More

    COVID19- ಅಶ್ವಗಂಧದ ನಿಯಂತ್ರಿತ ಕ್ಲಿನಿಕಲ್ ಟ್ರಯಲ್​ಗೆ ಮುಂದಾಗಿದೆ ಸರ್ಕಾರ

    ನವದೆಹಲಿ: ಕರೊನಾ COVID19 ವೈರಸ್ ಸೋಂಕು ತಡೆಯುವ ಚಿಕಿತ್ಸೆಗೆ ಔಷಧ ಅಭಿವೃದ್ಧಿಪಡಿಸುವ ಕೆಲಸ ಜಗತ್ತಿನಾದ್ಯಂತ ಪ್ರಗತಿಯಲ್ಲಿದೆ. ಅಲೋಪತಿಯಲ್ಲದೇ, ಆಯುರ್ವೇದ, ಯುನಾನಿ ಮತ್ತು ಇತರೆ ವೈದ್ಯಪದ್ಧತಿಯಲ್ಲಿ ಈ ವೈರಸ್​ಗೆ ಈಗಾಗಲೇ ಔಷಧ ಇದೆ ಎಂದು ಪ್ರತಿಪಾದಿಸುವ ಕೆಲಸವೂ ನಡೆದಿದೆ. ಇದಕ್ಕೆ ಪೂರಕವಾಗಿ ಈಗ ಸರ್ಕಾರ ನಿಯಂತ್ರಿತ ಕ್ಲಿನಿಕಲ್​ ಟ್ರಯಲ್​ಗೆ ಮನಸ್ಸು ಮಾಡಿದ್ದು ಅಲ್ಲಿ, ಅಶ್ವಗಂಧವನ್ನು ಮುಂಜಾಗ್ರತಾ ಔಷಧವಾಗಿ ಬಳಸುವ ಕಡೆಗೆ ಗಮನಹರಿಸಿದೆ. ಇದು ಹೈ ರಿಸ್ಕ್​ ಕೋವಿಡ್ 19 ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್​ ನೀಡುತ್ತಿರುವುದರ ಜತೆಗೆ ಹೋಲಿಕೆಯಾಗಿ ಫಲಿತಾಂಶವನ್ನು ಪರಿಗಣಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ನಿರೀಕ್ಷಿಸಿ.. ಇನ್ನೊಂದು ಹಣಕಾಸಿನ ಪ್ಯಾಕೇಜ್​!

    ಆಯುಷ್​, ಆರೋಗ್ಯ ಸಚಿವಾಲಯ, ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸಚಿವಾಲಯಗಳ ಜಂಟಿ ಕಾರ್ಯಾಚರಣೆಯಾಗಿದ್ದು, ಕೌನ್ಸಿಲ್ ಆಫ್ ಸೈಂಟಿಫಿಕ್​ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್​ (ಸಿಎಸ್ಐಆರ್​) ಮತ್ತು ಇಂಡಿಯನ್​ ಕೌನ್ಸಿಲ್​ ಆಫ್ ಮೆಡಿಕಲ್ ರಿಸರ್ಚ್​ (ಐಸಿಎಂಆರ್​) ಮೂಲಕ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದರು.

    ಈ ಒಟ್ಟಾರೆ ನಿಯಂತ್ರಿತ ಕ್ಲಿನಿಕಲ್ ಟ್ರಯಲ್​ಗಳು ನಮಗೆ ಪ್ರಿವೆಂಟಿವ್​ ಇಂಟರ್​ವೆನ್ಶನ್​ಗೆ ಆಯುರ್ವೇದಿಕ್ ಔಷಧ ಬಳಸುವುದಕ್ಕೆ ನೆರವಾಗಲಿವೆ. ಯಷ್ಠಿಮಧು ಮತ್ತು ಗುಡುಚಿ, ಪಿಪ್ಪಲಿಗಳ ಮಿಶ್ರಣ ಹಾಗೂ ಪಾಲಿ ಹರ್ಬಲ್​ ಫಾರ್ಮುಲಾಗಳನ್ನು ಅಶ್ವಗಂಧದ ಜತೆಗೆ ಸೇರಿಸಿ ಬಳಸಿದರೆ ಅದನ್ನು ಪ್ರೊಫಿಲ್ಯಾಕ್ಸಿಸ್​ ಎಂದು ಪರಿಗಣಿಸಬಹುದು. ಇದು ಮೈಲ್ಡ್ ಆಗಿರುವ ಮತ್ತು ಸಾಧಾರಣವಾಗಿರುವ ಕೋವಿಡ್ 19 ರೋಗಿಗಳ ಚಿಕಿತ್ಸೆಗೆ ಬಳಸಬಹುದಾಗಿದೆ ಎಂದು ಆಯುಷ್​ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಕೊಟೇಚಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: VIDEO: ವಿದ್ಯಾರ್ಥಿಗಳೇ ಚಿಂತೆ ಬಿಟ್ಟು ಓದಿನೆಡೆಗೆ ಗಮನಹರಿಸಿ: ವಿಜಯವಾಣಿ ಫೋನ್​ ಇನ್​ ಕಾರ್ಯಕ್ರಮದಲ್ಲಿ ಪ್ರೊ.ಸಿದ್ದು ಅಲಗೂರು

    ಯುಜಿಸಿಯ ವೈಸ್​ ಚೇರ್​ಮನ್​ ಡಾ.ಭೂಷಣ್ ಪಟವರ್ಧನ್​ ನೇತೃತ್ವದ ಒಂದಷ್ಟು ಪರಿಣತರನ್ನು ಒಳಗೊಂಡ ಆಯುಷ್​​ ರಿಸರ್ಚ್​ ಆ್ಯಂಡ್ ಡೆವಲಪ್​ಮೆಂಟ್ ಟಾಸ್ಕ್​ ಫೋರ್ಸ್​ ಈ ಸಂಬಂಧ ಕ್ಲಿನಿಕಲ್ ರೀಸರ್ಚ್​ ಪ್ರೊಟೊಕಾಲ್​ಗಳನ್ನು ರೂಪಿಸಿದೆ. ಕೋವಿಡ್​ 19 ರೋಗಿಗಳಿಗೆ ಅಶ್ವಗಂಧ, ಯಷ್ಟಿಮಧು, ಗುಡುಚಿ ಮತ್ತು ಪಿಪ್ಪಲಿ ಹಾಗೂ ಆಯುಷ್​ 64 ಉಂಟುಮಾಡುವ ಪರಿಣಾಮಗಳೇನು ಎಂಬುದರ ಅಧ್ಯಯನ ನಡೆಯುತ್ತಿದೆ ಎಂದು ಕೊಟೇಚಾ ವಿವರಿಸಿದ್ದಾರೆ.

    ಇದನ್ನೂ ಓದಿ: ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ !

    ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಗುರುವಾರ ಸಂಜೀವನಿ ಎಂಬ ಮೊಬೈಲ್ ಆ್ಯಪನ್ನು ಬಿಡುಗಡೆ ಮಾಡಿದ್ದು, ಅದರ ಮೂಲಕ ಆಯುಷ್​ ಅಡ್ವೊಕಸಿಯನ್ನು ಹೇಗೆ ಬಳಸಲಾಗುತ್ತಿದೆ. ಅದರ ಫಲಿತಾಂಶ ಏನು ಎಂಬಿತ್ಯಾದಿ ಡೇಟಾ ಸಂಗ್ರಹಿಸಿ ಆಯುರ್ವೇದ ಔಷಧಗಳ ಬಳಕೆ ಹೆಚ್ಚಿಸುವ ಕಡೆಗೆ ಗಮನಹರಿಸಲು ಸರ್ಕಾರ ತೀರ್ಮಾನಿಸಿದೆ. ಈ ಆ್ಯಪನ್ನು ಆಯುಷ್ ಮತ್ತು ಮಿನಿಸ್ಟ್ರಿ ಆಫ್​ ಇಲೆಕ್ಟ್ರಾನಿಕ್ಸ್​ ಆ್ಯಂಡ್ ಇನ್​ಫಾರ್ಮೇಷನ್​ ಟೆಕ್ನಾಲಜಿ ರೂಪಿಸಿದ್ದು 50 ಲಕ್ಷ ಜನರನ್ನು ತಲುಪುವ ಉದ್ದೇಶವಿದೆ ಎಂದು ಕೊಟೇಚಾ ಹೇಳಿದರು. (ಏಜೆನ್ಸೀಸ್)

    ಕೇರಳದಲ್ಲಿ ಈಗ ಇರುವ ಆ್ಯಕ್ಟಿವ್ ಕರೊನಾ ವೈರಸ್ ಕೇಸ್​ ಕೇವಲ 30!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts