More

    ಯುದ್ಧ ಮುಗಿದ ಬಳಿಕ ಗಾಜಾದಲ್ಲಿ ಯಾರು ಆಡಳಿತ ನಡೆಸುತ್ತಾರೆ? ಇಸ್ರೇಲ್​ ಪ್ರಧಾನಿ ಹೇಳಿದ್ದಿಷ್ಟು…

    ಟೆಲ್​ ಅವಿವ್​: ಪ್ಯಾಲೆಸ್ತೀನ್​ನ ಹಮಾಸ್​ ವಿರುದ್ಧ ಇಸ್ರೇಲ್​ ನಡೆಸುತ್ತಿರುವ ಯುದ್ಧವು ಕೊನೆಯಾದ ಬಳಿಕ ಗಾಜಾದಲ್ಲಿ ಯಾರು ಆಡಳಿತ ನಡೆಸುತ್ತಾರೆ? ಈ ಪ್ರಶ್ನೆಗೆ ಐದು ವಾರಗಳ ಹೋರಾಟದ ನಂತರವೂ ಈವರೆಗೂ ಯಾವುದೇ ಉತ್ತರ ಸಿಗದೆ ಗೊಂದಲದಲ್ಲಿಯೇ ಇದು ಮುಚ್ಚಿಹೋಗಿದೆ.

    ಅಂದಹಾಗೆ ಪ್ಯಾಲೆಸ್ತೀನ್​ನ ಉಗ್ರ ಸಂಘಟನೆ ಹಮಾಸ್​, 2007ರಿಂದಲೂ ಸುಮಾರು 2.4 ಮಿಲಿಯನ್​ ಜನರಿರುವ ಗಾಜಾ ಪಟ್ಟಿಯಲ್ಲಿ ಆಡಳಿತ ನಡೆಸುತ್ತಿತ್ತು. ಪ್ಯಾಲೆಸ್ತೀನ್​ನ ಆಡಳಿತದೊಂದಿಗೆ ಬೀದಿ ಯುದ್ಧಗಳ ಬಳಿಕ ಹಮಾಸ್ 2007ರಂದು ಗಾಜಾ ಅಧಿಕಾರವನ್ನು ವಶಪಡಿಸಿಕೊಂಡಿತು.

    ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಕಳೆದ ತಿಂಗಳ ಕೊನೆಯಲ್ಲಿ ಹಮಾಸ್‌ನಿಂದ ಗಾಜಾ ಪಟ್ಟಿಯ ನಿಯಂತ್ರಣವನ್ನು ಪ್ಯಾಲೆಸ್ತೀನ್​ ಆಡಳಿತ ಹಿಂಪಡೆಯಬೇಕು ಎಂದು ಹೇಳಿದರು. ಪ್ರಸ್ತುತ ಪ್ಯಾಲೆಸ್ತೀನ್​ ಆಡಳಿತವೂ ಇಸ್ರೇಲಿ-ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಭಾಗಶಃ ಆಡಳಿತಾತ್ಮಕ ನಿಯಂತ್ರಣವನ್ನು ಹೊಂದಿದೆ. ಬ್ಲಿಂಕನ್​ ಹೇಳಿದ ಮಾತಿಗೆ ಈ ತಿಂಗಳ ಆರಂಭದಲ್ಲಿ ಅವರೊಂದಿಗೆ ನಡೆದ ಸಭೆಯಲ್ಲಿ ಪ್ಯಾಲೆಸ್ತೀನ್ ಅಧ್ಯಕ್ಷ ಮಹ್ಮದ್ ಅಬ್ಬಾಸ್ ಪ್ರತಿಕ್ರಿಯೆ ನೀಡಿದರು. ಪಶ್ಚಿಮ ದಂಡೆ, ಪೂರ್ವ ಜೆರುಸಲೆಮ್ ಮತ್ತು ಗಾಜಾ ಪಟ್ಟಿ ಒಳಗೊಂಡಂತೆ ದಶಕಗಳಷ್ಟು ಹಳೆಯದಾದ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷಕ್ಕೆ “ಸಮಗ್ರ ರಾಜಕೀಯ ಪರಿಹಾರ” ಕಂಡುಬಂದರೆ ಮಾತ್ರ ನಾವು ಗಾಜಾದಲ್ಲಿ ಅಧಿಕಾರವನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು. ಇದರ ನಡುವೆ ಕಳೆದ ಬುಧವಾರ ಬ್ಲಿಂಕೆನ್ ಮತ್ತೊಮ್ಮೆ ಪ್ಯಾಲೆಸ್ತೀನ್​ ಆಡಳಿತಕ್ಕೆ ಪಶ್ಚಿಮ ದಂಡೆಯೊಂದಿಗೆ ಏಕೀಕೃತ ಗಾಜಾ ಕುರಿತು ಮಾತನಾಡಿದರು.

    ಇನ್ನು 18 ವರ್ಷಗಳ ಕಾಲ ಪ್ಯಾಲೆಸ್ತೀನ್​ ಸರ್ಕಾರದ ನೇತೃತ್ವ ವಹಿಸಿದ 88 ವರ್ಷದ ಅಬ್ಬಾಸ್, ಅಷ್ಟೊಂದು ಪ್ರಬಲ ನಾಯಕರಲ್ಲ. ಇಸ್ರೇಲಿ ವಸಾಹತುಗಳ ತ್ವರಿತ ವಿಸ್ತರಣೆ ಮತ್ತು ಪಶ್ಚಿಮ ದಂಡೆಯಲ್ಲಿ ಮಿಲಿಟರಿ ನಿಯಂತ್ರಣ ಹಾಗೂ ಪೂರ್ವ ಜೆರುಸಲೆಮ್ ಅನ್ನು ಸ್ವಾಧೀನಪಡಿಸಿಕೊಳ್ಳುವ ವಿರುದ್ಧ ಅಬ್ಬಾಸ್​ ಅವರು ಶಕ್ತಿಹೀನರಾಗಿದ್ದಾರೆ.

    ಗಾಜಾ ಆಕ್ರಮಿಸುವ ಯೋಜನೆ ಇಲ್ಲ
    ಗಾಜಾವನ್ನು ತಮ್ಮ ವಶಕ್ಕೆ ಪಡೆಯುವ ಕುರಿತು ಸ್ಪಷ್ಟನೆ ನೀಡಿರುವ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೇತನ್ಯಾಹು, ಗಾಜಾವನ್ನು ಮತ್ತೆ ಆಕ್ರಮಿಸಿಕೊಳ್ಳುವ ಯಾವುದೇ ಪ್ಲ್ಯಾನ್​ ಅನ್ನು ನಾವು ಮಾಡಿಲ್ಲ. ಗಾಜಾದಲ್ಲಿ ಆಡಳಿತ ನಡೆಸುವ ಆಲೋಚನೆ ಸಹ ಇಲ್ಲ. ಆಕ್ರಮಿಸಿಕೊಳ್ಳಲು ನೋಡದೆ, ಅದಕ್ಕೆ ಉತ್ತಮ ಭವಿಷ್ಯವನ್ನು ನೀಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

    ಅಂದಹಾಗೆ ಇಸ್ರೇಲ್​ 1967ರಲ್ಲಿ ಗಾಜಾವನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. 2005 ರಲ್ಲಿ ಗಾಜಾವನ್ನು ಪ್ಯಾಲೆಸ್ತೀನ್​ ವಶಕ್ಕೆ ಬಿಟ್ಟುಕೊಟ್ಟಿತು. ಗಾಜಾದ ಭವಿಷ್ಯದ ಬಗ್ಗೆ ಮಾತನಾಡಿರುವ ನೇತನ್ಯಾಹು, ಬಡ ಮತ್ತು ದಿಗ್ಬಂಧನ ಪ್ರದೇಶವನ್ನು ಸೈನ್ಯರಹಿತಗೊಳಿಸಬೇಕು, ಮತ್ತು ಮರುನಿರ್ಮಾಣ ಮಾಡಬೇಕು ಎಂದು ಹೇಳಿದ್ದಾರೆ.

    ಅಕ್ಟೋಬರ್ 7ರಂದು ಇಸ್ರೇಲ್​ ಮೇಲೆ ಹಮಾಸ್​ 5 ಸಾವಿರ ರಾಕೆಟ್​ಗಳಿಂದ ದಿಢೀರ್​ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇಸ್ರೇಲ್​ ಹಮಾಸ್​ ವಿರುದ್ಧ ನಿರಂತರವಾಗಿ ದಾಳಿ ಮಾಡುತ್ತಿದೆ. ಹಮಾಸ್​ ಮತ್ತು ಇಸ್ರೇಲ್​ ನಡುವಿನ ಯುದ್ಧ ಒಂದು ತಿಂಗಳು ಕಳೆದಿದೆ. ಈವರೆಗೂ ಯುದ್ಧದಲ್ಲಿ 11 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್​)

    ಹೀನಾಯ ಸೋಲಿನೊಂದಿಗೆ ವಿಶ್ವಕಪ್​ನಿಂದ ಹೊರಬಿದ್ದ ಪಾಕ್​: ಗೆಲುವಿನೊಂದಿಗೆ ಆಂಗ್ಲರ ಪ್ರವಾಸ ಅಂತ್ಯ

    2019ರ ಸೋಲಿನ ಮುಖಭಂಗ! ಕಿವೀಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಸುವರ್ಣಾವಕಾಶ

    ವಿರಾಟ್ ಕೊಹ್ಲಿಗೆ ಮರುಜನ್ಮ ನೀಡಿದ ಸೂಪರ್ ಮ್ಯಾನ್ ಇವರೆ ನೋಡಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts