More

    ‘ಲಾಠಿ’ ಹಿಡಿದ ವಿಶಾಲ್​; ಬೆಂಗಳೂರಿನಲ್ಲಿ ಪ್ರಚಾರ …

    ಬೆಂಗಳೂರು: ತಮಿಳು ನಟ ವಿಶಾಲ್​ ಅವರಿಗೂ ಕರ್ನಾಟಕ ಮತ್ತು ಕನ್ನಡಕ್ಕೂ ಹತ್ತಿರದ ನಂಟು. ಅವರು ಆಗಾಗ ಬೆಂಗಳೂರಿಗೆ ಬರುವುದು, ತಮ್ಮ ಚಿತ್ರಗಳ ಪ್ರಚಾರ ಮಾಡುವುದು ನಡೆಯುತ್ತಿರುತ್ತದೆ. ಈಗ ಅವರು ಇತ್ತೀಚೆಗೆ ಇನ್ನೊಮ್ಮೆ ಬೆಂಗಳೂರಿಗೆ ಬಂದಿದ್ದು. ಈ ಬಾರಿ ಅವರು ಬಂದಿದ್ದು, ಡಿ. 22ರಂದು ಬಿಡುಗಡೆಯಾಗುತ್ತಿರುವ ‘ಲಾಠಿ’ ಎಂಬ ಹೊಸ ಚಿತ್ರದ ಪ್ರಚಾರಕ್ಕಾಗಿ.

    ಇದನ್ನೂ ಓದಿ: ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್​​ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್​ ಮಾಡಲು ಮನವಿ

    ವಿಶಾಲ್​ ಇದಕ್ಕೂ ಮುನ್ನ ಪೊಲೀಸ್​ ಇನ್​ಸ್ಪೆಕ್ಟರ್​ ಆಗಿ ಕಾಣಿಸಿಕೊಂಡಿದ್ದರು. ಈಗ ಅವರು ‘ಲಾಠಿ’ ಚಿತ್ರದಲ್ಲಿ ಮೊದಲ ಬಾರಿಗೆ ಅವರು ಪೊಲೀಸ್​ ಕಾನ್ಸ್‌ಟೇಬಲ್ ಆಗಿ ಕಾಣಿಸಿಕೊಂಡಿದ್ದು, ಪೇದೆಗಳು ಎಷ್ಟೆಲ್ಲಾ ಕಷ್ಟದ ಪರಿಸ್ಥಿತಿಗಳಲ್ಲಿ ಕೆಲಸ ನಿರ್ವಹಿಸುತ್ತಾರೆ ಎಂಬ ಅಂಶವನ್ನು ಈ ಚಿತ್ರದಲ್ಲಿ ಹಿಡಿದಿಡಲಾಗಿದೆ.

    ಈ ಚಿತ್ರದ ಕುರಿತು ಮಾತನಾಡುವ ವಿಶಾಲ್​, ‘145 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ‌. ಚಿತ್ರದ ನಿಜವಾದ ಹೀರೋಗಳೆಂದರೆ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ ಹಾಗೂ ಸಾಹಸ ನಿರ್ದೇಶಕ ಪೀಟರ್ ಹೇನ್ಸ್​. ಹಾಡುಗಳು, ರೀರೆಕಾರ್ಡಿಂಗ್ ಹಾಗೂ ಸಾಹಸ ಸನ್ನಿವೇಶಗಳು ಅಷ್ಟು ಅದ್ಭುತವಾಗಿ ಮೂಡಿಬಂದಿದೆ. ಕೊನೆಯ 45 ನಿಮಿಷಗಳ ಸನ್ನಿವೇಶವಂತೂ ಪ್ರೇಕ್ಷಕರನ್ನು‌‌ ತುದಿಗಾಲಿನಲ್ಲಿ ನಿಲುವಂತೆ ಮಾಡುವುದು ಖಚಿತ. ನಿರ್ದೇಶಕ ವಿನೋದ್ ಕುಮಾರ್ ಉತ್ತಮವಾಗಿ ನಿರ್ದೇಶಿಸಿದ್ದಾರೆ. ‘ಲಾಠಿ’ ಟಿಕೆಟ್ ನ ಬೆಲೆಯ ಒಂದು ರೂಪಾಯಿಯನ್ನು ರೈತರಿಗೆ ನೀಡಲು ತೀರ್ಮಾನಿಸಿದ್ದೇನೆ’ ಎನ್ನುತ್ತಾರೆ.

    ಇದನ್ನೂ ಓದಿ: ಪ್ರಭಾಸ್​ ಮದುವೆ ಯಾವಾಗ? ಕೊನೆಗೂ ಬಾಯಿಬಿಟ್ಟರು ‘ಡಾರ್ಲಿಂಗ್​’

    ‘ಲಾಠಿ’ ಚಿತ್ರವುತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಡಿಸೆಂಬರ್ 22 ರಂದು ಬಿಡುಗಡೆಯಾಗುತ್ತಿದೆ. ಹಿಂದಿಯಲ್ಲಿ ಡಿಸೆಂಬರ್ 30 ರಂದು ತೆರೆ ಕಾಣಲಿದೆ. ಬೆಂಗಳೂರು ಕುಮಾರ್ ಕರ್ನಾಟಕದಾದ್ಯಂತ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

    ‘ಬಂಗಾರದ ಮನುಷ್ಯ’ನಿಗೆ 50; 22ಕ್ಕೆ ಐವರು ರೈತರಿಗೆ ಸನ್ಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts