ಹಿರಿಯ ಕಾಂಗ್ರೆಸ್​ ನಾಯಕಿ ಇಂದಿರಾ ಹೃದಯೇಶ್ ನಿಧನ

ನವದೆಹಲಿ : ಮಾಜಿ ಸಚಿವೆ ಹಾಗೂ ಉತ್ತರಾಖಂಡ ವಿಧಾನಸಭೆಯ ವಿರೋಧಪಕ್ಷದ ನಾಯಕಿಯಾಗಿದ್ದ ಇಂದಿರಾ ಹೃದಯೇಶ್​ ಅವರು ಇಂದು ದೆಹಲಿಯಲ್ಲಿ ನಿಧನ ಹೊಂದಿದ್ದಾರೆ. 80 ವರ್ಷ ವಯಸ್ಸಾಗಿದ್ದ ಇಂದಿರಾ ಅವರು, ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದು, ಹಿರಿಯ ಕಾಂಗ್ರೆಸ್ ನಾಯಕಿಯಾಗಿದ್ದರು. ದೆಹಲಿಗೆ ಪಕ್ಷದ ಸಭೆಯೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ಇಂದಿರಾ ಅವರು, ಉತ್ತರಾಖಂಡ್ ಸದನ್​ನಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಹೃದಯಾಘಾತವಾಗಿ ಮರಣ ಹೊಂದಿದರು ಎಂದು ಉತ್ತರಾಖಂಡ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ದೇವೇಂದರ್ ಯಾದವ್ ತಿಳಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ಉತ್ತರಾಖಂಡಕ್ಕೆ ಒಯ್ಯಲಾಗುತ್ತಿದೆ … Continue reading ಹಿರಿಯ ಕಾಂಗ್ರೆಸ್​ ನಾಯಕಿ ಇಂದಿರಾ ಹೃದಯೇಶ್ ನಿಧನ