More

    2019ರ ಸೋಲಿನ ಮುಖಭಂಗ! ಕಿವೀಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಸುವರ್ಣಾವಕಾಶ

    ನವದೆಹಲಿ: ನಾಲ್ಕು ವರ್ಷದ ಹಿಂದೆ ಅಂದರೆ, 2019ರ ಏಕದಿನ ವಿಶ್ವಕಪ್​ ಟೂರ್ನಿಯ ಸಮಿಫೈನಲ್​ ಪಂದ್ಯವನ್ನು ಮರು ನೆನಪು ಮಾಡಿಕೊಳ್ಳುವ ಕ್ಷಣ ಇದೀಗ ಮರುಕಳಿಸಿದೆ. ಆ ಪಂದ್ಯವನ್ನು ಎಂದಿಗೂ ಮರೆಯುವಂತಿಲ್ಲ. ಅಂದು ನ್ಯೂಜಿಲೆಂಡ್​ ಪಡೆ ಇಂಗ್ಲೆಂಡ್​ ನೆಲದಲ್ಲಿ ಭಾರತವನ್ನು ಮಣಿಸಿ, ವಿಶ್ವಕಪ್​ ಟೂರ್ನಿಯಿಂದ ಹೊರಗಟ್ಟಿತ್ತು. ಅಂದು ಕೊಹ್ಲಿ ನಾಯಕರಾಗಿದ್ದರು. ಈ ಸೋಲಿಗೆ ಇಂದು ಪ್ರತೀಕಾರ ತೀರಿಸಿಕೊಳ್ಳುವ ಸಮಯ ಬಂದಿದೆ.

    ಹೌದು, ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ಮೊದಲ ಸೆಮಿಫೈನಲ್​ ಪಂದ್ಯ ನಡೆಯಲಿದೆ. ಇದು 2019ರ ಸಮಿಫೈನಲ್​ ಪಂದ್ಯದ ಮರು ಪಂದ್ಯ ಎಂದೇ ಬಿಂಬಿತವಾಗಿದೆ. ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್​ ಆಯೋಜಿಸಿದ್ದ ಟೂರ್ನಿಯಲ್ಲಿ ಕಿವೀಸ್​ ಮತ್ತು ಇಂಡಿಯಾ ಓಲ್ಡ್​ ಟ್ರಾಫೋರ್ಡ್​ ಕ್ರೀಡಾಂಗಣದಲ್ಲಿ ನಡೆದ ಸಮಿಫೈನಲ್​ ಪಂದ್ಯದಲ್ಲಿ ಸೆಣಸಾಡಿತ್ತು. ಈ ವೇಳೆ ಮೊದಲು ಬ್ಯಾಟ್​ ಮಾಡಿದ್ದ ಕಿವೀಸ್​ ಪಡೆ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 239 ರನ್​ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಇಂಡಿಯಾ 221 ರನ್​ಗಳಿಗೆ ಸರ್ವಪತನ ಕಂಡು ಸೋಲಿನೊಂದಿಗೆ ವಿಶ್ವಕಪ್​ ಅಭಿಯಾನವನ್ನು ಮಗಿಸಿತು. ಅಂದು ಭಾರತದ ಎದುರು ಕಿವೀಸ್​ ರಣಕೇಕೆ ಹಾಕಿತ್ತು.

    ಪ್ರತೀಕಾರದ ಸಮಯ
    ಅಂದಿನ ಸೋಲಿಗೆ ಇದೀಗ ಪ್ರತೀಕಾರ ತೀರಿಸಿಕೊಳ್ಳುವ ಸಮಯಬಂದಿದೆ. ನ. 15ರಂದು ನಡೆಯಲಿರುವ ಪಂದ್ಯಕ್ಕೆ ಭಾರತ ತಂಡ ಎದುರು ನೋಡುತ್ತಿದೆ. ಪಾಕ್​​ ಸ್ಥಾನ ತನ್ನ ರನ್​ರೇಟ್​ ಹಿಗ್ಗಿಸಿಕೊಳ್ಳಲು ವಿಫಲವಾದ್ದರಿಂದ ನ್ಯೂಜಿಲೆಂಡ್​ ಪಡೆದ ಸೆಮೀಸ್​ ಸ್ಥಾನ ಖಚಿತವಾಗಿದ್ದು, ಭಾರತದ ವಿರುದ್ಧ ನಾಕೌಟ್​ ಹಂತದಲ್ಲಿ ಸೆಣಸಾಡಲು ಸನ್ನದ್ಧವಾಗುತ್ತಿದೆ. ತವರು ನೆಲದಲ್ಲಿ ಭಾರತ ಕಿವೀಸ್​ ಪಡೆಯನ್ನು ಬಗ್ಗುಬಡಿಯುತ್ತಾ ಕಾದು ನೋಡಬೇಕಿದೆ. ಈ ಕ್ಷಣಕ್ಕಾಗಿ ಭಾರತದ ಕ್ರೀಡಾಭಿಮಾನಿಗಳು ಎದುರು ನೋಡುತ್ತಿದೆ. ಸೆಮೀಸ್​ನಿಂದ ನಮ್ಮನ್ನು ಕಳಹಿಸಿದ್ದ ನ್ಯೂಜಿಲೆಂಡ್ ಪಡೆಯನ್ನು ಇಂದು ಸಮೀಸ್​ನಿಂದಲೇ ಕಳುಹಿಸುವ ಅವಕಾಶ ಸಿಕ್ಕಿರುವುದು ನ.15ರಂದು ನಡೆಯುವ ಪಂದ್ಯದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.

    ಕೊಹ್ಲಿಗೂ ಇದು ಸುಸಂದರ್ಭ
    ಕೊಹ್ಲಿ ನಾಯಕತ್ವದಲ್ಲಿ ಸಮಿಫೈನಲ್​ನಿಂದ ಭಾರತ ಹೊರಬಿದ್ದಿದ್ದು, ಕೊಹ್ಲಿಗೂ ಕೂಡ ತುಂಬಾ ನೋವು ಉಂಟು ಮಾಡಿತ್ತು.​ ಅಲ್ಲದೆ, ಆ ಸಮಯದಲ್ಲಿ ಸಾಕಷ್ಟು ಮಂದಿ ಕೊಹ್ಲಿ ನಾಯಕತ್ವವನ್ನು ಪ್ರಶ್ನೆ ಮಾಡಿ, ಅಣಕಿಸಿದ್ದರು ಮತ್ತು ಗೇಲಿ ಮಾಡಿದ್ದರು. ಕಿವೀಸ್​ ವಿರುದ್ಧದ ಸೋಲೇ ಇದಕ್ಕೆ ಕಾರಣವಾಗಿತ್ತು. ಆದರೆ, ಇದೀಗ ಅದೇ ಕಿವೀಸ್​ ಮತ್ತೊಮ್ಮೆ ಮುಖಾಮುಖಿಯಾಗುತ್ತಿದೆ. ಅಂದು ಕೇವಲ 1 ರನ್​ಗೆ ಔಟಾಗಿದ್ದ ಕೊಹ್ಲಿ ಈ ಬಾರಿ ಉತ್ತಮ ಫಾರ್ಮ್​ನಲ್ಲಿದ್ದು, ಕಿವೀಸ್​ ಬೌಲರ್​ಗಳನ್ನು ಕಾಡಿ, ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.

    ಸೋಲು ಕಾಣದ ಭಾರತ
    ಪ್ರಸಕ್ತ ವಿಶ್ವಕಪ್​ನಲ್ಲಿ ಭಾರತ ಈವರೆಗೂ ಅಜೇಯನಾಗಿ ಉಳಿದಿದೆ. ಇದುವರೆಗೂ ಆಡಿರುವ 8 ಪಂದ್ಯದಲ್ಲೂ ಅದ್ಭುತ ಗೆಲುವು ದಾಖಲಿಸಿದೆ. ನ.12ರಂದು ನೆದರ್ಲೆಂಡ್ಸ್​ ವಿರುದ್ಧ ಗ್ರೂಪ್​ ಹಂತದ ಕೊನೆಯ ಪಂದ್ಯದ ಹಾಗೂ ನವೆಂಬರ್​ 15ರಂದು ಕಿವೀಸ್ ವಿರುದ್ಧ ಸಮಿಫೈನಲ್​ನಲ್ಲಿ ಕಾದಾಡಲಿದೆ. ಭಾರತದ ಬ್ಯಾಟರ್​ಗಳಾದ ರೋಹಿತ್​ ಶರ್ಮ, ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆಎಲ್​ ರಾಹುಲ್​ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಅಲ್ಲದೆ, ಬೌಲಿಂಗ್​ನಲ್ಲಿ ಜಸ್ಪ್ರಿತ್​ ಬೂಮ್ರಾ, ಮೊಹಮ್ಮದ್​ ಶಮಿ, ಮೊಹಮ್ಮದ್​ ಸಿರಾಜ್​ ಹಾಗೂ ರವೀಂದ್ರ ಜಡೇಜಾ ಕೂಡ ಉತ್ತಮ ಲಯದಲ್ಲಿದ್ದಾರೆ. ಹೀಗಾಗಿ ಭಾರತ ಎದುರು ಕಿವೀಸ್​ ಸುಲಭ ತುತ್ತಾಗುವ ನಿರೀಕ್ಷೆ ಇದೆ.

    ಕಿವೀಸ್ ಸವಾಲೊಡ್ಡುವ ಸಾಧ್ಯತೆ
    ಪ್ರಸಕ್ತ ಟೂರ್ನಿಯಲ್ಲಿ ಕಿವೀಸ್​ ಪಡೆ 9 ಪಂದ್ಯಗಳನ್ನು ಆಡಿದ್ದು, 9ರಲ್ಲಿ 5 ರಲ್ಲಿ ಗೆದ್ದು 4ರಲ್ಲಿ ಸೋಲುಂಡಿದೆ. ಭಾರತಕ್ಕೆ ಕಿವೀಸ್​ ಸವಾಲೊಡ್ಡುವ ಸಾಧ್ಯತೆ ಇದೆ. ಅ.22ರಂದು ನಡೆದ ಲೀಗ್​ ಪಂದ್ಯದಲ್ಲಿ ಕಿವೀಸ್​ ಪಡೆ ಭಾರತಕ್ಕೆ 273 ರನ್​ಗಳ ಸವಾಲಿನ ಗುರಿ ನೀಡಿದ್ದನ್ನು ಇಲ್ಲಿ ಮರೆಯುವ ಆಗಿಲ್ಲ. ಕಿವೀಸ್​ ತಂಡ ಟೂರ್ನಿಯಲ್ಲೇ ಅತ್ಯಂತ ವೈವಿಧ್ಯತೆಯಿಂದ ಕೂಡಿದ ವೇಗ-ಸ್ಪಿನ್​ ಬೌಲಿಂಗ್​ ವಿಭಾಗವನ್ನು ಹೊಂದಿದೆ. ಅಲ್ಲದೆ, ಡೆವೊನ್​ ಕಾನ್​ವೇ, ಡೆರಿಲ್​ ಮಿಚೆಲ್​, ಬೆಂಗಳೂರು ಮೂಲದ ರಚಿನ್​ ರವೀಂದ್ರ ಉತ್ತಮ ಫಾಮ್​ರ್ನಲ್ಲಿರುವುದರಿಂದ ಕಿವೀಸ್​ ಕೂಡ ಭಾರತಕ್ಕೆ ಒಂದೊಳ್ಳೆ ಪೈಪೋಟಿ ನೀಡಲಿದೆ ಎಂದು ಹೇಳಲಾಗಿದೆ.

    ಏಕದಿನ ವಿಶ್ವಕಪ್​ ಮುಖಾಮುಖಿ: 10
    ಭಾರತ: 4ರಲ್ಲಿ ಗೆಲುವು
    ನ್ಯೂಜಿಲೆಂಡ್​: 5 ರಲ್ಲಿ ಗೆಲುವು
    ರದ್ದು: 1

    ಸಮೀಸ್​ನಲ್ಲಿ ಮುಖಾಮುಖಿಯಾಗುವ ತಂಡಗಳು
    ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಸಮೀಸ್​ ಪ್ರವೇಶ ಪಡೆದಿದ್ದು, ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್​ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್​ನಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

    ನ.19ಕ್ಕೆ ವಿಶ್ವಕಪ್​ ಹಬ್ಬಕ್ಕೆ ವಿದ್ಯುಕ್ತ ತೆರೆ
    ಎರಡೂ ಸಮಿಫೈನಲ್​ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್​ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್​ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್​)

    ಠುಸ್ಸಾದ ಬಾಬರ್​ ಅಜಾಮ್​ ಪ್ಲ್ಯಾನ್​: ವಿಶ್ವಕಪ್​ನಿಂದ ಪಾಕ್​ ಔಟ್​, ಸೆಮೀಸ್​ನಲ್ಲಿ ಭಾರತಕ್ಕೆ ಕಿವೀಸ್​ ಸವಾಲು

    ವಿರಾಟ್ ಕೊಹ್ಲಿಗೆ ಮರುಜನ್ಮ ನೀಡಿದ ಸೂಪರ್ ಮ್ಯಾನ್ ಇವರೆ ನೋಡಿ..!

    ವಿಶ್ವಕಪ್​ 2023: ಅತಿ ಹೆಚ್ಚು ಡಾಟ್​ ಬಾಲ್​ ಎಸೆದ ಬೌಲರ್​ಗಳು ಯಾರು? ಭಾರತವೇ ಮೇಲುಗೈ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts