More

    ಬಟ್ಟೆ ಬಿಚ್ಚಿಸಿ ಚೆಕಿಂಗ್ ಮಾಡಿದ ವಾರ್ಡನ್! ಪರ್ಸಲ್ಲಿ ಹಣ ಮಿಸ್ ಆದದ್ದಕ್ಕೆ ವಿದ್ಯಾರ್ಥಿನಿಯರ ಮೇಲೇ ಅನುಮಾನ…

    ನವದೆಹಲಿ: ನಗರದ ಸರ್ಕಾರಿ ನರ್ಸಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ತಮ್ಮನ್ನು ಪರೀಕ್ಷಿಸುವ ನೆಪದಲ್ಲಿ ತಮ್ಮ ವಾರ್ಡನ್ ವಿವಸ್ತ್ರಗೊಳಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದು ಈ ಹಿನ್ನೆಲೆಯಲ್ಲಿ ಶೂನ್ಯ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

    ಡಿಸಿಪಿ (ಕೇಂದ್ರ) ಸಂಜಯ್ ಕುಮಾರ್ ಸೈನ್ ಮಾತನಾಡಿ, ಮಧ್ಯಾಹ್ನ 1 ಗಂಟೆ ಸುಮಾರಿಗೆ ನರ್ಸಿಂಗ್ ವಿದ್ಯಾರ್ಥಿನಿಗೆ ಕಿರುಕುಳ ಮತ್ತು ಬಟ್ಟೆ ಬಿಚ್ಚಿದ ಘಟನೆಗೆ ಸಂಬಂಧಿಸಿದಂತೆ ಪಿಸಿಆರ್ ಸ್ವೀಕರಿಸಲಾಗಿದೆ ಎಂದು ಹೇಳಿದರು.

    ವಾರ್ಡನ್ ಜತೆಗೆ ವಿದ್ಯಾರ್ಥಿಗಳು ಸಮುದಾಯ ಕಾರ್ಯಕ್ರಮಕ್ಕಾಗಿ ಮಂಡಿ ಹೌಸ್ ಎಂಬ ಸ್ಥಳಕ್ಕೆ ಹೋಗಿದ್ದಾಗ ವಾರ್ಡನ್ ಕೈಚೀಲದಿಂದ 8,000 ರೂ. ಕಾಣೆಯಾಗಿದೆ. ವಾರ್ಡನ್, ಜತೆಗಿದ್ದ ವಿದ್ಯಾರ್ಥಿನಿಯರೇ ಕದ್ದಿದ್ದಾರೆ ಎಂದು ಶಂಕಿಸಿದ್ದು ಇತರ ವಿದ್ಯಾರ್ಥಿಗಳಿಂದ ವಿವಸ್ತ್ರಗೊಳಿಸುವ ಮೂಲಕ ಅವರನ್ನು ಪರೀಕ್ಷಿಸಲು ಪ್ರಯತ್ನಿಸಿದರು. ಅವರ ವಿದ್ಯಾರ್ಥಿನಿಯರ ಹತ್ತಿರ ವಾರ್ಡನ್ ಗೆ ಬೇಕಾದ್ದು ಸಿಗಲಿಲ್ಲ” ಎಂದು ಡಿಸಿಪಿ ಹೇಳಿದರು.

    ಪ್ರಾಥಮಿಕ ವಿಚಾರಣೆಯ ನಂತರ, ಮಹಿಳೆಯ ವಿರುದ್ಧ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಅಡಿಯಲ್ಲಿ ಶೂನ್ಯ ಎಫ್ಐಆರ್ ದಾಖಲಿಸಲಾಗಿದೆ. ಈ ವಿಷಯದ ಬಗ್ಗೆ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ ಎಂದು ಕಾಲೇಜು ಪ್ರಾಂಶುಪಾಲರು ತಿಳಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts