More

    ಪುಸ್ತಕ ಮಂಥನದ ಅಮೃತ ಸಿಂಚನ

    ಪುಸ್ತಕ ಮಂಥನದ ಅಮೃತ ಸಿಂಚನ‘ಹಣವೆಂಬುದು ಗೊಬ್ಬರವಿದ್ದಂತೆ, ಕೂಡಿಟ್ಟರೆ ವಾಸನೆ; ಹರಡಿದರೆ ಫಲವತ್ತಾದ ಬೆಳೆ!’ ಎಂಬುದು ಅನುಭಾವಿಯ ನುಡಿ. ಒಟ್ಟಾರೆ ಹಣವನ್ನು ಬುದ್ಧಿಯಾಗಿ ಪರಿವರ್ತಿಸಿಕೊಳ್ಳಬೇಕಿದ್ದರೆ ಪುಸ್ತಕ ಕೊಳ್ಳಬೇಕು, ಓದಬೇಕು, ಓದಿದ್ದನ್ನು ಮಂಥನ ಮಾಡಬೇಕು. ಆಗ ನಮ್ಮ ಬುದ್ಧಿಯು ವಿಕಾಸವಾಗುವುದು ಶತಃಸಿದ್ಧ.

    ಪ್ರಪಂಚವು ಎಂದೂ ಸ್ಪರ್ಧಾತ್ಮಕವಾದದ್ದು. ನಿಜಕ್ಕೂ ಜಗತ್ತೆಂಬುದೇ ನಮ್ಮ ಮುಂದಿರುವ ಸವಾಲು. ಈ ಪ್ರಪಂಚವೆಂಬ ಕ್ರೀಡಾಂಗಣದಲ್ಲಿ ನಾವು ಆಟಗಾರರ ಪಾತ್ರ ವಹಿಸಿದ್ದೇವೆ. ಅನಾದಿಕಾಲದಿಂದ ಮುನ್ನಡೆಯುತ್ತ ಸಾಗಿರುವ ಮಾನವ ನಾಗರಿಕತೆಯು ತನ್ನ ಸಂಕುಲಕ್ಕೆ ನಿಖರ ಪಾಠವೊಂದನ್ನು ಬೋಧಿಸುತ್ತ, ‘ಜೀವನವು ಸುಲಭವಲ್ಲ, ಆರಾಮದಾಯಕವೂ ಅಲ್ಲ, ಭೋಗಲಾಲಸೆಯಲ್ಲ, ಸ್ವಾರ್ಥಕೇಂದ್ರಿತನಾಗಿ ಉಸಿರಾಡುತ್ತಿದ್ದರೆ ಕ್ರಿಯಾಶೀಲತೆ ನಿನ್ನ ಬಳಿ ಸುಳಿಯದು… ನೆನಪಿಡು, ಬದುಕೊಂದು ಅನ್ವೇಷಣೆ!’ ಎಂದು ತಿಳಿವಳಿಕೆಯನ್ನು ನೀಡಿದೆ.

    ಇದನ್ನೂ ಓದಿ:  COVID19- ಅಶ್ವಗಂಧದ ನಿಯಂತ್ರಿತ ಕ್ಲಿನಿಕಲ್ ಟ್ರಯಲ್​ಗೆ ಮುಂದಾಗಿದೆ ಸರ್ಕಾರ

    ಜೀವನವನ್ನು ಅನ್ವೇಷಣೆ ಎಂದಾದ ಮೇಲೆ ಮಾನವನಿಗೆ ಅಧ್ಯಯನ ಸಂಸ್ಕಾರ ಅತಿಮುಖ್ಯವಾಗುತ್ತದೆ. ‘ವಿದ್ಯಾ ವಿಹೀನ; ಪಶುಃ’ ಎಂಬ ಋಷಿವಾಣಿಯು ‘ವಿದ್ಯೆಯಿಲ್ಲದವನು ಪಶುವಿಗೆ ಸಮಾನ’ ಎಂಬ ತೀರ್ವನವನ್ನೇ ಇತ್ತಿದೆ. ಇಲ್ಲಿಯವರೆಗೆ ಮೃಗವು ವಿಕಾಸ ಹೊಂದಿ ಮನುಷ್ಯ ಸ್ವರೂಪಕ್ಕೆ ಪದೋನ್ನತಿ ಹೊಂದುತ್ತದೆಂಬ ವಿಚಾರ ನಮಗೆ ಆನಂದದಾಯಕ ಸಂಗತಿ ಆಗಿತ್ತು. ಇದು ವಿಕಾಸ ವಿಜ್ಞಾನದ ಅದ್ಭುತ ಸಂದೇಶವೇ ಆಗಿತ್ತು. ಆದರೆ ವೇದಾಂತಶಾಸ್ತ್ರ ಎಚ್ಚರಿಸಿದ್ದು ಹೀಗೆ-‘ಹೇ ಜೀವಿಯೇ, ನೀನು ಮನುಷ್ಯನಾಗಿ ವಿಕಾಸಗೊಂಡು, ವಿದ್ಯೆಯನ್ನು ಸಂಪಾದಿಸದೆ ಮೈಮರೆತದ್ದೇ ಆದರೆ ನೀನು ಮನುಷ್ಯರೂಪದ ಮೃಗವೆಂದು ಪರಿಗಣಿಸಬೇಕಾಗುತ್ತದೆ!’.

    ವಿದ್ಯೆಯನ್ನು ಕಲಿಯಲೇಬೇಕೆಂಬ ಎಚ್ಚರಿಕೆಯನ್ನು ಮಾನವನಲ್ಲಿ ಜಾಗೃತಿ ಮೂಡಿಸಲು ಪ್ರಸ್ತಾಪಿಸಿದರೆ, ‘ವಿದ್ಯಾ ಗುರೂಣಾಂ ಗುರುಃ’ ಎಂದಿರುವ ಋಷಿಉಕ್ತಿ ವಿದ್ಯೆ ಕಲಿಸುವ ಗುರುವು ತಾನೆಲ್ಲವನ್ನೂ ಅರಿತಿದ್ದೇನೆಂಬ ಅಹಂಕಾರಕ್ಕೆ ತುತ್ತಾಗಬಾರದೆಂಬ ಉದ್ದೇಶದಿಂದ ಶಿಷ್ಯನಿಗೆ ಪಾಠ ಕಲಿಸುವ ವ್ಯಕ್ತಿಯು ಗುರು ಎಂದೆನಿಸಿದರೆ ಗುರುವಿಗೆ ಜೀವನಪರ್ಯಂತ ‘ವಿದ್ಯೆ’ಯೇ ಗುರು ಎಂಬ ಮನೋಜ್ಞವಾದ ಸಂದೇಶವನ್ನಿತ್ತಿದೆ.

    ಇದನ್ನೂ ಓದಿ: VIDEO| ನೈಲ್​ ನದಿಯ ಹಿಪ್ಪೋಗಳನ್ನು ನೆನಪಿಸುವ ಆನೆಗಳ ಹಿಂಡು

    ‘ಸಾ ವಿದ್ಯಾ ಯಾ ವಿಮುಕ್ತಯೇತ್’- ‘ಯಾವ ಕಲಿಕೆಯು ಮಾನವನನ್ನು ಸಕಲ ಅಜ್ಞಾನಗಳಿಂದ ಪಾರು ಮಾಡಿ ಸಂರಕ್ಷಿಸುತ್ತದೆಯೋ ಅದೇ ನಿಜವಾದ ವಿದ್ಯೆ. ಇದು ಉಪನಿಷತ್ತಿನ ನಿಲುವು. ಆಧುನಿಕ ಪ್ರಪಂಚದಲ್ಲಿ ಲೋಕಶಿಕ್ಷಣಕ್ಕೆಂದೇ ಜಗನ್ಮಾತೆಯಿಂದ ಸಂಯೋಜಿಸಲ್ಪಟ್ಟು ಅವತರಿಸಿದ ಸ್ವಾಮಿ ವಿವೇಕಾನಂದರು, ‘ಮಾನವನ ಸಕಲ ಸಮಸ್ಯೆಗಳಿಗೂ ಶಿಕ್ಷಣವೊಂದೇ ರಾಮಬಾಣ’ ಎಂದು ಸಾರಿದ್ದಾರೆ. ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಶಿಕ್ಷಣವೆಂಬುದು ಮಾನವನ ಅಭ್ಯುದಯಕ್ಕೆ ಅತ್ಯಂತ ಪೂರಕವಾದ ಕಲಿಕೆಯಾಗಿದೆ. ಇಲ್ಲಿ ಅಕ್ಷರ ಕಲಿಕೆಗೆ ಸ್ಥಾನವಿದೆ; ಬುದ್ಧಿ, ಭಾವನೆಗಳ ವಿಕಸನ ಹಾಗೂ ಶುದ್ಧೀಕರಣಕ್ಕೆ ಒತ್ತು ನೀಡಲಾಗಿದೆ; ಸ್ವಾವಲಂಬನೆ, ಸ್ವಾಭಿಮಾನವನ್ನು ಎತ್ತಿ ಹಿಡಿದಿದೆ! ಮಾನವಜೀವನವನ್ನು ಸುದೀರ್ಘ ಪಯಣವೆಂದೆಣಿಸಿದರೆ, ನಮ್ಮ ಸಂಚಾರಕ್ಕೆ ಕಲಿಕೆ ಎಂಬುದೇ ನಮ್ಮ ಜೀವನವನ್ನು ಸ್ಥಗಿತಗೊಳ್ಳಲು ಆಸ್ಪದವೀಯದ, ಪ್ರಜ್ಞಾಜಗತ್ತಿನಲ್ಲಿ ಆನಂದಿಸಲು ಪೂರಕವಾಗುವಂತೆ ಜೀವಂತಿಕೆಯ ಉರುವಲು ಅರ್ಥಾತ್ ಇಂಧನ! ಆದ್ದರಿಂದಲೇ ಶ್ರೀರಾಮಕೃಷ್ಣರು ಹೇಳಿದ್ದು-‘ನಾನು ರಾತ್ರಿ ನಿದ್ರೆ ಬರುವವರೆಗೆ, ಜೀವನಪ್ರಯಾಣದ ಕಡೆಯುಸಿರು ಇರುವವರೆಗೂ ಕಲಿಯುತ್ತೇನೆ’ ಎಂದು.

    ಸ್ಪರ್ಧಾತ್ಮಕವೆನಿಸಿದ ಈ ಪ್ರಪಂಚವು ನಮ್ಮ ಮುಂದೆ ಒಡ್ಡುವ ಸವಾಲನ್ನು ಪ್ರಬಲ ವ್ಯಕ್ತಿಗಳು ಸಮರ್ಪಕವಾಗಿ ಎದುರಿಸಿ ಹೋರಾಟದಲ್ಲಿ ಜಯಶಾಲಿಗಳಾಗುತ್ತಾರೆಂಬುದೂ ಅಧ್ಯಯನಯೋಗ್ಯ ಚಿಂತನೆ. ಎದುರಿಸಲಾರದವರು ಕಂಗಾಲಾದರೆ, ಸೋತು ಸತ್ತವರು ಮುಂದೆ ಪುನಃ ಜನ್ಮ ತಳೆದು ಹೋರಾಟ ಮುಂದುವರಿಸುತ್ತಾರೆ, ಏಕೆಂದರೆ ಗೆಲ್ಲುವವರೆಗೂ ನಿಲ್ಲುವಂಥದಲ್ಲ ಅಂತರ್ಯಾಮಿ ಆತ್ಮ! ಇಲ್ಲಿ ನಮಗೆ ‘ಜೀವನ’ ಹಾಗೂ ‘ಶಿಕ್ಷಣ’ ಎಂಬುವು ಪರ್ಯಾಯ ಪದಗಳೋ ಎಂದೆನಿಸದಿರದು!

    ಜೀವನದಲ್ಲಿ ಕರ್ತವ್ಯವೇನು? ಎಂದು ತಿಳಿಯಲು ಹೊರಟಾಗ ಜೀವನವೇ ಕರ್ತವ್ಯ ಎಂಬ ಸತ್ಯ ಗೋಚರಿಸುವುದು ಸುಳ್ಳಲ್ಲ. ಸ್ವಾಮಿ ವಿವೇಕಾನಂದರು ಹೇಳುವಂತೆ, ‘ಮಾನವ ಜೀವನದ ಉತ್ಕೃಷ್ಟ ಧ್ಯೇಯ ಸುಖ ಸಂಪಾದನೆಯಲ್ಲ; ಜ್ಞಾನದ ಗಳಿಕೆ!’ ಆದ್ದರಿಂದ ಶಿಕ್ಷಣವು ಮಾನವ ನಾಗರಿಕತೆಯ ಉದ್ದಕ್ಕೂ ತನ್ನ ಅವಶ್ಯಕತೆ, ವೈಭವಗಳನ್ನು ವಿಜೃಂಭಿಸುತ್ತ ಸಾಗಿದೆ.

    ಇದನ್ನೂ ಓದಿ:  ಮಾತೃ ಹೃದಯಕ್ಕೆ ಸಾಟಿ ಎಲ್ಲಿ? ಮರಿ ಎತ್ತಿಕೊಂಡು ಎಮರ್ಜೆನ್ಸಿ ವಾರ್ಡ್​ನತ್ತ ಓಡಿದ ಬೆಕ್ಕು!.

    ಜ್ಞಾನಾರ್ಜನೆಯ ಏಕೈಕ ಮಾರ್ಗವೆಂದರೆ ‘ಅಧ್ಯಯನ’. ’To see is to observe; to observe is to absorb!’ ಎಂಬ ಮಾತು ಅಧ್ಯಯನದ ಆಳ ಅಗಲಗಳನ್ನು ತೆರೆದಿಡುತ್ತದೆ. ಮನುಷ್ಯನಿಗೆ ಅಧ್ಯಯನವು ದೊರಕಿಸಿಕೊಡುವ ಸುಖಲಾಭಗಳು ಮತ್ತೆಲ್ಲೂ ದೊರೆಯಲು ಸಾಧ್ಯವೇ ಇಲ್ಲ.

    ಸಮುದ್ರಮಂಥನದ ಕಥೆ ನಮ್ಮ ಅರಿವಿಗಿದೆ. ಸಾಮಾನ್ಯ ವಸ್ತುಗಳಿಂದ ಮೊದಲ್ಗೊಂಡು, ಅತ್ಯುತ್ತಮ ವಸ್ತುಗಳಿಂದ ಮುಂದುವರಿದು, ಮಾರ್ಗಮಧ್ಯದಲ್ಲಿ ಹಾಲಾಹಲವೆಂಬ ಘೊರ ವಿಷವೂ ಉತ್ಪತ್ತಿಯಾಗಿ ಅಂತಿಮವಾಗಿ ಅಮೃತವು ಪ್ರಾಪ್ತವಾದ ಈ ಕಥೆ ಅತ್ಯಂತ ರೋಚಕವಾದದ್ದು. ಅಂತೆಯೇ ಪುಸ್ತಕ ಮಂಥನವೂ ಸದಾ ನಮ್ಮ ಬದುಕಿಗೆ ಸರ್ವತೋಮುಖವಾದ ಪ್ರಗತಿಪಥವನ್ನಿತ್ತು ಮುನ್ನಡೆಸಬಲ್ಲದು. ಪುಸ್ತಕದ ವೈಭವ- ಅದೊಂದು ವಿಶ್ವರೂಪದರ್ಶನವೇ ಹೌದು. ಅದು ಹತಾಶನ ಹೃದಯಕ್ಕೆ ಆಶಾಕಿರಣ ಆಗಬಲ್ಲದು, ಆಶಾವಾದಿಯ ಜೀವನಕ್ಕೆ ಚೈತನ್ಯದ ಚಿಲುಮೆಯೂ ಆಗಬಲ್ಲದು. ಉತ್ತಮ ಪುಸ್ತಕವು ವ್ಯಕ್ತಿಯ ಪ್ರಗತಿ, ಸಮಾಜದ ರೀತಿ, ರಾಷ್ಟ್ರದ ಅಭ್ಯುದಯ ಇವೆಲ್ಲವನ್ನೂ ಸಾಧಿಸುತ್ತದೆ. ಆದರ್ಶ ಮಾತೆಯ ಸ್ಥಾನವನ್ನು ಅಲಂಕರಿಸುವ ಉತ್ತಮ ಪುಸ್ತಕವು ಜೀವನವನ್ನು ಚಿರಂಜೀವಿಯೂ ಆಗಿಸಬಲ್ಲದು.

    ಇದನ್ನೂ ಓದಿ:  ಎಸ್​ಬಿಐ ಗ್ರಾಹಕರಿಗೊಂದು ಸಿಹಿ ಸುದ್ದಿ: ಸಾಲದ ದರ 15 ಮೂಲಾಂಶ ಕಡಿತ

    ರಾಮಕೃಷ್ಣ ಮಠದ ಬ್ರಹ್ಮಲೀನ ಪೂಜ್ಯ ಸ್ವಾಮಿ ಪುರುಷೋತ್ತಮಾನಂದಜೀ ಹೇಳಿದ್ದು- ‘ಒಂದಲ್ಲ ಒಂದು ದಿನ ಮನುಷ್ಯ ಮಾಯವಾಗುತ್ತಾನೆ. ಜನಾಂಗಕ್ಕೆ ಜನಾಂಗವೇ ಮಾಯವಾಗುತ್ತದೆ. ರಾಜ್ಯಕ್ಕೆ ರಾಜ್ಯವೇ ಮಾಯವಾಗುತ್ತದೆ. ನೋವು-ನಲಿವು, ಸ್ನೇಹ-ವೈರ, ಪ್ರಭುತ್ವ-ದಾಸ್ಯ ಎಲ್ಲವೂ ಮಾಯವಾಗುತ್ತದೆ. ಆದರೆ ಇವುಗಳನ್ನೆಲ್ಲ ಬಗೆಬಗೆಯಾಗಿ ಬಣ್ಣಿಸಿದ ಪುಸ್ತಕಗಳು ಮಾತ್ರ ಉಳಿದಿರುತ್ತವೆ’. ಈ ಅದ್ಭುತ ಅನುಭಾವಿಗಳ ಮಾತು-‘ಪ್ರಪಂಚದಲ್ಲಿ ಮರಣವಿಲ್ಲದ ಏಕೈಕ ವಸ್ತು ಪುಸ್ತಕ’ ಎಂದು ಸಾರುತ್ತದೆ ಅಲ್ಲವೇ?

    ಜಗತ್ತಿನಲ್ಲಿ ತಮ್ಮ ಸಾಧನೆಗಳ ಮೂಲಕ ಜನರ ಹೃನ್ಮನಗಳಲ್ಲಿ ಸ್ಥಾನಪಡೆದ ದಿಗ್ಗಜರನೇಕರು ತಮ್ಮ ಬದುಕಿನಲ್ಲಿ ಪುಸ್ತಕಾಧ್ಯಯನದಿಂದ ಪ್ರಭಾವಿತರಾದ ಸತ್ಯವನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಕೆಲವರನ್ನು ಹೆಸರಿಸಬಹುದಾದರೆ, ವಿಜ್ಞಾನಿ ಆಲ್ಬರ್ಟ್ ಐನ್​ಸ್ಟೀನ್​ರ ಬಗ್ಗೆ ಡೇವಿಡ್ ಹ್ಯೂಮ್ ಬರೆದ ‘ಎ ಟ್ರಿಟೈಸ್ ಆಫ್ ಹ್ಯೂಮನ್ ನೇಚರ್’ ಎಂಬ ಪುಸ್ತಕ; ಎಂ.ಕೆ. ಗಾಂಧಿ ಬಗ್ಗೆ ‘ಆನ್ ಟು ದಿ ಲಾಸ್ಟ್’ ಎಂಬ ಜಾನ್ ರಸ್ಕಿನ್ನನ ಪುಸ್ತಕ, ಅಣ್ಣ ಹಜಾರೆಯವರಿಗೆ ‘ಸ್ವಾಮಿ ವಿವೇಕಾನಂದ’ ಎಂಬ ಪುಸ್ತಕ, ಸಾಫ್ಟ್​ವೇರ್ ದಿಗ್ಗಜ ಬಿಲ್​ಗೇಟ್ಸ್​ರವರಿಗೆ ಡೇವಿಡ್ ಬ್ರೂಕ್ಸ್​ರವರ ‘ದಿ ರೋಡ್ ಟು ಕ್ಯಾರೆಕ್ಟರ್’, ಅಂತರ್​ಜಾಲ ದಿಗ್ಗಜ ಸ್ಟೀವ್ ಜಾಬ್ಸ್​ರವರಿಗೆ ಪರಮಹಂಸ ಯೋಗಾನಂದರ ‘ಯೋಗಿಯ ಆತ್ಮಕಥೆ’- ಈ ಪುಸ್ತಕಗಳು ಪ್ರಭಾವ ಬೀರಿ ತಮ್ಮ ಬದುಕನ್ನು ಕಟ್ಟಿಕೊಂಡರಂತೆ!.

    ಇದನ್ನೂ ಓದಿ:  PHOTOS: ಕಾಂಗೋ ಗೊರಿಲ್ಲಾಗಳ 12 ರಕ್ಷಕರನ್ನೇ ಕೊಂದು ಹಾಕಿದ್ರು ಬಂಡುಕೋರರು!

    ಕನ್ನಡದ ನೆಲದಲ್ಲಿ ತಮ್ಮ ಸಾಹಿತ್ಯದ ಮೂಲಕ ಲಕ್ಷಾಂತರ ಜನರನ್ನು ಬದುಕಿನಲ್ಲಿ ಸರಿದಾರಿಗೆ ಪ್ರೇರೇಪಿಸಿದ ಕೀರ್ತಿ ಸ್ವಾಮಿ ಪುರುಷೋತ್ತಮಾನಂದರಿಗೆ ಸಲ್ಲುತ್ತದೆ. ಅವರು ಬರೆದ ಭಗವಾನ್ ಶ್ರೀರಾಮಕೃಷ್ಣ, ಶ್ರೀಮಾತೆ ಶ್ರೀಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳನ್ನು ಆಧರಿಸಿದ ಶ್ರೇಷ್ಠ ಗ್ರಂಥಗಳು ನೂರಾರು ಯುವಕ-ಯುವತಿಯರನ್ನು ತ್ಯಾಗ, ವೈರಾಗ್ಯ ಜೀವನಕ್ಕೆ ಪ್ರೇರೇಪಿಸಿವೆ. ಪೂಜ್ಯರು ಬರೆದ ‘ಕರ್ನಾಟಕದ ಯುವಜನತೆಗೊಂದು ಕರೆ’ ಎಂಬ ಪುಸ್ತಕವು ಗಂಗೋತ್ರಿಯಂತೆ ಪ್ರೇರಣೆ ನೀಡಿ ಕರ್ನಾಟಕದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ದಿವ್ಯತ್ರಯರ ಹೆಸರಿನಲ್ಲಿ ಆಶ್ರಮಗಳು ಸ್ಥಾಪನೆಗೊಂಡಿವೆ ಅಲ್ಲದೆ ನೂರಾರು ಸಾರ್ವಜನಿಕ ಸೇವಾ ಕೇಂದ್ರಗಳೂ ಮೈದಳೆದು ಆದರ್ಶಪೂರ್ಣವಾಗಿ ಶ್ರಮಿಸುತ್ತ ಸಾಗಿವೆ.

    ಬ್ರಹ್ಮಲೀನ ಪೂಜ್ಯ ಸ್ವಾಮಿ ಜಗದಾತ್ಮಾನಂದರ ‘ಬದುಕಲು ಕಲಿಯಿರಿ’, ಪೂಜ್ಯ ಸ್ವಾಮಿ ಹರ್ಷಾನಂದಜೀರವರ ‘Concise encyclopedia of Hinduism’, ಬ್ರಹ್ಮಲೀನ ಪೂಜ್ಯ ಸ್ವಾಮಿ ಸೋಮನಾಥಾನಂದರ ‘ಗೀತಾಭಾವಧಾರೆ’, ಡಿವಿಜಿಯವರ ‘ಜೀವನಧರ್ಮಯೋಗ’ ಹಾಗೂ ‘ಮಂಕುತಿಮ್ಮನ ಕಗ್ಗ’, ಬಾಬು ಕೃಷ್ಣಮೂರ್ತಿಯವರ ತರುಣರನ್ನು ಮೊದಲ್ಗೊಂಡು ಸರ್ವರಲ್ಲೂ ರಾಷ್ಟ್ರಭಕ್ತಿಯ ಪರಿಮಳವನ್ನು ಹೊರಹೊಮ್ಮಿಸುವ ‘ಅಜೇಯ’ ‘ಅದಮ್ಯ’… ಮೊದಲಾದ ಶ್ರೇಷ್ಠ ಕೃತಿಗಳು ಕನ್ನಡದ ನೆಲದಲ್ಲಿ ಮನೆಮಾತಾಗಿವೆ. ಗೂಗಲ್ ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಅದಾಗಲೇ ಹದಿಮೂರು ಕೋಟಿ ಶೀರ್ಷಿಕೆಗಳಲ್ಲಿ ಪುಸ್ತಕಗಳು ಪ್ರಕಟಣೆ ಕಂಡಿವೆ!

    ಇದನ್ನೂ ಓದಿ: ನಿರೀಕ್ಷಿಸಿ.. ಇನ್ನೊಂದು ಹಣಕಾಸಿನ ಪ್ಯಾಕೇಜ್​!

    ಪುಸ್ತಕಗಳ ಅಧ್ಯಯನದಿಂದೇನು ಪ್ರಯೋಜನ, ಎನ್ನುವಿರೋ? ‘ಪಠತೋ ನಾಸ್ತಿ ಮೂರ್ಖತ್ವಂ…’ ಎಂದಿದೆ ಸುಭಾಷಿತ, ‘ವಿದ್ಯೆಯುಳ್ಳವನಾ ಮುಖವು ಮುದ್ದು ಬರುವಂತಿಕ್ಕು; ವಿದ್ಯೆ ಇಲ್ಲದವನ ಬರಿಮುಖವು ಹಾಳೂರ ಹದ್ದಿನಂತಿಕ್ಕು’ ಎಂದಿದ್ದಾನೆ ಸರ್ವಜ್ಞ! ‘ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಗಳಂ ಕೇಳುತಂ, ಕೆಲವಂ ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತಂ’ ಎಂಬುದು ಸೋಮೇಶ್ವರ ಶತಕದ ಇಂಗಿತವಾದರೆ, ‘ವಿದ್ಯೆಯೆಂಬ ಧನವು ಐಶ್ವರ್ಯಗಳೆಲ್ಲದರಲ್ಲೂ ಮುಖ್ಯವಾದದ್ದು, ವಿದ್ಯೆಯನ್ನು ಕಳ್ಳ ಕದಿಯಲಾರ, ರಾಜ ವಶಪಡಿಸಿಕೊಳ್ಳಲಾರ, ಸೋದರರು ಭಾಗಕ್ಕಾಗಿ ಒತ್ತಾಯಿಸರು, ವಿದ್ಯೆಯು ಭಾರವಾದ ಸಂಪತ್ತು ಅಲ್ಲದಿದ್ದರೂ ಬಳಸಿದಂತೆ ದಿನ ಕಳೆಯುತ್ತ ಹೆಚ್ಚುತ್ತಲೇ ಸಾಗುವ ಸಂಪತ್ತು’ ಎಂದಿದ್ದಾರೆ ಪ್ರಾಜ್ಞರು.

    ಪುಸ್ತಕಗಳ ಅಧ್ಯಯನವು ಓದುಗನ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ, ಸಂಭಾಷಣೆಯ ಮಟ್ಟವನ್ನು ವೃದ್ಧಿಸುತ್ತದೆ, ಬರವಣಿಗೆಯ ಸಾಮರ್ಥ್ಯವನ್ನು ಉನ್ನತೀಕರಣಗೊಳಿಸುತ್ತದೆ, ವಿಶ್ಲೇಷಣಾತ್ಮಕ ಚಿಂತನ ಸಾಮರ್ಥ್ಯವನ್ನು ದೊರಕಿಸಿಕೊಡುತ್ತದೆ, ಕುತೂಹಲವನ್ನು ತಣಿಸುತ್ತದೆ, ನಿರ್ಣಯ ಸಾಮರ್ಥ್ಯ ಬೆಳೆಸುತ್ತದೆ, ಸೃಜನಶೀಲತೆಯನ್ನು ಉದ್ದೀಪನಗೊಳಿಸುತ್ತದೆ…, ಆಂತರ್ಯ ಸೌಂದರ್ಯವನ್ನು ವೃದ್ಧಿಸುತ್ತದೆ.

    ಇದನ್ನೂ ಓದಿ: ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ !

    ‘ಹಣವೆಂಬುದು ಗೊಬ್ಬರವಿದ್ದಂತೆ, ಕೂಡಿಟ್ಟರೆ ವಾಸನೆ; ಹರಡಿದರೆ ಫಲವತ್ತಾದ ಬೆಳೆ!’ ಎಂಬುದು ಅನುಭಾವಿಯ ನುಡಿ. ಒಟ್ಟಾರೆ ಹಣವನ್ನು ಬುದ್ಧಿಯಾಗಿ ಪರಿವರ್ತಿಸಿಕೊಳ್ಳಬೇಕಿದ್ದರೆ ಪುಸ್ತಕ ಕೊಳ್ಳಬೇಕು, ಓದಬೇಕು, ಓದಿದ್ದನ್ನು ಮಂಥನ ಮಾಡಬೇಕು. ಆಗ ನಮ್ಮ ಬುದ್ಧಿಯು ವಿಕಾಸವಾಗುವುದು ಶತಃಸಿದ್ಧ.

    ಶಾಲಾ-ಕಾಲೇಜುಗಳಲ್ಲಿ ಉತ್ತಮ ಗ್ರಂಥಾಲಯಗಳ ವ್ಯವಸ್ಥೆ ಇರಬೇಕು. ಪುಸ್ತಕಗಳನ್ನು ಕಪಾಟುಗಳಲ್ಲಿ ಜೋಡಿಸಿದರಷ್ಟೇ ಸಾಲದು, ಶಿಕ್ಷಕರನ್ನು ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಓದಿನಲ್ಲಿ ತಲ್ಲೀನರಾಗಿರುವುದನ್ನು ಕಾಣಬೇಕು. ಕಲಿಯಲು ಆಸಕ್ತಿ ಉಳ್ಳವರಷ್ಟೇ ಕಲಿಸಲು ಯೋಗ್ಯರಲ್ಲವೇ?

    ಕರ್ನಾಟಕ ಸರ್ಕಾರವು ‘ತೆಗೆಯಿರಿ ಪುಸ್ತಕ ಹೊರಗೆ; ಹಚ್ಚಿರಿ ಜ್ಞಾನದ ದೀವಿಗೆ’ ಎಂಬ ಹೊಸ ಯೋಜನೆಯನ್ನು ತಂದಿರುವುದು ಸ್ತುತ್ಯಾರ್ಹ ಕಾರ್ಯ. ರಾಮಕೃಷ್ಣಾಶ್ರಮದ ಚಿಂತಕ ಸ್ವಾಮಿಗಳೆಂದೇ ಖ್ಯಾತರಾದ ಸ್ವಾಮಿ ನಿರ್ಭಯಾನಂದರು, ‘ಮನೆಗಳಲ್ಲಿ ಪಾಲಕರು ಮಕ್ಕಳ ಅನುಕೂಲಕ್ಕಾಗಿ ಗ್ರಂಥಾಲಯದ ವ್ಯವಸ್ಥೆ ಮಾಡಬೇಕು. ಅದೊಂದು ಸರಸ್ವತೀ ಮಂದಿರ ಆಗುತ್ತದೆ’ ಎಂದೇ ಒತ್ತಾಯಿಸುತ್ತಾರೆ.

    ಇದನ್ನೂ ಓದಿ: COVID19- ಅಶ್ವಗಂಧದ ನಿಯಂತ್ರಿತ ಕ್ಲಿನಿಕಲ್ ಟ್ರಯಲ್​ಗೆ ಮುಂದಾಗಿದೆ ಸರ್ಕಾರ

    ’I will study and prepare myself and someday my choice will come’ ಎಂಬ ಅಬ್ರಹಾಂ ಲಿಂಕನ್ನನ ಮಾತು ಅದೆಷ್ಟು ಭರವಸೆ ಮೂಡಿಸುತ್ತದೆಯಲ್ಲವೇ? ‘ಪುಸ್ತಕಗಳು ಜಗತ್ತನ್ನು ಆಳುತ್ತವೆ’ ಎಂದಿದ್ದಾನೆ ಫ್ರಾನ್ಸ್ ಚಿಂತಕ ವಾಲ್ಟೇರ್. ವಿಶ್ವಸಂಸ್ಥೆಯು ಎರಡು ದಶಕಗಳ ಹಿಂದೆ ಏಪ್ರಿಲ್ 23ನೇ ದಿನಾಂಕವನ್ನು ‘ಅಂತಾರಾಷ್ಟ್ರೀಯ ಪುಸ್ತಕ ದಿನ’ವಾಗಿ ಆಚರಿಸಲು ಕೋರಿದೆ. ಅನಾದಿಕಾಲದಿಂದಲೂ ಭಾರತೀಯರಾದ ನಾವು ಶರನ್ನವರಾತ್ರಿಯಲ್ಲಿ ಶಾರದಾ-ಸರಸ್ವತಿ ಪೂಜೆಗೈಯುವುದು ಸರ್ವವಿದಿತ.

    ಪೂಜ್ಯ ಸ್ವಾಮಿ ಪುರುಷೋತ್ತಮಾನಂದರು ಹೇಳುತ್ತಾರೆ: ‘ರಾಷ್ಟ್ರನಿರ್ವಣ ಕಾರ್ಯ ನಮ್ಮ ಪರಿಶ್ರಮದಿಂದಾಗಬೇಕೇ ಹೊರತು ಅದಕ್ಕಾಗಿ ಪರಕೀಯರ ಮುಂದೆ ಕೈ ಚಾಚಬಾರದು. ಅಲ್ಲದೆ ರಾಷ್ಟ್ರನಿರ್ವಣ ಕಾರ್ಯವು ಯಶಸ್ವಿಯಾಗುವುದು ಮೂರ್ಖರಿಂದಲ್ಲ, ಬಾಯಿಬಡುಕರಿಂದಲ್ಲ; ಶೀಲವಂತರಿಂದ, ವಿವೇಕಿಗಳಿಂದ! ಸಮಾಜದಲ್ಲಿ ಶೀಲವಂತ ವಿವೇಕಿಗಳು ನಿರ್ವಣಗೊಳ್ಳುವುದು ಅತ್ಯುತ್ತಮ ಗ್ರಂಥಗಳ ಅಧ್ಯಯನದಿಂದ’. ಆಫ್ರಿಕಾದ ಪ್ರಾರ್ಥನೆಯೊಂದು ಹೀಗೆ ಹೇಳುತ್ತದೆ-‘ಜಗತ್ತೆಂಬ ಮಾರುಕಟ್ಟೆಗೆ ನಾವು ಬಂದಿದ್ದೇವೆ. ನಮ್ಮ ಕೈಯಲ್ಲಿರುವ ಬುಟ್ಟಿಯನ್ನು ತುಂಬಿಕೊಳ್ಳಬೇಕು. ನಾವು ತುಂಬಿಕೊಳ್ಳುತ್ತೇವೆಯೋ, ಇಲ್ಲವೋ, ನಮ್ಮ ಅವಧಿ ಬಂದಾಗ ಜಗತ್ತಿನ ಮಾರುಕಟ್ಟೆಯನ್ನು ಬಿಡಲೇಬೇಕು’.

    ಇದನ್ನೂ ಓದಿ: ವೈಜಾಗ್ ಅನಿಲ ಸೋರಿಕೆ: ಎಲ್​ಜಿ ಪಾಲಿಮರ್ಸ್ ವಿರುದ್ಧ ದಾಖಲಾಯಿತು ಎಫ್​ಐಆರ್​

    ನಮ್ಮ ಸಮಗ್ರ ಜೀವನವೇ ಒಂದು ಬೃಹದ್ ಗ್ರಂಥ. ಒಂದೊಂದು ವರ್ಷವೂ ಆ ಗ್ರಂಥದ ಒಂದೊಂದು ಅಧ್ಯಾಯ. ಒಂದೊಂದು ದಿನವೂ ಒಂದೊಂದು ಪುಟ, ಒಂದೊಂದು ಗಂಟೆಯೂ ಒಂದೊಂದು ವಾಕ್ಯ, ಆಗ ನಮಗೆ ಅರಿವಾಗುತ್ತೆ- ’It is good to read History; but better to create History!’ಅಲ್ಲವೇ?

    (ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts