಗೆ ಬಿಜೆಪಿ ಮುಖಂಡ ನೀಡಿದ ವಿವರಗಳು ಕುತೂಹಲಕಾರಿ

    ಗುರುವಾರ ಮತ್ತೆ ಮೂವರು ಸಂಸದರ ಅಮಾನತು: ಸಸ್ಪೆಂಡ್ ಆದ ಸಂಸದರ ಸಂಖ್ಯೆ ಎಷ್ಟು ಗೊತ್ತೆ?

    23 ಸಾವು, 358 ಹೊಸ ಕೋವಿಡ್ ಪ್ರಕರಣ: ಮಾಸ್ಕ್, ಆರ್‌ಟಿ-ಪಿಸಿಆರ್ ಟೆಸ್ಟ್​, ಮೂರನೇ ಡೋಸ್​ ಕಡ್ಡಾಯವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts