More

    ನಿರೀಕ್ಷಿಸಿ.. ಇನ್ನೊಂದು ಹಣಕಾಸಿನ ಪ್ಯಾಕೇಜ್​!

    ನವದೆಹಲಿ: ಅರ್ಥ ವ್ಯವಸ್ಥೆಯ ಎಲ್ಲ ಸೆಕ್ಟರ್​ಗಳಿಗೆ ಅನ್ವಯವಾಗುವಂತಹ ಇನ್ನೊಂದು ಪೈನಾನ್ಶಿಯಲ್ ಪ್ಯಾಕೇಜ್ ಘೋಷಿಸುವುದಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಎಂಎಸ್​ಎಂಇಗಳಿಗೆ ಪ್ಯಾಕೇಜ್ ಬೇಕು ಎಂಬ ಆಗ್ರಹದ ಬೆನ್ನಿಗೆ ಈ ವಿಷಯ ಬಹಿರಂಗವಾಗಿದೆ.

    ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಗಿರಿಧರ್ ಅರಮನೆ ಅವರು ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್​ ಮ್ಯಾನುಫ್ಯಾಕ್ಚರರ್ಸ್​ (ಎಸ್​ಐಎಎಂ) ಸದಸ್ಯರ ಜತೆಗೆ ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡುತ್ತ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಎಂಎಸ್​ಎಂಇ ಮಾತ್ರವಲ್ಲದೇ ಎಲ್ಲ ಸೆಕ್ಟರ್​ಗಳನ್ನೂ ಗಮನದಲ್ಲಿ ಇರಿಸಿಕೊಂಡು ವಿಶೇಷ ಹಣಕಾಸಿನ ಪ್ಯಾಕೇಜ್ ಘೋಷಿಸುವುದಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ಮಾಡುತ್ತಿದೆ. ಭಾರತ ಸರ್ಕಾರ, ಪ್ರಧಾನ ಮಂತ್ರಿ ಕಚೇರಿ, ಆರ್ಥಿಕ ವ್ಯವಹಾರಗಳ ಇಲಾಖೆ ಒಟ್ಟಾಗಿ ಕೆಲಸ ಮಾಡುತ್ತಿದ್ದು, ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡುವ ಕ್ರಮಗಳನ್ನು ಸರ್ಕಾರ ಘೋಷಿಸಲಿದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: VIDEO: ವಿದ್ಯಾರ್ಥಿಗಳೇ ಚಿಂತೆ ಬಿಟ್ಟು ಓದಿನೆಡೆಗೆ ಗಮನಹರಿಸಿ: ವಿಜಯವಾಣಿ ಫೋನ್​ ಇನ್​ ಕಾರ್ಯಕ್ರಮದಲ್ಲಿ ಪ್ರೊ.ಸಿದ್ದು ಅಲಗೂರು

    ಸದ್ಯದ ಪರಿಸ್ಥಿತಿಯಲ್ಲಿ ಕುಸಿದು ಕುಳಿತಿರುವ ಆರ್ಥಿಕತೆಗೆ ಚೇತರಿಕೆ ನೀಡುವುದಕ್ಕೆ ಹಣಕಾಸು ಪ್ಯಾಕೇಜ್ ಅಗತ್ಯ ಎಂಬ ಬೇಡಿಕೆ ಕೈಗಾರಿಕಾ ಕ್ಷೇತ್ರದಿಂದ ಬಂದಿದೆ. ಎಂಎಸ್​ಎಂಇ ಪರಿಣತರು ಕೂಡಾ ಇದನ್ನೇ ಶಿಫಾರಸು ಮಾಡುತ್ತಿದ್ದಾರೆ. ಹೀಗಾಗಿ, ಇದೇ ಸಭೆಯಲ್ಲಿ ಭಾಗವಹಿಸಿದ್ದ ಸಚಿವ ನಿತಿನ್ ಗಡ್ಕರಿ ಕೂಡ ಈ ವಿಷಯವನ್ನು ಒಪ್ಪಿಕೊಂಡಿದ್ದು, ಒಂದು ಪ್ಯಾಕೇಜ್​ ಶೀಘ್ರವೇ ಘೋಷಣೆಯಾಗಲಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ !

    ಭಾರತದಲ್ಲಿ ಮೈಕ್ರೋ, ಸ್ಮಾಲ್​ ಆ್ಯಂಡ್ ಮೀಡಿಯಂ ಎಂಟರ್​ಪ್ರೈಸಸ್​(ಎಂಎಸ್​ಎಂಇ) ದೇಶದ ಬೆಳವಣಿಗೆಗೆ ಶೇಕಡ 29 ಕೊಡುಗೆ ನೀಡುತ್ತಿದ್ದು, ರಫ್ತು ಕ್ಷೇತ್ರದಲ್ಲೂ ಶೇಕಡ 48 ಪಾಲು ಹೊಂದಿದೆ. ಇದೇ ರೀತಿ ಈ ಕ್ಷೇತ್ರ ಉದ್ಯೋಗ ಸೃಜನೆಯಲ್ಲೂ ಹೆಚ್ಚಿನ ಪಾಲು ಹೊಂದಿದೆ. ಕರೊನಾ ವೈರಸ್​ ಸೋಂಕು ಹರಡಿದ ಕಾರಣ ಉಂಟಾಗಿರುವ ಸಂಕಷ್ಟದ ಸನ್ನಿವೇಶದಲ್ಲಿ ಅನೇಕ ಘಟಕಗಳು ನಷ್ಟ ಅನುಭವಿಸಿವೆ. ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಉದ್ಯೋಗ ಕಡಿತವನ್ನೂ ಅನುಸರಿಸಬೇಕಾಗಬಹುದು ಎಂಬುದು ಪರಿಣತರ ಅಭಿಮತ. (ಏಜೆನ್ಸೀಸ್)

    VIDEO| ಕೆಎಂಎಫ್ ಗೆ ರೈತರು ಪೂರೈಸುವ ಹಾಲಿಗೆ ರಾಜ್ಯಾದ್ಯಂತ ಶೀಘ್ರ ಏಕರೂಪದ ದರ: ಬಾಲಚಂದ್ರ ಜಾರಕಿಹೊಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts