More

    ತುಲಾಮಾಸದ ಪೂಜೆಗಾಗಿ ಐದು ದಿನಗಳ ಅವಧಿಗೆ ಶಬರಿಮಲೆ ಬಾಗಿಲು ಇಂದು ತೆರೆಯಲಿದೆ

    ಪತ್ತನಂತಿಟ್ಟ : ಪ್ರಸಿದ್ಧ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯವು ತುಲಾ ಮಾಸದ ಪೂಜೆಗಾಗಿ ಐದು ದಿನಗಳ ಅವಧಿಗೆ ಇಂದು ಸಂಜೆ 5 ಗಂಟೆಗೆ ತೆರೆದುಕೊಳ್ಳಲಿದೆ. ಮಾರ್ಚ್ 24ರ ನಂತರ ಇದೇ ಮೊದಲ ಬಾರಿಗೆ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ನಾಳೆಯಿಂದ 5 ದಿನಗಳ ಕಾಲ ಪೂಜೆ ನಡೆಯಲಿದೆ.

    ನಾಳೆ ಬೆಳಗ್ಗೆ 5 ಗಂಟೆಗೆ ದೇವರ ಪೂಜೆ ನಡೆಯುವ ವೇಳೆಗೆ ದರ್ಶನಕ್ಕೆ ಭಕ್ತರಿಗೂ ಅವಕಾಶ ನೀಡಲಾಗಿದೆ. ದರ್ಶನಕ್ಕೆ ಆಗಮಿಸುವ ಭಕ್ತರು ಕೋವಿಡ್​-19 ಟೆಸ್ಟ್ ಮಾಡಿಸಿ ನೆಗೆಟಿವ್ ಸರ್ಟಿಫಿಕೇಟ್ ಹೊಂದಿದವರನ್ನು ಮಾತ್ರವೇ ದರ್ಶನಕ್ಕೆ ಕಳುಹಿಸಲಾಗುತ್ತದೆ. ಈ ಟೆಸ್ಟ್ ಅವಧಿ ದೇವಸ್ಥಾನದ ಭೇಟಿಗೆ 48 ಗಂಟೆ ಮುಂಚಿತವಾಗಿ ಆಗಿರಬೇಕು. ದರ್ಶನದ ಅವಧಿಯನ್ನು ಮೊದಲೇ ನಿಗದಿ ಪಡಿಸಿಕೊಂಡು ಬರಬೇಕು. ಇದಕ್ಕಾಗಿ ಆನ್​ಲೈನ್ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

    ಇದನ್ನೂ ಓದಿ:  Web Exclusive: ಅಬಕಾರಿ ಸಬ್ ಇನ್​ಸ್ಪೆಕ್ಟರ್​ಗಳಿಗೆ ಬೈಕ್ ಭಾಗ್ಯ; ಅಕ್ರಮ ಮದ್ಯ ಮಾರಾಟ ತಡೆಯಲು ಅನುಕೂಲ

    ಪಂಪಾ ತೀರದಿಂದ ಶಬರಿಮಲೆ ಬೆಟ್ಟ ಏರಬೇಕಾದರೆ ಭಕ್ತಾದಿಗಳ ಬಳಿ ಮೆಡಿಕಲ್ ಸರ್ಟಿಫಿಕೇಟ್ ಇರಬೇಕು. ಪ್ರತಿನಿತ್ಯ 250 ಭಕ್ತರಿಗೆ ದರ್ಶನಾವಕಾಶ ನೀಡಲಾಗುತ್ತಿದೆ. ಅಗತ್ಯ ಸಂಖ್ಯೆಯಲ್ಲಿ ಪೊಲೀಸರನ್ನೂ ನಿಯೋಜಿಸಲಾಗಿದೆ. ಕೋವಿಡ್ 19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಇದರಂತೆ 10 ಮತ್ತು 60 ವರ್ಷದೊಳಗಿನವರಿಗೆ ಮಾತ್ರ ದರ್ಶನಾವಕಾಶ ಸಿಗಲಿದೆ. ಶಬರಿಮಲೆಗೆ ವಡಶ್ಶೇರಿಕರ ಮತ್ತು ಎರುಮೇಲಿ ರಸ್ತೆ ಬಿಟ್ಟು ಉಳಿದೆಲ್ಲ ರಸ್ತೆ ಬಂದ್ ಆಗಿದೆ ಎಂದು ಮುಖ್ಯಮಂತ್ರಿ ಹೇಳಿದರು. (ಏಜೆನ್ಸೀಸ್)

    ಸ್ಟೀಲ್ ಗ್ಯಾಸ್ ಸ್ಟವ್​ – ಮೌಲ್ಯ ಕೋಟಿ ರೂಪಾಯಿ ಆಸುಪಾಸು! ಕಸ್ಟಮ್ಸ್ ವಿವರಣೆ ಹೀಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts