More

    ಬಾಡಿಗೆದಾರರ ಅಧಿನಿಯಮ ಯಾವತ್ತು ಜಾರಿಗೆ ಬರಲಿದೆ?; ಸಚಿವ ಆರ್. ಅಶೋಕ್​ ಮಾಹಿತಿ

    ಬೆಂಗಳೂರು: ಕೇಂದ್ರ ಸರ್ಕಾರ ರೂಪಿಸಿರುವ ಬಾಡಿಗೆದಾರರ ಅಧಿನಿಯಮ ರಾಜ್ಯದಲ್ಲಿ ಯಾವತ್ತು ಜಾರಿಗೆ ಬರಲಿದೆ ಎಂಬ ಕುರಿತು ಇದ್ದ ಕುತೂಹಲಕ್ಕೆ ಇದೀಗ ಉತ್ತರ ಎಂಬಂತೆ ಕಂದಾಯ ಸಚಿವ ಆರ್. ಅಶೋಕ್ ಒಂದಷ್ಟು ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಅವರು ಈ ವಿಷಯ ತಿಳಿಸಿದ್ದಾರೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಲಕ್ಷ ಫ್ಲ್ಯಾಟ್​ಗಳಿದ್ದು, ಬಾಡಿಗೆದಾರರು ಮತ್ತು ಮಾಲೀಕರ ನಡುವೆ ಜಗಳವಿತ್ತು. ಅವರ ನಡುವಿನ ಗೊಂದಲ ಹಾಗೇ ಉಳಿಯುತ್ತಿತ್ತು. ಮಾತ್ರವಲ್ಲ, ಕೋರ್ಟ್​-ಕಚೇರಿ ಅಲೆಯಬೇಕಾಗುತ್ತಿತ್ತು ಎಂದ ಅಶೋಕ್, ಬಾಡಿಗೆದಾರರ ಅಧಿನಿಯಮಕ್ಕೆ ಪರಿವರ್ತನೆ ತಂದಿಲ್ಲ, ಮನೆ ಮಾಲೀಕರ ಹಿತರಕ್ಷಣೆಗೆ ಮುಂದಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!

    ಕೇಂದ್ರ ಸರ್ಕಾರ ಜೂನ್​ 2ರಂದು ಈ ಕಾನೂನನ್ನು ತಂದಿದೆ. ಅದನ್ನೇ ನಾವು ಜಾರಿಗೆ ತರುತ್ತಿದ್ದೇವೆ. ಇದರಿಂದ ಬಾಡಿಗೆದಾರರು ಹಾಗೂ ಮನೆಮಾಲೀಕರು ಇಬ್ಬರಿಗೂ ಅನುಕೂಲವಾಗಲಿದೆ. ಆದರೆ ಈ ಕಾನೂನನ್ನು ಇನ್ನೂ ಜಾರಿಗೊಳಿಸಿಲ್ಲ ಎಂಬುದನ್ನು ಸ್ಪಷ್ಟಗೊಳಿಸಿರುವ ಅವರು, ಅದನ್ನು ಸರ್ಕಾರದ ಆ್ಯಪ್​ನಲ್ಲಿ ಅಪ್​ಲೋಡ್ ಮಾಡಬೇಕಿದೆ. ಆ ಬಗ್ಗೆ ಚಿಂತನೆ ನಡೆಸಿದ್ದು, ಸಲಹೆ-ಸೂಚನೆಗಳನ್ನು ಕೊಟ್ಟ ನಂತರ ಜಾರಿಗೆ ತರಲಿದ್ದೇವೆ ಎಂಬುದಾಗಿ ಹೇಳಿದ್ದಾರೆ.

    ಗಂಡ ಮಲಗಿದ್ದಾಗಲೇ ಮನೆಯೊಳಗೆ ನಡೆಯಿತು ದುರಂತ; ಬಾಗಿಲು ಒಡೆದು ಕೋಣೆಗೆ ಹೊಕ್ಕವನಿಗೆ ತೀವ್ರ ಆಘಾತ!

    ಬೆರಳೆರಡನ್ನು ಕತ್ತರಿಸಿಕೊಂಡ, ಬಾಯಿಗೆರಡು ಕೋರೆ ಸಿಕ್ಕಿಸಿಕೊಂಡ!; ಮೈಮೇಲಿದೆಂಥ ಆಟ ಈ ಮೈಖೇಲ್​ನದ್ದು!?

    ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts