More

  ಅಂಜನಾದ್ರಿ ಹುಂಡಿಯಲ್ಲಿ 34.86 ಲಕ್ಷ ರೂ. ಸಂಗ್ರಹ

  ಗಂಗಾವತಿ: ತಾಲೂಕಿನ ಅಂಜನಾದ್ರಿ ಬೆಟ್ಟದ ದೇವಾಲಯದ ಹುಂಡಿಯಲ್ಲಿ 34.86 ಲಕ್ಷ ರೂ. ಸಂಗ್ರಹವಾಗಿದ್ದು, ವಿದೇಶಿ ನೋಟು ಮತ್ತು ನಾಣ್ಯಗಳು ದೊರೆತಿವೆ ಎಂದು ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್ ತಿಳಿಸಿದರು.

  ಮುಜರಾಯಿ ಇಲಾಖೆಗೊಳಪಡುವ ದೇವಾಲಯದ ಹುಂಡಿಯನ್ನು ಭದ್ರತಾ ಹಿನ್ನೆಲೆಯಲ್ಲಿ ತಿಂಗಳಿಗೊಮ್ಮೆ ತೆರೆಯಲಾಗುತ್ತಿದೆ. ಕಂದಾಯ ಸಿಬ್ಬಂದಿ ಮತ್ತು ಭಕ್ತರ ಸಮ್ಮುಖದಲ್ಲಿ ಹುಂಡಿತೆರೆಯಲಾಗಿದೆ. 46 ದಿನಗಳಲ್ಲಿ 34,86,965ರೂ. ಸಂಗ್ರಹವಾಗಿದ್ದು, ಎರಡು ವಿದೇಶಿ ನೋಟು ಮತ್ತು ಒಂಬತ್ತು ನಾಣ್ಯಗಳು ಸಿಕ್ಕಿವೆ. ಸಂಗ್ರಹಿತ ಹಣವನ್ನು ಸಣಾಪುರದ ಪಿಕೆಜಿ ಬ್ಯಾಂಕ್‌ನಲ್ಲಿ ಜಮೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕೆ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತಿದೆ ಎಂದರು.

  ಶಿರಸ್ತೇದಾರಾದ ರವಿಕುಮಾರ್ ನಾಯಕ್ವಾಡಿ, ಅನಂತ ಜೋಶಿ, ಮಹೆಬೂಬ್‌ಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ್, ಕಚೇರಿ ಸಿಬ್ಬಂದಿ ಶ್ರೀಕಂಠ, ಗುರುರಾಜ, ಅನ್ನಪೂರ್ಣಾ, ಎಂ.ಡಿ.ರಫೀಕ್, ಸುಧಾ, ಶ್ರೀರಾಮ ಜೋಷಿ, ಗಾಯತ್ರಿ, ಕವಿತಾ, ಸೌಭಾಗ್ಯ, ಕೆ.ಕವಿತಾ, ಗ್ರಾಮಾಡಳಿತಾಧಿಕಾರಿಗಳಾದ ಮಂಜುನಾಥ ದಮ್ಮಾಡಿ, ಅಸ್ಲಾಂ ಪಟೇಲ್, ಪಿ.ಮಹಾಲಕ್ಷ್ಮೀ, ಬ್ಯಾಂಕ್ ಪ್ರತಿನಿಧಿ ಸುನೀಲ್, ರಾಜಶೇಖರ್, ದೇವಾಲಯ ವ್ಯವಸ್ಥಾಪಕ ಎಂ.ವೆಂಕಟೇಶ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts