More

    ಧೋನಿ, ಕೊಹ್ಲಿ 10ನೇ ತರಗತಿಯಲ್ಲಿ ಪಡೆದ ಅಂಕಗಳೆಷ್ಟು ಗೊತ್ತೇ ?

    ನವದೆಹಲಿ: ಶಿಕ್ಷಣ ಮತ್ತು ಕ್ರೀಡೆ ಎರಡರಲ್ಲೂ ಏಕಕಾಲದಲ್ಲಿ ಯಶಸ್ಸು ಸಾದಿಸುವುದು ನಿಜಕ್ಕೂ ಕಠಿಣ ಸವಾಲು. ಕೆಲ ಕ್ರಿಕೆಟ್ ತಾರೆಯರು ಕ್ರಿಕೆಟ್ -ಶಿಕ್ಷಣ ಎರಡರಲ್ಲೂ ಯಶಸ್ಸು ಸಾಧಿಸಿದ ನಿದರ್ಶನವಿದೆ. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್, ಆರ್ ಅಶ್ವಿನ್ ಅಂಥ ಕೆಲ ಕ್ರಿಕೆಟ್ ತಾರೆಯರು. ಆದರೆ ಶಿಕ್ಷಣದಲ್ಲಿ ಹೆಚ್ಚಿನ ಅಂಕ ಗಳಿಸದಿದ್ದರೂ ಕ್ರಿಕೆಟ್ ಮೈದಾನದಲ್ಲಿ ಮಿಂಚಿದ ತಾರೆಯರೂ ಇದ್ದಾರೆ. ಅಂಥವರ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಹಾಲಿ ನಾಯಕ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಹಾಗಾದರೆ ಇವರಿಬ್ಬರು 10ನೇ ತರಗತಿಯಲ್ಲಿ ಪಡೆದ ಅಂಕಗಳೆಷ್ಟು ಗೊತ್ತೇ? ಕರೋನಾ ಹಾವಳಿಯ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ರಾಜ್ಯದ ವಿದ್ಯಾರ್ಥಿಗಳು ಒಂದು ವೇಳೆ ಕಡಿಮೆ ಅಂಕ ಪಡೆದರೂ ಎದೆಗುಂದಬೇಕಾಗಿಲ್ಲ ಎಂಬ ಧೈರ್ಯವನ್ನು ಇದು ತುಂಬುತ್ತದೆ.

    ಇದನ್ನೂ ಓದಿ: ಶೂಟರ್ ಅಭಿಷೇಕ್ ವರ್ಮಗೆ ಕ್ರಿಮಿನಲ್ ಲಾಯರ್ ಆಗುವ ಹಂಬಲ!

    2018ರಲ್ಲಿ ವೀರೇಂದ್ರ ಸೆಹ್ವಾಗ್ ಸ್ಕೂಲ್​ಗೆ ಭೇಟಿ ನೀಡಿದ ಸಮಯದಲ್ಲಿ ಧೋನಿ, 10 ಮತ್ತು 12ನೇ ತರಗತಿಯಲ್ಲಿ ಪಡೆದುಕೊಂಡಿದ್ದ ಅಂಕಗಳನ್ನು ಬಹಿರಂಗಪಡಿಸಿದ್ದರು. ವಿಕೆಟ್ ಕೀಪರ್ -ಬ್ಯಾಟ್ಸ್​ಮನ್​ 10ನೇ ತರಗತಿಯಲ್ಲಿ 66% ಮತ್ತು 12ನೇ ತರಗತಿಯಲ್ಲಿ 56% ಅಂಕ ಗಳಿಸಿದ್ದರು. ಧೋನಿ ಅವರಂತೆ ಕೊಹ್ಲಿ ಕೂಡ ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿದವರಲ್ಲ. 

    ಇದನ್ನೂ ಓದಿ: ಕೆಎಲ್ ರಾಹುಲ್‌ಗೆ ಮತ್ತೆ ಫಜೀತಿ ತಂದ ಕಾಫಿ!

    ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಅವರು ಗಣಿತ ವಿಷಯದಲ್ಲಿ ಅತ್ಯಂತ ದಡ್ಡರಾಗಿದ್ದರಂತೆ. ಎಷ್ಟರ ಮಟ್ಟಿಗೆ ಎಂದರೆ 100ರಲ್ಲಿ ಒಂದಂಕಿ ಅಂಕಗಳನ್ನೂ ಪಡೆದುಕೊಳ್ಳುತ್ತಿದ್ದರು! ’10ನೇ ತರಗತಿಯ ಗಣಿತ ಪರೀಕ್ಷೆಯಲ್ಲಿ ನನಗೆ 100ರಲ್ಲಿ ಕೇವಲ 3 ಅಂಕ ಲಭಿಸುತ್ತಿತ್ತು. ಗಣಿತದಲ್ಲಿ ನಾನು ಅಷ್ಟು ಬುದ್ಧಿವಂತನಾಗಿದ್ದೆ! ನನಗೆ ಗಣಿತ ಅರ್ಥವಾಗುತ್ತಿರಲಿಲ್ಲ. ಗಣಿತವನ್ನು ಕಲಿಯುವ ಆಸಕ್ತಿಯೂ ನನಗಿರುತ್ತಿರಲಿಲ್ಲ. ಅದರಲ್ಲಿನ ಫಾರ್ಮುಲಾಗಳು ನನಗೆ ಜೀವನದಲ್ಲಿ ಇದುವರೆಗೆ ಎಂದೂ ಉಪಯೋಗಕ್ಕೆ ಬಂದಿಲ್ಲ’ ಎಂದು ಕೊಹ್ಲಿ 2019ರಲ್ಲಿ ಚಾಟ್​ ಶೋ ಒಂದರಲ್ಲಿ ಹೇಳಿಕೊಂಡಿದ್ದರು.

    ‘ಕ್ರಿಕೆಟ್​ಗಿಂತ ನನಗೆ ಗಣಿತವೇ ಕಷ್ಟಕರವಾಗಿತ್ತು. ಗಣಿತ ಕಲಿಯಲು ಪಟ್ಟಷ್ಟು ಕಷ್ಟವನ್ನು ನಾನು ಕ್ರಿಕೆಟ್​ ಕಲಿಯಲು ಕೂಡ ಪಟ್ಟಿರಲಿಲ್ಲ. ಎಷ್ಟೇ ಕಷ್ಟವಾದರೂ ಸರಿ 10ನೇ ತರಗತಿ ಮುಗಿಸಬೇಕೆಂಬ ಸಂಕಲ್ಪ ಮಾಡಿದ್ದೆ. ಯಾಕೆಂದರೆ ಆನಂತರ ನನಗೆ ಗಣಿತ ವಿಷಯ ಸಿಗದ ರೀತಿಯಲ್ಲಿ ಶಿಕ್ಷಣವನ್ನು ಆಯ್ದುಕೊಳ್ಳುವ ಅವಕಾಶವಿರುತ್ತದೆ ಎಂಬುದು ಗೊತ್ತಿತ್ತು’ ಎಂದು ಕೊಹ್ಲಿ ವಿವರಿಸಿದ್ದರು.

    ಇದನ್ನೂ ಓದಿ: FACT-CHECK| ಮಗುವಿನ ನಿರೀಕ್ಷೆಯಲ್ಲಿರುವರೇ ಕೊಹ್ಲಿ-ಅನುಷ್ಕಾ ದಂಪತಿ?

    ಈಗ ಕೋಟಿ ಕೋಟಿ ಲೆಕ್ಕಾಚಾರದಲ್ಲಿ ಹಣ ಸಂಪಾದನೆ ಮಾಡುವ ಕೊಹ್ಲಿ 10ನೇ ತರಗತಿ ನಂತರ ವಿದ್ಯಾಭ್ಯಾಸವನ್ನೂ ಮುಂದುವರಿಸಿಲ್ಲ. 19 ವಯೋಮಿತಿ ತಂಡದ ನಾಯಕರಾಗಿ ವಿಶ್ವಕಪ್​ ಗೆದ್ದ ಬಳಿಕ ಕ್ರಿಕೆಟ್​ ಚಟುವಟಿಕೆಯಲ್ಲಿ ಬಿಜಿಯಾದ ಅವರು, ಶಿಕ್ಷಣದ ಕಡೆ ಗಮನ ಕೊಡಲಿಲ್ಲ. ಧೋನಿ ಕೂಡ 12ನೇ ತರಗತಿಯ ನಂತರ ಪದವಿ ಪಡೆಯುವ ಹಂಬಲ ಹೊಂದಿದ್ದರೂ, ಕ್ರಿಕೆಟ್​ ಚಟುವಟಿಕೆಯಲ್ಲಿ ಬಿಜಿಯಾದ ಕಾರಣ ಅವರ ಈ ಕನಸು ಈಡೇರಲೇ ಇಲ್ಲ. ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ 10ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು ಎಂಬುದು ಗಮನಾರ್ಹ. ಅವರೂ ಕಿರಿಯ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಕಾರಣ ನಂತರ 10ನೇ ತರಗತಿಯನ್ನು ಪಾಸ್​ ಮಾಡುವ ಪ್ರಯತ್ನವನ್ನೂ ನಡೆಸಲಿಲ್ಲ.

    ಟಿಕ್​ಟಾಕ್​ ಬ್ಯಾನ್​ ಆಗಿದ್ದಕ್ಕೆ ವಾರ್ನರ್​ ಕಾಲೆಳೆದ ಅಶ್ವಿನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts