More

    ಪ್ರೇಮಿಗಳ ದಿನದಂದು ‘ಅಪ್ಪಿಕೋ ದನ’; ಫೆ. 14 ‘ಕೌ ಹಗ್ ಡೇ’ ಎಂದು ಆಚರಿಸಲು ಸರ್ಕಾರದ ಮನವಿ

    ಬೆಂಗಳೂರು: ಪ್ರೇಮಿಗಳ ದಿನದ ಪ್ರಯುಕ್ತ ಈಗಾಗಲೇ ಹದಿಹರೆಯದವರಲ್ಲಿ ಹೊಸ ಹುಮ್ಮಸ್ಸು ಆರಂಭವಾಗಿದೆ. ಆದರೆ ಅಂದು ಇನ್ನೊಂದು ದಿನವಾಗಿ ಆಚರಣೆ ಮಾಡುವಂತೆ ಕೇಂದ್ರ ಸರ್ಕಾರ ಮನವಿಯೊಂದನ್ನು ಮಾಡಿಕೊಂಡಿದೆ.

    ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಇಂಥದ್ದೊಂದು ಮನವಿ ಮಾಡಿಕೊಂಡಿದೆ. ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು. ಇದು ಸಂಪತ್ತು ಹಾಗೂ ಜೀವವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ.

    ಕಾಲಾನಂತರದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಗತಿಯಿಂದಾಗಿ ವೈದಿಕ ಸಂಪ್ರದಾಯಗಳು ಬಹುತೇಕ ಅಳಿವಿನ ಅಂಚಿನಲ್ಲಿವೆ. ಪಾಶ್ಚಿಮಾತ್ಯ ನಾಗರಿಕತೆಯ ಮೋಡಿ ನಮ್ಮ ಭೌತಿಕ ಸಂಸ್ಕೃತಿ ಮತ್ತು ಪರಂಪರೆಯನ್ನು ಬಹುತೇಕ ಮರೆಯುವಂತೆ ಮಾಡಿಬಿಟ್ಟಿದೆ.

    ಹಸುವಿನ ಅಪಾರ ಪ್ರಯೋಜನವನ್ನು ಗಮನದಲ್ಲಿಟ್ಟುಕೊಂಡು, ಗೋವನ್ನು ತಬ್ಬಿಕೊಳ್ಳುವುದು ಭಾವನಾತ್ಮಕ ಶ್ರೀಮಂತಿಕೆಯನ್ನು ತರುತ್ತದೆ. ಅದು ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಎಲ್ಲಾ ಗೋವುಪ್ರಿಯರು ಗೋಮಾತೆಯ ಮಹತ್ವ ಗಮನದಲ್ಲಿಟ್ಟುಕೊಂಡು ಫೆ. 14 ಹಸು ಅಪ್ಪುಗೆ ದಿನವಾಗಿ ಆಚರಿಸಬಹುದು ಮತ್ತು ಜೀವನವನ್ನು ಸಂತೋಷ ಮತ್ತು ಸಕಾರಾತ್ಮಕ ಆಗಿಸಿಕೊಳ್ಳಬಹುದು ಎಂದು ಮಂಡಳಿ ಮನವಿ ಮಾಡಿಕೊಂಡಿದೆ.

    ರಾಜಧಾನಿಯ ಈ ಪ್ರದೇಶದಲ್ಲಿ 15 ದಿನಗಳ ಕಾಲ ನಿಷೇಧಾಜ್ಞೆ: ಎಲ್ಲಿ, ಯಾಕೆ?

    ಸಿನಿಮಾ ಹೀರೋಯಿನ್​ಗೆ ಹೋಲಿಸಿದ್ದಕ್ಕೆ ಪತಿಗೆ ಊಟ ಹಾಕಲ್ಲ ಎಂದ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts