More

    ಮಯಾಂಕ್​ ಫಿಟ್ನೆಸ್​ ಕಸರತ್ತಿಗೆ ಕಾಲೆಳೆದ ವಿರಾಟ್​ ಕೊಹ್ಲಿ, ಇಶಾಂತ್​

    ಬೆಂಗಳೂರು: ಟೀಮ್​ ಇಂಡಿಯಾ ಆಟಗಾರ ಮಯಾಂಕ್​ ಅಗರ್ವಾಲ್​ ಫಿಟ್ನೆಸ್​ ಬಗ್ಗೆ ಸಾಕಷ್ಟು ಎಚ್ಚರ ವಹಿಸುತ್ತಾರೆ. ಲಾಕ್​ಡೌನ್​ ವೇಳೆಯಲ್ಲೂ ವಿವಿಧ ದೈಹಿಕ ಕಸರತ್ತು ಮಾಡುವ ಮಾಡುವ ಮೂಲಕ ಫಿಟ್ನೆಸ್​ನತ್ತ ಹೆಚ್ಚಿನ ಗಮನಹರಿಸಿದ್ದಾರೆ. ಇವರಿಗೆ ಕುಟುಂಬ ಸದಸ್ಯರು ಕೂಡ ಸಾಥ್​ ನೀಡುತ್ತಾರೆ. ದಿನಂಪ್ರತಿ ಮಾಡುವ ದೈಹಿಕ ಕಸರತ್ತಿನ ವಿಡಿಯೋ , ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಯಾಂಕ್​ ಪ್ರಕಟಿಸುತ್ತಾ ಬಂದಿದ್ದಾರೆ. ಶುಕ್ರವಾರ ಪ್ರಕಟಿಸಿದ್ದ ಫೋಟೋಗೆ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ವೇಗಿ ಇಶಾಂತ್​ ಶರ್ಮ ಹಾಸ್ಯಮಯವಾಗಿ ಕಾಮೆಂಟ್​ ಹಾಕುವ ಮೂಲಕ ಟ್ರೋಲ್​ ಮಾಡಿದ್ದಾರೆ.

    ಇದನ್ನೂ ಓದಿ: ನೆಟ್ಸ್​ನಲ್ಲಿ ಸುನೀಲ್​ ಗಾವಸ್ಕರ್​ ಕೆಟ್ಟ ಬ್ಯಾಟ್ಸ್​ಮನ್​ ಎಂದು ಕಿರಣ್​ ಮೋರೆ ಹೇಳಿದ್ಯಾಕೆ..!

    ಮಯಾಂಕ್​ ಫಿಟ್ನೆಸ್​ ಕಸರತ್ತಿಗೆ ಕಾಲೆಳೆದ ವಿರಾಟ್​ ಕೊಹ್ಲಿ, ಇಶಾಂತ್​ಜಿಮ್​ನಲ್ಲಿ ದೇಹ ಸಮಾನತೆ ಕಾಯ್ದುಕೊಳ್ಳುವ ಸಲುವಾಗಿ ಮಯಾಂಕ್​ ತಲೆಕೆಳಗಾಗಿ ಬ್ಯಾಲೆನ್ಸ್​ ಮಾಡಿದ್ದರು. ಇದಕ್ಕೆ ಮಯಾಂಕ್​ ಅಭಿಮಾನಿಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರೆ, ಕೊಹ್ಲಿ ಹಾಗು ಇಶಾಂತ್​ ಶರ್ಮ ಮಾತ್ರ ಕರ್ನಾಟಕದ ಕ್ರಿಕೆಟಿಗನ ಕಾಲೆಳೆದಿದ್ದಾರೆ. ಕ್ಯಾ ಹೊ ಗಯಾ ಭಾಯ್​, ನನ್ನ ಪ್ರಕಾರ ಲಾಕ್​ಡೌನ್​ ಎಲ್ಲ ಹಂತವನ್ನು ದಾಟಿದಂತಿದೆ ಎಂದು ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಜಗತ್ತು ತಲೆಕೆಳಗಾಗಿದೆ ಅಥವಾ ಏಣಿಯನ್ನು ನೋಡುತ್ತಿದೆ (ರಜೆ ದುನಿಯ ಉಲ್ಟಿ ದಿಖ್​ ರಹಿ ಹೈ ಯಾ ಸೇಧಿ) ಎಂದು ಇಶಾಂತ್​ ಬರೆದಿದ್ದಾರೆ. ಇದಕ್ಕೆ ಹಲವು ಕ್ರಿಕೆಟಿಗರು ಪ್ರತಿಕ್ರಿಯೆ, ಲೈಟ್​ ನೀಡಿದ್ದಾರೆ.

    ಇದನ್ನೂ ಓದಿ: ಕ್ರಿಕೆಟ್ vs ಕರೊನಾ ವೈರಸ್: 4 ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭ

    2018ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ 29 ವರ್ಷದ ಮಯಾಂಕ್​ ಅಗರ್ವಾಲ್​, ಕಳೆದ ಡಿಸೆಂಬರ್​ ತಿಂಗಳಿಂದ ಯಾವುದೇ ಟೆಸ್ಟ್​ ಪಂದ್ಯ ಆಡಿಲ್ಲ. ಕಳೆದ ನ್ಯೂಜಿಲೆಂಡ್​ ವಿರುದ್ಧದ ಸರಣಿಯಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲೆ 26 ರನ್​ ಬಾರಿಸಿದ್ದರು. ಬೆಂಗಳೂರಿನಲ್ಲಿ ತಮ್ಮ ನಿವಾಸದಲ್ಲೇ ಲಾಕ್​ ಆಗಿದ್ದಾರೆ. ಐಪಿಎಲ್​ನಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಪ್ರತಿನಿಧಿಸುತ್ತಿದ್ದಾರೆ.

    5 ಬಾರಿ ಕರೊನಾ ಪಾಸಿಟಿವ್​ ಬಂದರೂ ಪಾರಾದ ಬಾಕ್ಸರ್ ಡಿಂಗ್ಕೊ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts