More

    VIDEO | ಅಂತಿಮ ಟೆಸ್ಟ್​ನಲ್ಲಿ ಇಂಗ್ಲೆಂಡ್​ಗೆ ವಿಂಡೀಸ್​ ಕಡಿವಾಣ

    ಮ್ಯಾಂಚೆಸ್ಟರ್​: ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧದ ನಿರ್ಣಾಯಕ 3ನೇ ಟೆಸ್ಟ್​ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​ ತಂಡ ಸಾಧಾರಣ ಮೊತ್ತದತ್ತ ಸಾಗಿದೆ. ವೇಗಿ ಕೇಮಾರ್​ ರೋಚ್​ ಆತಿಥೇಯರಿಗೆ ಆರಂಭಿಕ ಆಘಾತ ನೀಡುವ ಮೂಲಕ ಕಡಿವಾಣ ಹೇರಿದ್ದಾರೆ.

    ಓಲ್ಡ್​ ಟ್ರಾಫೋರ್ಡ್​ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್​ ತಂಡ ಚಹಾ ವಿರಾಮದ ವೇಳೆಗೆ 4 ವಿಕೆಟ್​ಗೆ 131 ರನ್​ ಗಳಿಸಿದೆ. ಆಲ್ರೌಂಡರ್​ ಒಲಿವರ್​ ಪೋಪ್​ (24*) ಮತ್ತು ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ಜೋಸ್​ ಬಟ್ಲರ್​  (2*) ಕ್ರೀಸ್​ನಲ್ಲಿದ್ದಾರೆ.

    ಆರಂಭಿಕ ಡೊಮಿನಕ್​ ಸಿಬ್ಲೆ ಪಂದ್ಯದ ಮೊದಲ ಓವರ್​ನ ಕೊನೆಯ ಎಸೆತದಲ್ಲಿ ವೇಗಿ ಕೇಮಾರ್​ ರೋಚ್​ ಎಸೆತದಲ್ಲಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರೆ, ನಾಯಕ ಜೋ ರೂಟ್​ 2ನೇ ವಿಕೆಟ್​ಗೆ ಬರ್ನ್ಸ್​ ಜತೆಗೆ 46 ರನ್​ ಸೇರಿಸಿದ ಬಳಿಕ ರನೌಟ್​ ಬಲೆಗೆ ಬಿದ್ದರು. ಬಳಿಕ ಆರಂಭಿಕ ರೋರಿ ಬರ್ನ್ಸ್​ ಮತ್ತು ಆಲ್ರೌಂಡರ್ ಬೆನ್​ ಸ್ಟೋಕ್ಸ್​ ನಡುವೆ 45 ರನ್​​ ಜತೆಯಾಟ ಏರ್ಪಟ್ಟಿತು. ಈ ಜೋಡಿಯನ್ನು ಮತ್ತೆ ರೋಚ್​ ಬೇರ್ಪಡಿಸಿ ಆಂಗ್ಲರಿಗೆ ಆಘಾತ ನೀಡಿದರು. ರೋಚ್​ ಎಸೆತದಲ್ಲಿ ಸ್ಟೋಕ್ಸ್​ ಬೌಲ್ಡ್​ ಆದರು. ಅರ್ಧಶತಕ ಬಾರಿಸಿದ ಬಳಿಕ ಬರ್ನ್ಸ್​ ಸ್ಪಿನ್ನರ್​ ರೋಸ್ಟನ್​ ಚೇಸ್​ ಎಸೆತದಲ್ಲಿ ಕಾರ್ನ್​ವಾಲ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು.

    ಇದನ್ನೂ ಓದಿ: ನಟಿ ಕಂಗನಾ​ಗೆ ಕ್ರಿಕೆಟಿಗ ಮನೋಜ್​ ತಿವಾರಿ ಬೆಂಬಲ

    ಪಂದ್ಯಕ್ಕೆ ಇಂಗ್ಲೆಂಡ್​ ತಂಡ 2 ಬದಲಾವಣೆಗಳನ್ನು ಮಾಡಿಕೊಂಡಿದೆ. ವೇಗಿಗಳಾದ ಜೋಫ್ರಾ ಆರ್ಚರ್​ ಮತ್ತು ಜೇಮ್ಸ್​ ಆಂಡರ್​ಸನ್​ಗೆ ಸ್ಥಾನ ಕಲ್ಪಿಸುವುದಕ್ಕಾಗಿ ಆಲ್ರೌಂಡರ್​ ಸ್ಯಾಮ್​ ಕರ್ರನ್​ ಮತ್ತು ಬ್ಯಾಟ್ಸ್​​ಮನ್​ ಜಾಕ್​ ಕ್ರೌಲಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇದರಿಂದ ಬೆನ್​ ಸ್ಟೋಕ್ಸ್​ ಬ್ಯಾಟಿಂಗ್​ನಲ್ಲಿ 4ನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದಾರೆ. ತಂಡ ನಾಲ್ವರು ವೇಗಿಗಳ ಜತೆಗೆ ಸ್ಪಿನ್ನರ್​ ಡೊಮಿನಿಕ್​ ಬೆಸ್​ ಅವರನ್ನು ಹೊಂದಿದ್ದು, ತಂಡದಲ್ಲಿ ಓರ್ವ ಪರಿಣತ ಬ್ಯಾಟ್ಸ್​ಮನ್​ ಕೊರತೆ ಇದೆ. ಸ್ಟೋಕ್ಸ್​ ಪೂರ್ಣ ಫಿಟ್ನೆಸ್​ ಹೊಂದಿರದೆ ಆಡುತ್ತಿರುವ ಕಾರಣ ಬೌಲಿಂಗ್​ ನಡೆಸುವ ಸಾಧ್ಯತೆ ಕಡಿಮೆ ಇದೆ. ವೆಸ್ಟ್​ ಇಂಡೀಸ್​ ತಂಡದಲ್ಲಿ ಏಕೈಕ ಬದಲಾವಣೆ ಮಾಡಲಾಗಿದ್ದು, ವೇಗಿ ಅಲ್ಜಾರಿ ಜೋಸೆಫ್​ ಬದಲಿಗೆ ದೈತ್ಯದೇಹಿ ಸ್ಪಿನ್ನರ್​ ರಖೀಮ್​ ಕಾರ್ನ್​ವಾಲ್​ಗೆ ಸ್ಥಾನ ಕಲ್ಪಿಸಲಾಗಿದೆ.

    VIDEO | ಅಂತಿಮ ಟೆಸ್ಟ್​ನಲ್ಲಿ ಇಂಗ್ಲೆಂಡ್​ಗೆ ವಿಂಡೀಸ್​ ಕಡಿವಾಣ

    ಸರಣಿ ಸದ್ಯ 1-1 ಸಮಬಲದಲ್ಲಿದ್ದು, ವೆಸ್ಟ್​ ಇಂಡೀಸ್​ ತಂಡ 1988ರ ಬಳಿಕ ಮೊದಲ ಬಾರಿಗೆ ಇಂಗ್ಲೆಂಡ್​ ನೆಲದಲ್ಲಿ ಟೆಸ್ಟ್​ ಸರಣಿ ಜಯಿಸುವ ಹಂಬಲದಲ್ಲಿದೆ.

    ಇಂಗ್ಲೆಂಡ್​ ಪ್ರಥಮ ಇನಿಂಗ್ಸ್​: 53 ಓವರ್​ಗಳಲ್ಲಿ 4 ವಿಕೆಟ್​ಗೆ 131 (ಬರ್ನ್ಸ್​ 57, ಸಿಬ್ಲೆ 0, ರೂಟ್​ 17, ಸ್ಟೋಕ್ಸ್​ 20, ಒಲಿವರ್ ಪೋಪ್​ 7*, ಜೋಸ್​ ಬಟ್ಲರ್​ 2*, ರೋಚ್​ 28ಕ್ಕೆ 2, ಚೇಸ್​ 1ಕ್ಕೆ 1).

    ವಿಸ್ಡನ್​ ಟ್ರೋಫಿಗೆ ವಿದಾಯ, ಇಂಗ್ಲೆಂಡ್​-ವಿಂಡೀಸ್​ ಟೆಸ್ಟ್​ ಸರಣಿಗೆ ಇನ್ನು ಹೊಸ ಹೆಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts