More

    Web Exclusive: ಅಬಕಾರಿ ಸಬ್ ಇನ್​ಸ್ಪೆಕ್ಟರ್​ಗಳಿಗೆ ಬೈಕ್ ಭಾಗ್ಯ; ಅಕ್ರಮ ಮದ್ಯ ಮಾರಾಟ ತಡೆಯಲು ಅನುಕೂಲ

    ಬೆಂಗಳೂರು: ರಾಜಸ್ವ ಹೆಚ್ಚಳ ಹಾಗೂ ಅಕ್ರಮ ಮದ್ಯ ಮಾರಾಟ ತಡೆಯುವ ಉದ್ದೇಶದಿಂದ ಅಬಕಾರಿ ಇಲಾಖೆಯು ಸಬ್ ಇನ್​ಸ್ಪೆಕ್ಟರ್​ಗಳಿಗೆ ಬೈಕ್ ಭಾಗ್ಯ ಕರುಣಿಸಲಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಈಗಾಗಲೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

    ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ತಂದುಕೊಡುವಲ್ಲಿ ಇಲಾಖೆ 2ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಮುತ್ತಷ್ಟು ಆದಾಯ, ಮದ್ಯದಂಗಡಿ ತಪಾಸಣೆ, ಗುಪ್ತ ಮಾಹಿತಿ ಸಂಗ್ರಹಣೆ, ರಸ್ತೆ ಗಸ್ತು, ರಾತ್ರಿ ಕಾವಲು, ಕಳ್ಳಭಟ್ಟಿ ಕೇಂದ್ರಗಳ ಹಾಗೂ ನಕಲಿ ಮದ್ಯ ತಯಾರಿಕಾ ಕೇಂದ್ರಗಳ ದಾಳಿ ಸೇರಿ ಜಾರಿ ಮತ್ತು ತನಿಖಾ ಚಟುವಟಿಕೆಗಳನ್ನು ಚುರುಕುಗೊಳಿಸಲು ಹಾಗೂ ಅಬಕಾರಿ ಅಕ್ರಮಗಳನ್ನು ತಡೆಗಟ್ಟಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುಲು ಸಬ್ ಇನ್​ಸ್ಪೆಕ್ಟರ್​ಗಳಿಗೆ ಬೈಕ್ ನೀಡಲು ಇಲಾಖೆ ನಿರ್ಧರಿಸಿದೆ. ಇದನ್ನೂ ಓದಿ: Web Exclusive: ಹೊಸ ಪಿಯು ಕಾಲೇಜು ಆರಂಭಕ್ಕೂ ಕರೊನಾ ಛಾಯೆ; ಶೈಕ್ಷಣಿಕ ವರ್ಷದ ಅನಿಶ್ಚಿತತೆ

    ಮಾಹಿತಿ ನೀಡಿ

    ಆಯಾ ವಲಯದ ಅಬಕಾರಿ ಜಂಟಿ ಆಯುಕ್ತರು, ಉಪ ಆಯುಕ್ತರು, ಉಪ ಅಧೀಕ್ಷಕರು ಹಾಗೂ ನಿರೀಕ್ಷಕರ ಕಚೇರಿಗಳಲ್ಲಿ ವಾಹನದ ಅಗತ್ಯತೆ, ಎಷ್ಟು ಬೈಕ್​ಗಳು ಬೇಕಾಗಿವೆ ಹಾಗೂ ಎಷ್ಟು ಸಬ್ ಇನ್​ಸ್ಪೆಕ್ಟರ್​ಗಳು ಇದ್ದಾರೆ ಮತ್ತಿತರರ ಮಾಹಿತಿಗಳನ್ನು ನೀಡುವಂತೆ ಅಬಕಾರಿ ಜಂಟಿ ಆಯುಕ್ತರಿಗೆ ಹಾಗೂ ಉಪ ಆಯುಕ್ತರಿಗೆ ಇಲಾಖೆ ಈಗಾಗಲೇ ಸೂಚನೆ ನೀಡಿದೆ.

    ವಾಹನ ಕೊರತೆ ನಿಗಲಿದೆ

    ಅಬಕಾರಿ ಉಪ ನಿರೀಕ್ಷಕರಗಳ ಹುದ್ದೆಯನ್ನು ವಲಯ, ಉಪವಿಭಾಗ, ಡಿ.ಸಿ.ಸ್ಕಾ್ವಡ್ ಹಾಗೂ ಜೆ.ಸಿ.ಸ್ಕಾ್ವಡ್​ಗಳಲ್ಲಿ ಸೃಜಿಸಲಾಗಿದೆ. ಈ ಎಲ್ಲ ಕಚೇರಿಗಳು ಅಬಕಾರಿ ನಿರೀಕ್ಷಕರು ಹಾಗೂ ಉಪ ಅಧೀಕ್ಷಕರು ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆಯಲ್ಲಿ ವಲಯ ಅಬಕಾರಿ ನಿರೀಕ್ಷಕರ ಕಚೇರಿ ಮತ್ತು ಮೇಲ್ಪಟ್ಟ ಕಾರ್ಯನಿರ್ವಾಹಕ ಕಚೇರಿಗಳಲ್ಲಿ ಜಾರಿ ಮತ್ತು ತನಿಖಾ ಕರ್ತವ್ಯ ನಿರ್ವಹಿಸಲು ಕಚೇರಿಗೆ ಒಂದರಂತೆ ಸರ್ಕಾರದಿಂದ ನಾಲ್ಕು ಚಕ್ರದ ವಾಹನ ನೀಡಲಾಗಿದೆ. ಆದರೆ, ಒಂದು ಕಚೇರಿಯಲ್ಲಿ 2-3 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಜಾರಿ ಮತ್ತು ತನಿಖಾ ಕಾರ್ಯಗಳಿಗೆ ಒಂದೇ ವಾಹನ ಆವಲಂಬಿಸಿದ್ದು, ವಾಹನ ಕೊರತೆ ಎದುರಾಗಿದೆ. ಆದ್ದರಿಂದ, ಇದನ್ನು ಬಗೆಹರಿಸಲು ಮೊದಲ ಬಾರಿಗೆ ಸಬ್ ಇನ್​ಸ್ಪೆಕ್ಟರ್​ಗಳಿಗೆ ಬೈಕ್ ನೀಡಲಾಗುತ್ತದೆ. ಇದನ್ನೂ ಓದಿ: Web Exclusive: ಠಾಣೆ ಡ್ಯೂಟಿಗೆ ಗೃಹರಕ್ಷಕರ ಪೈಪೋಟಿ; ಅಧಿಕಾರಿಗಳಿಗೆ ನಿಯೋಜನೆ ತಲೆನೋವು

    ಪುನರ್ ರಚನೆ

    ಆದಾಯ ಸೋರಿಕೆ ತಡೆಯಲು ಹಾಗೂ ನಿಯಮಗಳನ್ನು ಕಾರ್ಯರೂಪಕ್ಕೆ ತರಲು 13 ವರ್ಷ ಬಳಿಕ ಅಬಕಾರಿ ಇಲಾಖೆಯನ್ನು ಪುನರ್ ರಚಿಸಲಾಗಿದೆ. ಈ ಕ್ರಮದಿಂದ ಅನಗತ್ಯ ಖರ್ಚುಗಳಿಗೆ ಕಡಿವಾಣ ಬಿದ್ದರೆ ಮತ್ತಷ್ಟು ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಲು ಸಹಾಯವಾಗುತ್ತದೆ. ಅಲ್ಲದೆ, ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಇಲಾಖೆ ಕಾರ್ಯವೈಖರಿ ಮತ್ತಷ್ಟು ಉತ್ತಮಗೊಳಿಸಲು ಅನುಕೂಲವಾಗಲಿದೆ. ಇಲಾಖೆಯಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಕೆಲ ಹುದ್ದೆಗಳನ್ನು ಉನ್ನತೀಕರಿಸಿ ಕೆಲ ಹುದ್ದೆಗಳನ್ನು ಮರು ವಿನ್ಯಾಸಗಳಿಸಿ ಸಿಬ್ಬಂದಿ ಕೊರತೆ ಇರುವ ಕಚೇರಿಗಳಿಗೆ ನೇಮಿಸಲಾಗಿದೆ. ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ವಿಭಾಗೀಯ ಕಚೇರಿಗಳನ್ನು ಮರು ವಿನ್ಯಾಸಗೊಳಿಸಲಾಗಿದೆ. ಇಲಾಖೆಯಲ್ಲಿ ಹಾಲಿ ಇರುವ ವಾಹನಗಳು, ಕಚೇರಿಗಳು, ಪೀಠೋಪಕರಣಗಳು ಹಾಗೂ ಮೂಲಭೂತ ಸೌಕರ್ಯ ಬಳಕೆ ಮಾಡಿಕೊಂಡಿದ್ದು,ಆರ್ಥಿಕ ಹೊರೆಯಾಗದಂತೆ ಮರು ವಿನ್ಯಾಸ ಕಾರ್ಯ ಅನುಷ್ಠಾನಗೊಳಿಸಲಾಗಿದೆ ಎಂದು ಸಚಿವ ಎಚ್. ನಾಗೇಶ್ ತಿಳಿಸಿದ್ದಾರೆ.

    ಅಬಕಾರಿ ಅಕ್ರಮಗಳನ್ನು ತಡೆಗಟ್ಟಿ ಪರಿಣಾಮಕಾರಿ ಕಾರ್ಯನಿರ್ವಹಿಸಲು ಸಬ್ ಇನ್​ಸ್ಪೆಕ್ಟರ್​ಗಳಿಗೆ ಬೈಕ್ ನೀಡುವ ಬಗ್ಗೆ ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿಗಳನ್ನು ಪ್ರೋತ್ಸಾಹಿಸಲು ಹೊಸ ಯೋಜನೆ ತರುವ ಆಲೋಚನೆಗಳಿವೆ.

    | ಎಚ್.ನಾಗೇಶ್ ಅಬಕಾರಿ ಸಚಿವ  

    Web Exclusive: ‘ತೀರ್ಥೋದ್ಭವ’ ಪ್ರವೇಶಕ್ಕೆ ಹೆಚ್ಚಿದ ಒತ್ತಡ; ಕೋವಿಡ್ ತಡೆ ನಿಯಮ ಪಾಲನೆಗೆ ಸಮ್ಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts