More

    VALENTINES DAY SPECIAL | ಪ್ರೀತಿ ಓಕೆ ಆಯ್ತು! ಮುಂದೇನು?

    -ಎನ್. ಗುರುನಾಗನಂದನ

    ಸ್ಕೂಲ್, ಕಾಲೇಜ್, ಆಫೀಸ್ ಅಥವಾ ಪಾರ್ಟಿಯಲ್ಲೋ ಪರಿಚಯವಾದ ಇಬ್ಬರು ಹುಡುಗ ಹುಡುಗಿಯರು ಸಾವಿರಾರು ಮೆಸೇಜ್, ಕಾಲ್ಸ್, ತಿರುಗಾಟದ ನಂತರ ಒಬ್ಬರನ್ನೊಬ್ಬರು ಇಂಪ್ರೆಸ್ ಮಾಡುತ್ತಾ ಪ್ರೀತಿ ಮಾಡಲು ಶುರು ಮಾಡುತ್ತಾರೆ. ಪ್ರೀತಿ ಯಾವಾಗ ಶುರುವಾಗುತ್ತೆ ಎಂಬುದು ತಿಳಿಯುವುದಿಲ್ಲ. ಆದರೆ ಪ್ರೀತಿಯನ್ನು ಯಾವಾಗ ಪ್ರಪೋಸ್ ಮಾಡೋದು ಎಂದು ಯೋಚಿಸುತ್ತಿದ್ದಾಗ ‘ವ್ಯಾಲೆಂಟೈನ್ಸ್ ಡೇ’ ನೆನಪಿಗೆ ಬರುತ್ತೆ. ಪ್ರೀತಿಯ ದಿನಕ್ಕೆ ಕಾದು ಪ್ರಪೋಸ್ ಮಾಡೋದನ್ನು ಹಲವಾರು ಬಾರಿ ಪ್ರಾಕ್ಟೀಸ್ ಮಾಡಿ ‘ಐ ಲವ್ ಯು’ ಎಂದು ಹೇಳಿದಾಗ ‘ಐ ಲವ್ ಯು ಟು’ ಎಂದು ರಿಪ್ಲೈ ಬಂದ ಕೂಡಲೇ ಇಷ್ಟು ದಿನ ಮಾಡಿದ ಪ್ಲಾನ್ ವರ್ಕ್ಟೌಟ್ ಆಗೊಯ್ತು ಅಂದುಕೊಂಡು, ದೇವರಿಗೆ ಥ್ಯಾಂಕ್ಸ್ ಹೇಳಿ ಏನೋ ಸಾಧಿಸಿದ್ವಿ, ನಮಗೊಬ್ಬರು ಜತೆ ಸಿಕ್ಕರು ಎಂದು ಸಂಭ್ರಮ ಪಡುತ್ತಾರೆ.

    ಪ್ರೀತಿ ಓಕೆ ಆದ ನಂತರ ಡೇಟಿಂಗ್ ಹಂತ ಶುರುವಾಗುತ್ತೆ. ರಾತ್ರಿ ಪೂರ್ತಿ ಚಾಟಿಂಗ್, ಒಂದು ಕ್ಷಣವೂ ಬಿಟ್ಟಿರಲು ಸಾಧ್ಯವಿಲ್ಲ ಎನ್ನುವಷ್ಟು ಕ್ಲೋಸ್ ಆಗುತ್ತಾರೆ. ಜೀವನದಲ್ಲಿ ಇಬ್ಬರು ಒಟ್ಟಿಗೆ ಇರಬೇಕು ಎಂದು ಪ್ರಾಮಿಸ್ ಮಾಡುತ್ತಾರೆ. ಹೀಗಿದ್ದಾಗ ಯಾವುದೊ ಒಂದು ಚಿಕ್ಕ ವಿಷಯಕ್ಕೆ ಜಗಳ ಶುರುವಾಗುತ್ತೆ. ನಂತರ ಇಬ್ಬರಲ್ಲಿ ಒಬ್ಬರು ಕ್ಷಮೆ ಕೇಳಿ ಮೊದಲಿನಂತೆ ಒಂದಾಗುತ್ತಾರೆ. ಇದೆಲ್ಲದರ ಮಧ್ಯೆ ಪ್ರೀತಿ ಮನೆಯವರ ಕಣ್ಣಿಗೆ ಬೀಳುತ್ತೆ. ರೋಡ್ ಅಲ್ಲಿ ಕೈ ಕೈ ಹಿಡಿದುಕೊಂಡು ನಡೆಯುವಾಗ ಪಕ್ಕದ ಮನೆಯವರು ನೋಡುತ್ತಾರೆ. ಆಗ ಇಬ್ಬರ ಮನಸ್ಸಿನಲ್ಲೂ ಭಯ, ಆತಂಕ, ಈಗ ಏನು ಮಾಡೋದು ಅಂತ ಯೋಚಿಸುತ್ತಿದ್ದಾಗ ಸ್ನೇಹಿತ ಕೊಟ್ಟ ಐಡಿಯಾ ಕೆಲಸಕ್ಕೆ ಬಂದು ಮನೆಯವರಿಂದ ತಪ್ಪಸಿಕೊಳ್ಳುತ್ತಾರೆ. ‘ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಬೇಕು’ ಅಂತಂದುಕೊಂಡು ನಿಟ್ಟುಸಿರು ಬಿಡುತ್ತಾರೆ. ಜೀವನದಲ್ಲಿ ಒಟ್ಟಿಗೆ ಬದುಕಬೇಕು, ಮಾದರಿ ಪ್ರೇಮಿಗಳಂತೆ ಬಾಳಬೇಕು ಎಂಬ ಹತ್ತಾರು ಕನಸ್ಸುಗಳನ್ನು ಕಾಣಲು ಶುರು ಮಾಡುತ್ತಾರೆ. ಹೀಗೆ ಕನಸ್ಸು ಕಟ್ಟುತ್ತಾ, ಮುದ್ದಾಗಿ ಒಬ್ಬರನ್ನೊಬ್ಬರು ಇಷ್ಟ ಪಡುತ್ತಾರೆ. ನಮ್ಮ ಪ್ರೀತಿ ಶಾಶ್ವತ, ಕೊನೆಯೇ ಇಲ್ಲ ಎಂದವರು ಮನಸ್ತಾಪ, ಜಗಳ, ನನಗೆ ಬೋರ್ ಆಯ್ತು, ನೀನು ಟೈಮ್ ಕೊಡ್ತಿಲ್ಲ ಇಂತಹ ಹಲವಾರು ಕಾರಣಗಳಿಗೆ ಪ್ರೀತಿಯ ದಿನದಂದು ಶುರುವಾದ ಪ್ರೀತಿ ಬ್ರೇಕಪ್ ಹಂತವನ್ನು ತಲುಪುತ್ತೆ.

    ಇಂತಹ ಸಮಯದಲ್ಲಿ ಸಾಕಷ್ಟು ಜನ ಪ್ರೇಮಿಗಳು ಎಡವುತ್ತಾರೆ. ದುಡುಕಿ ನಿರ್ಧಾರ ತೆಗೆದುಕೊಂಡು ಜೀವನ ಪೂರ್ತಿ ಪಶ್ಚಾತ್ತಾಪ ಪಡುವ ಹಾಗೆ ಮಾಡಿಕೊಳ್ಳುತ್ತಾರೆ. ಇಂತಹ ಸಮಯದಲ್ಲಿ ತಾಳ್ಮೆ ಬಹಳ ಮುಖ್ಯ. ಮೊದಲು ರಿಲೇಷನ್ಶಿಪ್ಪಿನಲ್ಲಿ ಆಗುತ್ತಿರುವ ಸಮಸ್ಯೆ ಏನು ಎಂಬುದನ್ನು ಹುಡಕಬೇಕು. ಮಾತಿನಿಂದ ಬಗೆಹರಿಯದ ಸಮಸ್ಯೇ ಇಲ್ಲ. ತಾಳ್ಮೆಯಿಂದ ಸಮಸ್ಯೆಯ ಕುರಿತು ಮಾತನಾಡಿ ಬಗೆ ಹರಿಸಿಕೊಳ್ಳಲು ಪ್ರಯತ್ನಿಸಬೇಕು. ಒಂದು ವೇಳೆ ಪ್ರೀತಿಯಲ್ಲಿ ಯಾವುದೆ ತೊಂದರೆ ಇಲ್ಲದೆ ಮೂರೆನೆಯ ವ್ಯಕ್ತಿ ಅಥವಾ ವಿಷಯದಿಂದ ಸಮಸ್ಯೆ ಆಗುತ್ತಿದ್ದರೆ ಸರಿಯಾದ ಸಲ್ಯೂಷನ್ ಕಂಡುಹಿಡಿಯಬೇಕು. ತೊಂದರೆ ಕೊಡುತ್ತಿರುವ ವಿಷಯ/ವ್ಯಕ್ತಿಯಿಂದ ದೂರ ಇರಲು ಪ್ರಯತ್ನಿಸಬೇಕು. ಇದು ಹೇಳಲು ಸುಲಭ ಆದರೆ ಮಾಡುವುದು ಕಷ್ಟ. ಆದರೆ ಪ್ರೀತಿಯಲ್ಲಿ ಕಾಂಪ್ರಮೈಸ್ ಆಗಲೇಬೇಕು. ಒಬ್ಬರಿಗೊಬ್ಬರು ನೋವು ಮಾಡದಂತೆ ಬರುವ ಎಲ್ಲ ಕಷ್ಟಗಳನ್ನು ಎದುರಿಸಿಕೊಂಡು ನಡೆಯಬೇಕು. ಇಬ್ಬರು ಪ್ರೇಮಿಗಳು ರೋಡಿನಲ್ಲಿ ಹೋಗುತ್ತಿದ್ದರೆ ಅವರನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವವರೆ ಹೆಚ್ಚು. ಅಂತಹವರನ್ನು ಬದಲಿಸುವ ಬದಲು ನಮ್ಮ ಪ್ರೀತಿಯ ಬೆಲೆ ಏನು ಎಂಬುದನ್ನು ನಾವು ತಿಳಿದುಕೊಂಡರೆ ಸಾಕು. ನಿಜವಾದ ಪ್ರೀತಿ ಸಿಗುವುದು ಕಷ್ಟ, ಸಿಕ್ಕಾಗ ಉಳಿಸಿಕೊಳ್ಳುವುದು ಅದಕ್ಕಿಂತ ಕಷ್ಟ. ಪ್ರೀತಿಯ ದಿನದಂದು ಶುರುವಾದ ಲವ್ ಸ್ಟೋರಿ ಲೈಫ್ ಪೂರ್ತಿ ಮಸ್ತ್ ಆಗಿ ನಡೆಯಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts