More

    ಅಂಜನಾದ್ರಿಗೆ ಹರಿದು ಬಂದ ಭಕ್ತ ಸಾಗರ

    ಗಂಗಾವತಿ: ತಾಲೂಕಿನ ಹನುಮನಹಳ್ಳಿಯ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಭಕ್ತ ಸಾಗರ ಶನಿವಾರ ಹರಿದು ಬಂದಿದ್ದು, ದರ್ಶನಕ್ಕಾಗಿ ಸರದಿಯಲ್ಲಿ ನಿಂತಿದ್ದರು.

    ಬಿಸಿಲಿನ ಪ್ರಖರತೆ ಮತ್ತು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ತಿಂಗಳು ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಇಳಿಮುಖವಾಗಿದ್ದು, 56 ದಿನಗಳಲ್ಲಿ 30ಲಕ್ಷ ರೂ. ಹುಂಡಿ ಹಣ ಸಂಗ್ರಹವಾಗಿತ್ತು. ಮುಂಗಾರು ಶುರುವಾಗುತ್ತಿದ್ದಂತೆ ಮತ್ತು ರಾಜ್ಯದಲ್ಲಿ ಲೋಕ ಚುನಾವಣೆ ಮುಗಿಯುತ್ತಿದ್ದಂತೆ ಭಕ್ತರು ಅಂಜನಾದ್ರಿಯತ್ತ ಬರುತ್ತಿದ್ದು, ಬೆಳಗ್ಗೆ 5ರಿಂದಲೇ ಬೆಟ್ಟ ಹತ್ತಲು ಮುಗಿಬಿದ್ದಿದ್ದರು.

    ದರ್ಶನಕ್ಕಾಗಿ ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದು, ಭಕ್ತರಿಗೆ ತೊಂದರೆಯಾಗದಂತೆ ಮೂಲ ಸೌಕರ್ಯ ಕಲ್ಪಿಸಲಾಗಿತ್ತು. ಈ ಬಗ್ಗೆ ದೇವಾಲಯದ ಕಾರ್ಯದರ್ಶಿ ಮಂಜುನಾಥ ಹಿರೇಮಠ ಮಾತನಾಡಿ, ಶನಿವಾರ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಹೊರ ರಾಜ್ಯದಿಂದಲೂ ಅನೇಕ ಭಕ್ತರು ಬಂದಿದ್ದರು. ಯಾವುದೇ ತೊಂದರೆಯಾಗದಂತೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts