More

    ಎಕ್ಸ್​, ಯೂಟ್ಯೂಬ್​, ಟೆಲಿಗ್ರಾಮ್​ಗೆ ಕೇಂದ್ರ ಸರ್ಕಾರದ ಖಡಕ್ ಎಚ್ಚರಿಕೆ; ತಪ್ಪಿದರೆ ಕಠಿಣ ಕ್ರಮ

    ನವದೆಹಲಿ: ಸಾಮಾಜಿಕ ಮಾಧ್ಯಮ ಮಧ್ಯವರ್ತಿ ಆ್ಯಪ್​ಗಳಾಗಿರುವ ಯೂಟ್ಯೂಬ್, ಎಕ್ಸ್ ಹಾಗೂ ಟೆಲಿಗ್ರಾಮ್​​ಗಳಿಗೆ ಕೇಂದ್ರ ಸರ್ಕಾರ ಖಡಕ್​ ಎಚ್ಚರಿಕೆಯನ್ನು ನೀಡಿದೆ. ಈ ನಿಟ್ಟಿನಲ್ಲಿ ನೋಟಿಸ್ ಜಾರಿ ಮಾಡಲಾಗಿದ್ದು, ಅದನ್ನು ಪಾಲಿಸುವಲ್ಲಿ ತಪ್ಪಿದರೆ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿ ನಿರ್ಬಂಧ ಹೇರುವ ಎಚ್ಚರಿಕೆಯನ್ನೂ ನೀಡಲಾಗಿದೆ.

    ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಾದ ಎಕ್ಸ್, ಯೂಟ್ಯೂಬ್ ಮತ್ತು ಟೆಲಿಗ್ರಾಮ್​​ಗೆ ನೋಟಿಸ್ ನೀಡಿದ್ದು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅಂಶಗಳನ್ನು ತೆಗೆದುಹಾಕುವಂತೆ ಸೂಚನೆ ನೀಡಿದೆ.

    ತಮ್ಮ ಪ್ಲ್ಯಾಟ್​​ಫಾರ್ಮ್​ಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಅಂಶಗಳನ್ನು ತೆಗೆದುಹಾಕುವ ಜತೆಗೆ ಅಂಥ ಅಂಶಗಳಿಗೆ ಪ್ರವೇಶವನ್ನೂ ನಿಷ್ಕ್ರಿಯಗೊಳಿಸಬೇಕು. ಭವಿಷ್ಯದಲ್ಲಿ ಅಂಥ ಅಂಶಗಳು ಪ್ರಸಾರವಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ: ಧಾರ್ಮಿಕ ಸಂಘರ್ಷ ತಪ್ಪಿಸಿದ ಸರ್ಕಲ್​ ಇನ್​ಸ್ಪೆಕ್ಟರ್​: ಪಿಡಿಒಗೂ ತರಾಟೆ, ವೈರಲ್ ಆಗುತ್ತಿದೆ ವಿಡಿಯೋ

    ಈ ಸೂಚನೆಗಳನ್ನು ಅನುಸರಿಸುವಲ್ಲಿ ಎಕ್ಸ್​, ಯೂಟ್ಯೂಬ್​, ಟೆಲಿಗ್ರಾಂ ತಪ್ಪಿದರೆ ಅಥವಾ ವಿಳಂಬ ಮಾಡಿದರೆ ಐಟಿ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿ ನಿರ್ಬಂಧ ವಿಧಿಸಲಾಗುವುದು ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. ಭಾರತೀಯ ಅಂತರ್ಜಾಲದಲ್ಲಿ ಕ್ರಿಮಿನಲ್ ಮತ್ತು ಹಾನಿಕಾರಕ ವಿಷಯಗಳಿಗೆ ಶೂನ್ಯ ಸಹಿಷ್ಣುತೆ ಇರುತ್ತದೆ ಎಂದೂ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.

    ಹೊಸದೂ ಬೇಡ, ಹಳೇದೂ ಬೇಡ: ಏನಿದು ಮಹಿಳೆಯರ ಒತ್ತಾಯ?; ಮಾನಿನಿಯರು ಒಲಿಯದ ಏಕೈಕ ಭಾಗ್ಯ!

    ರಾಜಧಾನಿಯಲ್ಲಿ ಬಸ್​ ನಿಲ್ದಾಣಗಳೇ ನಾಪತ್ತೆ!; ಒಂದು ತಿಂಗಳ ಬಳಿಕ ದೂರು ದಾಖಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts