More

    ಕಿಂಡಿ ಅಣೆಕಟ್ಟೆ ನೀರು ಸೋರಿಕೆ

    ವಿಜಯವಾಣಿ ಸುದ್ದಿಜಾಲ ಕಡಬ

    ಶಾಂತಿಮೊಗರು ಎಂಬಲ್ಲಿ ಕುಮಾರಧಾರಾ ನದಿಗೆ ಅಡ್ಡಲಾಗಿರುವ ಕಿಂಡಿ ಅಣೆಕಟ್ಟಿಗೆ ಎರಡು ತಿಂಗಳ ಹಿಂದೆ ಹಲಗೆ ಜೋಡಣೆಯಾಗಿ ಭರ್ತಿ ನೀರು ಸಂಗ್ರಹವಾಗಿತ್ತು. ಆದರೆ ಇದೀಗ ನೀರು ಸೋರಿಕೆಯಾಗಿ ಕಿಂಡಿ ಅಣೆಕಟ್ಟೆಯಲ್ಲಿ ನೀರು ಬರಿದಾಗಿದೆ.

    ಈ ಕುರಿತು ಸ್ಥಳೀಯರು ಪ್ರತಿಕ್ರಿಯಿಸಿದ್ದು, ನೀರು ಸಂಗ್ರಹದಿಂದ ಕೃಷಿಗೆ ಉಪಯುಕ್ತವಾಗಿತ್ತು. ಆದರೆ ಕೆಲವು ಮರಳು ಮಾಫಿಯಾ ಮಂದಿ ಮರಳು ತೆಗೆಯಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಅಣೆಕಟ್ಟಿಗೆ ಅಳವಡಿಸಲಾದ ಹಲಗೆಯನ್ನು ರಾತ್ರಿ ವೇಳೆ ಸಡಿಲಿಸುತ್ತಾರೆ. ಇದರಿಂದ ಸಂಗ್ರಹವಾದ ನೀರು ಸೋರಿಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

    ಎರಡು ತಿಂಗಳ ಹಿಂದೆಯಷ್ಟೇ ನದಿಯಲ್ಲಿ ನೀರು ಸಂಗ್ರಹಕ್ಕೆ ಹಲಗೆ ಜೋಡಿಸಿದ್ದು, ನೀರು ಭರ್ತಿಯಾಗಿತ್ತು. ಇದರಿಂದ ಇಕ್ಕೆಲಗಳಲ್ಲಿದ್ದ ರೈತರಿಗೆ ತೋಟಕ್ಕೆ ನೀರುಣಿಸಲು ಸಮಸ್ಯೆಯಾಗಿರಲಿಲ್ಲ. ಕೆಲವು ದಿನಗಳಿಂದ ನೀರಿನ ಪ್ರಮಾಣ ಕಡಿಮೆಯಾದ್ದರಿಂದ ಸಾರ್ವಜನಿಕರಲ್ಲಿ ಅನುಮಾನ ವ್ಯಕ್ತವಾಗಿತ್ತು. ಸ್ಥಳೀಯರು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

    ಹೆಚ್ಚಿನ ಪರಿಶೀಲನೆಗಾಗಿ ಆಲಂಕಾರು ಹಾಗೂ ಕುದ್ಮಾರು ಗ್ರಾಮಸ್ಥರು ಬುಧವಾರ ನದಿದಡದಲ್ಲಿ ಜಮಾಯಿಸಿದರು. ಈ ಸಂದರ್ಭ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕೆಲವರು, ಅಣೆಕಟ್ಟಿನಲ್ಲಿ ನೀರು ಸಂಗ್ರಹವಾಗದಂತೆ ಮಾಫಿಯಾದವರು ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ. ಇದರ ಪರಿಣಾಮ ಈಗ ರೈತರ ತೋಟಗಳಿಗೆ ನೀರು ಇಲ್ಲದಂತಾಗಿದೆ. ತಮ್ಮ ಸ್ವಾರ್ಥಕ್ಕಾಗಿ ಸರ್ಕಾರದ ವ್ಯವಸ್ಥೆಗಳನ್ನು ಹದಗೆಡಿಸುವವರ ವಿರುದ್ಧ ಅಧಿಕಾರಿಗಳು ಶೀಘ್ರ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಕಿಂಡಿ ಅಣೆಕಟ್ಟೆಯಿಂದ ನೀರು ಸೋರಿಕೆಯಾಗುತ್ತಿರುವುದಕ್ಕೆ ನಿಖರ ಕಾರಣ ಪರಿಶೀಲಿಸಲಾಗುವುದು. ಹಲಗೆ ಜಾರಿಸಿ ಕಲ್ಲು ಇಡಲಾಗಿದೆ. ರಬ್ಬರ್ ತೆಗೆದು ನೀರು ಸೋರಿಕೆಯಾಗುವಂತೆ ಕೃತ್ಯ ನಡೆಸಗಿದೆ ಎಂದು ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಲಿ. ಇಲಾಖೆ ವತಿಯಿಂದಲೂ ದೂರು ನೀಡಲಾಗುತ್ತದೆ.
    -ಡಿ.ಎಂ ಶಿವಪ್ರಸನ್ನ, ಅಭಿಯಂತರ, ಸಣ್ಣ ನೀರಾವರಿ ಇಲಾಖೆ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts