More

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ : ಎಂ. ಎಂ. ಹಿರೇಮಠ

    ಗದಗ: ಕರ್ನಾಟಕ ರಾಜ್ಯದ ಕಾನೂನು ಸುವ್ಯವಸ್ಥೆ ತೀರ ಹದಗೆಟ್ಟು ಕೆಟ್ಟು ನಿಂತು ಹೋದ ವಾಹನದಂತಾಗಿದೆ. ಕಾಂಗ್ರೆಸ್ ಸರಕಾರ ತಮಗೆ ಹಾಗೂ ಕಾನೂನು ಸುವ್ಯವಸ್ಥೆಗೆ ಯಾವುದೇ ಸಂಭAದವಿಲ್ಲಾ ಅನ್ನುವ ರೀತಿಯಲ್ಲಿ ನಡೆದು ಕೊಳ್ಳುತ್ತಿದ್ದಾರೆ ಎಂದು ಗದಗ ಜಿಲ್ಲಾ ಬಿಜೆಪಿ ವಕ್ತಾರರಾದ ಎಂ. ಎಂ. ಹಿರೇಮಠ ಅವರು ರಾಜ್ಯ ಸರಕಾರದ ಆಡಳಿತವನ್ನು ಕಟುವಾಗಿ ಟೀಕಿಸಿದ್ದಾರೆ.
    ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಕಾಂಗ್ರೆಸ್ ದುರಾಡಳಿತದಿಂದ ಚುನಾವಣೆ ಸಮಯದಲ್ಲಿ ಕಾಂಗ್ರೆಸ ಪಕ್ಷದ ಕಾರ್ಯಕರ್ತನೊಬ್ಬ ಗನ್ನ ತೆದುಕೊಂಡು ಬರುವುದು ಅದನ್ನು ಸಮರ್ಥನೆ ಮಾಡಿಕೊಳ್ಳುವುದು ನಿಮಗೆ ಅಭ್ಯಾಸವಾಗಿಬಿಟ್ಟಿದೆ. ರಾಜ್ಯ ಪೊಲೀಸ ಇಲಾಖೆ ಇದೆಯೋ ಇಲ್ಲವೋ ಎಂದು ಸಂದೇಹ ಬರುತ್ತಿದೆ. ಕಾಂಗ್ರೆÀ್ರಸ್ ಕಾರ್ಯಕರ್ತರು ತಾವು ಕಾನೂನು ಪಾಲನೆ ಮಾಡುವುದಿಲ್ಲಾ ಎಂದು ದಿಟ್ಟ ಸಂದೇಶವನ್ನು ಮುಂಖ್ಯಮAತ್ರಿ ಸಿದ್ಧರಾಮಯ್ಯನವರಿಗೆ ರವಾನಿಸಿದ್ದಾರೆ. ಗನ್ ಕ್ಯಾರಿ ಮಾಡುವರು ಬಾಂಬ ಇಟ್ಟು ಕೊಂಡು ಓಡಾಬಹುದು ಇದು ಕಾಂಗ್ರೆಸ್ ಸರಕಾರದ ಗ್ಯಾರಂಟಿ ಕಾಂಗ್ರೆಸಿಗೆ ಎಷ್ಟೇ ಅವಕಾಶ ಕೋಟ್ಟರು ಬದಲಾಗುವುದಿಲ್ಲಾ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಜನರನಲ್ಲಿ ಆಕ್ರೋಶ ಹೆಚ್ಚಾಗಿದೆ. ಜನರು ಆತಂಕದಿAದ ಜೀವನ ನಡೆಸುತ್ತಿದ್ದಾರೆ ಒಂದು ವರ್ಗಕ್ಕೆ ಬೆಣ್ಣೆ ಇನ್ನೊಂದು ವರ್ಗಕ್ಕೆ ಜೈಲು ವಾಸ-ಲಾಟಿ ಎಟ್ಟು ಗ್ಯಾರಂಟಿ.
    ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿAದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಳಿ ತಪ್ಪಿದೆ ಕೊಮದ್ವೇಶದ ಹಿಂಸಾಚಾರದ ಘಟನೆಗಳು, ರಾಜಕೀಯ ಪ್ರೇರಿತ ದ್ವೇಶಗಳಿಂದ ನಾಗರಿಕರಿಗೆ ಸುರಕ್ಷತೆ ಮತ್ತು ಭಧ್ರತೆ ಇಲ್ಲದೇ ಒದ್ದಾಡುತ್ತಿದ್ದಾರೆ. ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಹಗೆತನ ಸಾಧಿಸುವುದು ಸರವೇ ಸಮಾನ್ಯವಾಗಿ ಬಿಟ್ಟಿದೆ. ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬುದು ಕಾಂಗ್ರೆಸ್ ಆಡಳಿತದಲ್ಲಿ ಪದೆ ಪದೆ ಸಾಬಿತಾಗಿದೆ. ಬೆಳಗಾವಿಯಲ್ಲಿ ನಡೆದ ಘಟನೆ ಅತ್ಯಂತ ಅಮಾನವೀಯ. ಸಿದ್ಧರಾಮಯ್ಯ ಸೇರಿದಂತೆ ಸಂಪೂರ್ಣ ಆಡಳಿತ ಬೆಳಗಾವಿಯಲ್ಲಿ ಟೆಂಟ್ ಹಾಕಿದ ಸಂದರ್ಭದಲ್ಲಿ ೪೨ ವರ್ಷದ ಮಹಿಳೆಯನ್ನು ಬೆತ್ತಲಾಗಿಸಿ ಮೆರವಣಿಗೆ ಮಾಡಿ ಹಲ್ಲೇ ನಡೆಸಿದ್ದರು ಪೊಲೀಸ್ ಇಲಾಖೆ ಇದ್ದರು ಸತ್ತಂತೆ ವರ್ತಿಸುತ್ತಿದ್ದರು.
    ಕಾಂಗ್ರೆಸ್ ಸರಕಾರವು ಮುಸ್ಲಿಂ ಸಮುದಾಯದ ಅಪರಾದಿಗಳು ಭಾಗಿಯಾದÀ ಪ್ರಕರಣಗಳಿಲ್ಲಿ ಕ್ರಮ ತೆಗೆದು ಕೊಳ್ಳಲು ಮಿನಾವೇಶ ಎನ್ನಿಸುತ್ತಿದೆ. ಕಾಂಗ್ರೆಸ್ ಸರಕಾರ ಹಿಂದೂಗಳನ್ನು ೨ನೇ ದರ್ಜೆಯ ನಾಗರಿಕರಂತೆ ನೋಡುತ್ತಿದ್ದಾರೆ. ಮಂಗಳೂರಿನ ಕುಕ್ಕರ ಸ್ಫೋಟದ ಆರೋಪಿಗಳನ್ನು ಬದರ್ರಸ್ ಎಂದು ಕರೆಯುತ್ತಾರೆ. ವಿಧಾನಸೌದದೊಳಗೆ ಪಾಕಿಸ್ಥಾನ ಜಿಂದಾಬಾದ ಎಂದು ಘೋಷಣೆ ಕುಗಿದರು ಕಾಂಗ್ರೆಸ್‌ನಿAದ ಸಮರ್ಥನೆ ಮಾಡಿಕೊಳ್ಳುವರು. ಪಾಕಿಸ್ಥಾನ ಜಿಂದಾಬಾದ್ ಎಂದು ಕುಗಿದ್ದು ನಾಸೀರ್ ಹುಸೇನ ಬೆಂಬಲಿಗರಷ್ಟೇ ಅಲ್ಲಾ ಅವರು ಕಾಂಗ್ರೆಸ್ ಕಾರ್ಯಕರ್ತರು ಹೌದು. ರಮೇಶ್ವರಂ ಕೆಫೆಯಲ್ಲ ಬಾಂಬ್ ಸ್ಫೋಟ್ ಇದನ್ನು ಕೂಡಾ ವ್ಯಾವಪಾರದ ಪೈಪೋಟಿ ಎಂದು ಕರೆಯಲು ಕಾಂಗ್ರೆಸ್ ಪ್ರಯತ್ನ ಪಟ್ಟಿತು. ಈ ರೀತಾಯಾಗಿ ಕಾಂಗ್ರೆಸ ಸರಕಾರದ ಆಡಳಿತ ಸಂಪೂರ್ಣ ಕುಸಿದು ಹೋಗಿದೆ ಎಂದು ಜಿಲ್ಲಾ ವಕ್ತಾರರಾದ ಎಂ.ಎA.ಹಿರೇಮಠ , ಸವಕ್ತಾರರಾದ ದತ್ತಣ್ಣಾ ಜೋಶಿ, ಮಾಧ್ಯಮ ಪ್ರಮುಖರಾದ ರಾಜೇಂದ್ರಪ್ರಸಾದ ಹೊಂಗಲ್, ಶ್ರೀನಿವಾಸ ಹುಬ್ಬಳ್ಳಿ, ಕಾನೂನು ಪ್ರಕೋಷ್ಠದ ಗದಗ ಜಿಲ್ಲಾ ಸಂಚಾಲಕರಾದ ಕೆ.ಪಿ.ಕೋಟಿಗೌಡರ ಸಹ ಮತ ವ್ಯಕ್ತ ಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts