More

    ಹೆದ್ದಾರಿ ಬದಿ ತ್ಯಾಜ್ಯರಾಶಿ

    ಕಡಬ: ರಾಮಕುಂಜ ಗ್ರಾಪಂ ವ್ಯಾಪ್ತಿಯ ಉಪ್ಪಿನಂಗಡಿ, ಕಡಬ, ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿ ಹಾಗೂ ಗ್ರಾಪಂ ರಸ್ತೆಯ ಬದಿ ತ್ಯಾಜ್ಯ ರಾಶಿ ಬಿದ್ದಿದ್ದು, ಇದರಿಂದ ಪರಿಸರವಿಡೀ ದುರ್ನಾತ ಬೀರುತ್ತಿದೆ ಎಂದು ಸಾರ್ವಜನಿಕರು ಗ್ರಾಪಂಗೆ ದೂರು ನೀಡಿದ್ದಾರೆ.

    ರಾಜ್ಯ ಹೆದ್ದಾರಿ ಬದಿಯಲ್ಲಿರುವ ಕುಂಡಾಜೆ, ಸಂಪ್ಯಾಡಿ ಪರಿಸರದ ರಸ್ತೆ ಬದಿ ಹಾಗೂ ಇನ್ನೀತರ ಕಡೆಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ಕಸಗಳನ್ನು ತುಂಬಿ ರಸ್ತೆ ಬದಿಗೆ, ಗ್ರಾಪಂ ರಸ್ತೆಗೆ ಎಸೆಯಲಾಗುತ್ತಿದೆ. ರಾಜ್ಯ ಹೆದ್ದಾರಿಯ ಬದಿ ಗ್ರಾಪಂ ಸಂಪ್ಯಾಡಿ ರಸ್ತೆಯ ಮಧ್ಯಭಾಗಕ್ಕೆ ತ್ಯಾಜ್ಯ ತಂದು ಎಸೆದಿದ್ದು ಸಾರ್ವಜನಿಕರು ರಸ್ತೆ ಅವಲಂಬಿಸಿರುವ ನಿವಾಸಿಗಳಾದ ಟಿ.ನಾಗರಾಜ ಭಟ್, ಜಯಕರ ಪೂಜಾರಿ, ವಿನಯ ಗೌಡ ಹಾಗೂ ಬಶೀರ್ ಹಾಗೂ ಇನ್ನೀತರರು, ಶಾಲಾ ಮಕ್ಕಳು ಗ್ರಾಪಂ ಸದಸ್ಯರಿಗೆ, ಗ್ರಾಪಂ ಅಧ್ಯಕ್ಷರಿಗೆ, ಅಭಿವೃದ್ಧಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಕಸದ ಸೂಕ್ತ ವಿಲೇವಾರಿ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

    ಹಳೆನೇರೆಂಕಿ ಕೂಡು ರಸ್ತೆಯಿಂದ ರಾಮಕುಂಜ ಕ್ರಾಸ್ ತನಕ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿರುವ ಬಗ್ಗೆ ಗ್ರಾಪಂ ಗೆ ಸಾರ್ವಜನಿಕ ದೂರುಗಳು ಬಂದಿದ್ದು, ಗ್ರಾಪಂ ರಸ್ತೆಗೆ ತ್ಯಾಜ್ಯ ಎಸೆಯುವವರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ರಾಮಕುಂಜ ಗ್ರಾಪಂ ಆಡಳಿತ ಮನವಿ ಮಾಡಿದೆ.

    ರಾಮಕುಂಜ ಗ್ರಾಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ರಸ್ತೆಗೆ ಎಸೆಯುವುದರ ಬಗ್ಗೆ ಸಾರ್ವಜನಿಕರಿಂದ ಅನೇಕ ಬಾರಿ ದೂರು ಬಂದಿದ್ದು, ಪಂಚಾಯಿತಿ ಸಾಮಾನ್ಯ ಸಭೆಯಲ್ಲೂ ಚರ್ಚೆ ನಡೆದಿದೆ. ಸ್ವಚ್ಛತೆಗೆ ಆದ್ಯತೆ ನೀಡುವ ಬಗ್ಗೆ ನಾವು ಪಂಚಾಯಿತಿ ವತಿಯಿಂದ ಅಂಗಡಿ ಮುಂಗಟ್ಟುಗಳಿಗೆ ಗೋಣಿಚೀಲ ವಿತರಿಸಿದ್ದೇವೆ. ರಾಜ್ಯ ಹೆದ್ದಾರಿ ಬದಿಗೆ ಹಾಗೂ ಸಾರ್ವಜನಿಕ ರಸ್ತೆಗಳಿಗೆ ತ್ಯಾಜ್ಯ ತಂದು ಕೆಲವರು ಎಸೆಯುತ್ತಿದ್ದಾರೆ ತ್ಯಾಜ್ಯ ಎಸೆಯುವವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಗ್ರಾಪಂ ಬದ್ದವಾಗಿದೆ.
    -ಸುಚೇತಾ, ಅಧ್ಯಕ್ಷರು ರಾಮಕುಂಜ ಗ್ರಾಪಂ

    ರಾಮಕುಂಜ ಗ್ರಾಪಂ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ರಾಜ್ಯ ಹೆದ್ದಾರಿ ಹಾಗೂ ಸಾರ್ವಜನಿಕ ರಸ್ತೆಗೆ ತ್ಯಾಜ್ಯ ಎಸೆಯುವ ಬಗ್ಗೆ ದೂರುಗಳು ಬಂದಿದ್ದು ತ್ಯಾಜ್ಯ ಎಸೆಯುವರಿಗೆ ದಂಡ ವಿಧಿಸುವ ಹಾಗೂ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
    -ಲಲಿತಾ, ಅಭಿವೃದ್ಧಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts