More

    ಲಾಕ್​ಡೌನ್ ಅವಧಿಯಲ್ಲಿ ಕೆಲಸ ಕಳ್ಕೊಂಡಿದ್ದೀರಾ? ಶೇಕಡ 50ರಷ್ಟು ವೇತನ ಕ್ಲೇಮ್ ಮಾಡಿ..

    ಬೆಂಗಳೂರು: ಲಾಕ್​ ಡೌನ್ ಅವಧಿಯಲ್ಲಿ ಕೆಲಸ ಕಳ್ಕೊಂಡಿದ್ದೀರಾ? ವೇತನ ಇಲ್ಲದೆ ಕಷ್ಟ ಪಡುವಂತಾಗಿದೆಯೇ? ಹಾಗಾದ್ರೆ ನೀವು ಗರಿಷ್ಠ ಮೂರು ತಿಂಗಳ ವೇತನದ ಶೇಕಡ 50 ವೇತನವನ್ನು ಕ್ಲೇಮ್ ಮಾಡಬಹುದು. ಎಂಪ್ಲಾಯೀಸ್ ಸ್ಟೇಟ್ ಇನ್ಶೂರೆನ್ಸ್ ಕಾರ್ಪೊರೇಶನ್ (ಇಎಸ್​ಐಸಿ) ಈ ಸಂಬಂಧ ಇಂದು ಪ್ರಕಟಣೆಯನ್ನು ಹೊರಡಿಸಿದೆ. ಅಟಲ್​ ಬಿಮಿತ ವ್ಯಕ್ತಿ ಕಲ್ಯಾಣ್ ಯೋಜನಾ(ಎಬಿವಿಕೆವೈ)ದ ವ್ಯಾಪ್ತಿಯಲ್ಲಿ ಈ ಕ್ಲೇಮ್ ಸಲ್ಲಿಸಬಹುದು. ಇದಕ್ಕೆ ಸಂಬಂಧಿಸಿ ನಿಯಮ ಪರಿಷ್ಕರಣೆಯೂ ಆಗಿದ್ದು, ಅದರ ವಿವರವನ್ನೂ ಅದು ಪ್ರಕಟಿಸಿದೆ.

    ಬದಲಾದ ನಿಯಮಗಳಿವು

    * ನಿರುದ್ಯೋಗ ಉಂಟಾಗಿ 90 ದಿನಗಳ ಬಳಿಕ ಪರಿಹಾರ ಕ್ಲೇಮ್​ ಮಾಡುವ ಬದಲಾಗಿ, 30 ದಿನಗಳ ಬಳಿಕ ಪರಿಹಾರ ಕ್ಲೇಮ್ ಮಾಡಲು ಅವಕಾಶ.

    * ಉದ್ಯೋಗದಾತರು ಕ್ಲೇಮ್ ಸಲ್ಲಿಸುವ ಬದಲು ನೇರವಾತಿ ಉದ್ಯೋಗಿಯೇ ಕ್ಲೇಮ್ ಸಲ್ಲಿಸಲು ಅನುಮತಿ

    * ಹಿಂದಿನ ನಾಲ್ಕು ತಿಂಗಳ ನಿತ್ಯ ವೇತನದ ಸರಾಸರಿಯ ಶೇಕಡ 50 ರಷ್ಟು ಗರಿಷ್ಠ 90 ದಿನಗಳಿಗೆ ಮಿತಿಗೊಳಿಸಿ ಪರಿಹಾರ ಕ್ಲೇಮ್ ಮಾಡಬಹುದು. ಈ ಹಿಂದೆ ಇದು ಶೇಕಡ 25ರಷ್ಟು ಪರಿಹಾರ ಕೇಳುವುದಕ್ಕೆ ಸೀಮಿತವಾಗಿತ್ತು.

    ‘ಕೆಲಸ ಕಳೆದುಕೊಂಡವರು ಗರಿಷ್ಠ ಮೂರು ತಿಂಗಳ ವೇತನದ ಶೇಕಡ 50 ರಷ್ಟನ್ನು ನಿರುದ್ಯೋಗ ಪರಿಹಾರವಾಗಿ ಕ್ಲೇಮ್ ಮಾಡಬಹುದು. ಒಂದೊಮ್ಮೆ ಅವರು ಈಗ ಕೆಲಸ ಆರಂಭಿಸಿದ್ದರೂ ಈ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, 44,000 ಕೋಟಿ ರೂಪಾಯಿಯನ್ನು ಇಎಸ್​ಐಸಿ ಮೀಸಲಿಟ್ಟಿದೆ. ಈ ಯೋಜನೆ ಜಾರಿಯಾಗಿ ಕೆಲವು ದಿನಗಳಾದರೂ ಇನ್ನೂ ವ್ಯಾಪಕ ಪ್ರಚಾರ ಸಿಗದ ಕಾರಣ ಫಲಾನುಭವಿಗಳ ಸಂಖ್ಯೆ ಕಡಿಮೆ ಇದೆ ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ.

    ಇದನ್ನೂ ಓದಿ:  Web Exclusive: ಅಬಕಾರಿ ಸಬ್ ಇನ್​ಸ್ಪೆಕ್ಟರ್​ಗಳಿಗೆ ಬೈಕ್ ಭಾಗ್ಯ; ಅಕ್ರಮ ಮದ್ಯ ಮಾರಾಟ ತಡೆಯಲು ಅನುಕೂಲ

    ಕಳೆದ ತಿಂಗಳು ಎಬಿವಿಕೆವೈ ಜಾರಿಗೊಳಿಸಲಾಗಿದ್ದು, ನಿತ್ಯ 400 ಕ್ಲೇಮ್​ಗಳು ಇದುವರೆಗೆ ಬಂದಿವೆ. ಶೇಕಡ 25ರಷ್ಟು ಪರಿಹಾರ ಕೊಡಲಾಗುತ್ತಿತ್ತು. ಈಗ ಅದನ್ನು ಶೇಕಡ 50ರಷ್ಟು ವೇತನ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ. ಇಎಸ್​ಐಸಿ ಯಲ್ಲಿ 13.5 ಕೋಟಿ ಫಲಾನುಭವಿಗಳಿದ್ದು, 3.4 ಕೋಟಿ ಫಲಾನುಭವಿಗಳಿಗೆ ವೈದ್ಯಕೀಯ ವಿಮೆಯ ಸೌಲಭ್ಯವೂ ಸಿಗುತ್ತಿದೆ. ಹೊಸ ಸೋಷಿಯಲ್ ಸೆಕ್ಯೂರಿಟಿ ನಿಯಮ ಪ್ರಕಾರ ಈ ಪರಿಹಾರ ವೇತನವನ್ನು ಸರ್ಕಾರ ನೀಡತೊಡಗಿದೆ. ಇಎಸ್​ಐಸಿ ನೋಟಿಫಿಕೇಶನ್​ ಗೆ ಇಲ್ಲಿ ಕ್ಲಿಕ್ ಮಾಡಿ- (ಏಜೆನ್ಸೀಸ್)

    ತುಲಾಮಾಸದ ಪೂಜೆಗಾಗಿ ಐದು ದಿನಗಳ ಅವಧಿಗೆ ಶಬರಿಮಲೆ ಬಾಗಿಲು ಇಂದು ತೆರೆಯಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts