More

    ‘ಬಂಗಾರದ ಮನುಷ್ಯ’ನಿಗೆ 50; 22ಕ್ಕೆ ಐವರು ರೈತರಿಗೆ ಸನ್ಮಾನ

    ಬೆಂಗಳೂರು: ಕನ್ನಡ ಚಿತ್ರರಂಗದ ಕ್ಲಾಸಿಕ್​ ಚಿತ್ರಗಳಲ್ಲಿ ಒಂದಾದ ಡಾ. ರಾಜಕುಮಾರ್​ ಅಭಿನಯದ ‘ಬಂಗಾರದ ಮನುಷ್ಯ’ ಬಿಡುಗಡೆಯಾಗಿ 50 ವರ್ಷಗಳಾಗಿವೆ. ಈ ಸಂಭ್ರಮವನ್ನು ದೊಡ್ಡ ಮಟ್ಟದಲ್ಲಿ ಆಚರಿಸಲು ‘ಚಿತ್ರಸಂತೆ’ ನಿಯತಕಾಲಿಕೆಯ ತಂಡ ಸಜ್ಜಾಗಿದೆ.

    ಇದನ್ನೂ ಓದಿ: ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್​​ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್​ ಮಾಡಲು ಮನವಿ

    ‘ಚಿತ್ರ ಸಂತೆ’ ತಂಡವು ಇದೇ ಡಿಸೆಂಬರ್‌ ೨೨ರಂದು ಚೌಡಯ್ಯ ಮೆಮೋರಿಯಲ್‌ ಹಾಲ್‌ ನಲ್ಲಿ ಸಮಾರಂಭವೊಂದನ್ನು ಹಮ್ಮಿಕೊಂಡಿದೆ. ‘ಬಂಗಾರದ ಮನುಷ್ಯ’ ಚಿತ್ರವು ರೈತರ ಬದುಕಿನ ಭಾಗದಂತಿರುವ ಕಾರಣದಿಂದ ಈ ಸಂದರ್ಭದಲ್ಲಿ ಐವರು ರೈತರನ್ನು ಕರೆದು ಸನ್ಮಾನಿಸುವುದರ ಜೊತೆಗೆ ಅವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು. ಡಾ. ರಾಜ್‌ ಕುಟುಂಬದ ಜೊತೆ ಕೆಲಸ ಮಾಡಿದ ಐವರು ಹಿರಿಯ ಕಲಾವಿದರಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಗುವುದು.

    ಇದನ್ನೂ ಓದಿ: ಐವರು ಟಾಲಿವುಡ್​ ಸ್ಟಾರ್​ ನಟರು ರಿಜೆಕ್ಟ್​ ಮಾಡಿದ ಚಿತ್ರವನ್ನು ವಿಜಯ್​ ಒಪ್ಪಿದ್ದೇಕೆ?

    ಅಂದು ಸಂಜೆ 5 ಗಂಟೆಗೆ ಈ ಕಾರ್ಯಕ್ರಮ ಶುರುವಾಗಲಿದ್ದು, ‘ವೇದ’ ಚಿತ್ರದ ನಿರ್ಮಾಪಕರಾದ ಗೀತಾ ಶಿವರಾಜ್‌ ಕುಮಾರ್‌ ಮತ್ತು ಡಾ.ಶಿವರಾಜ್‌ ಕುಮಾರ್‌, ನಿರ್ದೇಶಕ ಎ ಹರ್ಷ, ‘ಟಗರು’ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಸಹ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶಿವರಾಜಕುಮಾರ್​ ಜತೆಗೆ ಕೆಲಸ ಮಾಡಿರುವ ಐವರು ನಿರ್ದೇಶಕರನ್ನು ಗೌರವಿಸಲಾಗುತ್ತದೆ.

    ಪ್ರಭಾಸ್​ ಮದುವೆ ಯಾವಾಗ? ಕೊನೆಗೂ ಬಾಯಿಬಿಟ್ಟರು ‘ಡಾರ್ಲಿಂಗ್​’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts