More

    VIDEO | ನೀರುತುಂಬಿದ ರಸ್ತೆಯಲ್ಲಿ ಕೂರಿಸಿ ಕಂಟ್ರಾಕ್ಟರ್​ಗೆ ಕಸದ ಅಭಿಷೇಕ!

    ಮುಂಬೈ : ರಸ್ತೆಯ ಬದಿಯ ಕಸವನ್ನು ಸರಿಯಾಗಿ ಸ್ವಚ್ಛಗೊಳಿಸದ ಕಾರಣ ಮಳೆ ನೀರು ನಿಂತು ಜನರಿಗೆ ಸಮಸ್ಯೆಯಾಗುತ್ತಿದೆ ಎಂಬ ಕಾರಣಕ್ಕೆ ಕಂಟ್ರಾಕ್ಟರನ್ನು ರಸ್ತೆಯಲ್ಲಿ ಕೂರಿಸಿ ತಲೆಯ ಮೇಲೆ ಕಸ ಸುರಿದಿರುವ ಘಟನೆ ಮುಂಬೈನಲ್ಲಿ ನಿನ್ನೆ ನಡೆದಿದೆ. ಚಾಂದಿವಲಿಯ ಶಿವಸೇನಾ ಶಾಸಕ ದಿಲೀಪ್​ ಲಾಂಡೆ ಈ ರೀತಿಯ ಶಿಕ್ಷೆ ನೀಡುವ ಕಾರ್ಯದ ಸಾರಥ್ಯ ವಹಿಸಿದ್ದಾರೆ.

    “ಕಂಟ್ರಾಕ್ಟರ್​ ತನ್ನ ಕೆಲಸವನ್ನು ಸರಿಯಾಗಿ ಮಾಡದಿದ್ದರಿಂದ ನಾನು ಈ ರೀತಿ ಮಾಡಿದೆ” ಎಂದು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ, ಶಾಸಕ ಲಾಂಡೆ. ಕಂಟ್ರಾಕ್ಟರ್​ಅನ್ನು ಮಳೆನೀರು ತುಂಬಿದ ರಸ್ತೆಯಲ್ಲಿ ಕೂರಲು ಹೇಳಿ, ಪೌರಕಾರ್ಮಿಕರಿಗೆ ಅವರ ತಲೆಯ ಮೇಲೆ ಕಸ ಹಾಕಲು ಸೂಚಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

    “ಕಳೆದ 15 ದಿನಗಳಿಂದ ಕಂಟ್ರಾಕ್ಟರಿಗೆ ಫೋನ್ ಮಾಡಿ ರಸ್ತೆಯನ್ನು ಕ್ಲಿಯರ್​ ಮಾಡಬೇಕೆಂದು ಮನವಿ ಮಾಡುತ್ತಿದ್ದೇನೆ. ಆದರೆ ಅವನು ಆ ಕೆಲಸ ಮಾಡಲಿಲ್ಲ. ಶಿವಸೇನಾದ ಕಾರ್ಯಕರ್ತರೇ ಆ ಕೆಲಸ ಮಾಡುತ್ತಿದ್ದರು. ವಿಷಯ ತಿಳಿದಾಗ ಸ್ಥಳಕ್ಕೆ ಹೋದ ನಾವು ಅದು ಅವನ ಜವಾಬ್ದಾರಿ, ಅವನೇ ನಿಭಾಯಿಸಬೇಕೆಂದು ಹೇಳಿದೆವು” ಎಂದು ಶಾಸಕ ಲಾಂಡೆ ಸುದ್ದಿಗಾರರಿಗೆ ಹೇಳಿದ್ದಾರೆ. (ಏಜೆನ್ಸೀಸ್)

    ಹೆಂಡತಿ ಇಲ್ಲದ ಸಮಯದಲ್ಲಿ ಮಗಳನ್ನು ರೇಪ್ ಮಾಡಿ ಗರ್ಭಿಣಿ ಮಾಡಿದ… ಆಸ್ಪತ್ರೆಯಲ್ಲಿ ಬಯಲಾಯಿತು ರಹಸ್ಯ!

    ಹಿರಿಯ ಕಾಂಗ್ರೆಸ್​ ನಾಯಕಿ ಇಂದಿರಾ ಹೃದಯೇಶ್ ನಿಧನ

    ಕರೊನಾ ಪರೀಕ್ಷೆ ಮಾಡುವಾಗ ಮೂಗಿನೊಳಗೆ ಮುರಿದ ಸ್ವಾಬ್​ ಸ್ಟಿಕ್! ಇದು ಬಹಳ ನೋವಿನ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts