More

    1 ರೂಪಾಯಿಗೆ ಆಕ್ಸಿಜನ್​ ಸಿಲಿಂಡರ್​! ಸಮಾಜ ಸೇವೆಗೆ ನಿಂತ ಉದ್ಯಮಿಯ ಹಿಂದಿದೆ ನೋವಿನ ಕಥೆ

    ಲಖನೌ: ಕರೊನಾ ಪೂರ್ತಿ ದೇಶವನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಆಕ್ಸಿಜನ್​ ಸಿಗದೆ ಪ್ರತಿದಿನ ನೂರಾರು ಮಂದಿ ಬಲಿಯಾಗುವಂತೆ ಮಾಡಿದೆ. ಇಂಥ ಸಮಯದಲ್ಲಿ ಎಲ್ಲೋ ಕೆಲವರು ಸಮಾಜ ಸೇವೆಗೆ ಮುಂದಾಗಿರುವುದನ್ನು ನಾವು ನೋಡಬಹುದು. ಅದೇ ರೀತಿ ಉತ್ತರ ಪ್ರದೇಶದ ಉದ್ಯಮಿಯೊಬ್ಬರು ಸೋಂಕಿತರಿಗೆ ಕೇವಲ 1 ರೂಪಾಯಿಗೆ ಆಕ್ಸಿಜನ್​ ಸಿಲಿಂಡರ್​ ಕೊಡುವ ಮೂಲಕ ದೇವರಾಗಿದ್ದಾರೆ.

    ಹಮಿರ್ಪುರ ಜಿಲ್ಲೆಯ ಉದ್ಯಮಿ ಮನೋಜ್​ ಗುಪ್ತಾ ಈ ರೀತಿ ಪರೋಪಕಾರ ಮಾಡುತ್ತಿರುವ ವ್ಯಕ್ತಿ. ಅಂದ ಹಾಗೆ ಈ ಮನೋಜ್​ಗೆ ಕಳೆದ ವರ್ಷ ಕರೊನಾ ಸೋಂಕು ದೃಢವಾಗಿತ್ತಂತೆ. ಆ ಸಮಯದಲ್ಲಿ ಅವರು ಅನುಭವಿಸಿದ ನೋವಿನಿಂದ ಅವರು ಬೇಸತ್ತಿದ್ದರಂತೆ. ಸೋಂಕಿತರ ನೋವು ಗೊತ್ತಿರುವ ಕಾರಣದಿಂದಾಗಿ ಇದೀಗ ಸೋಂಕಿತರ ಸಹಾಯಕ್ಕೆ ಅವರು ಮುಂದಾಗಿದ್ದಾರೆ. ತಮ್ಮ ಕಾರ್ಖಾನೆಯಲ್ಲಿ ಪ್ರತಿದಿನ 1 ಸಾವಿರ ಆಕ್ಸಿಜನ್​ ಸಿಲಿಂಡರ್​ ತುಂಬಿಸುವ ಸಾಮರ್ಥ್ಯವಿದ್ದು, ಸೋಂಕಿತರು ಅಥವಾ ಅವರ ಸಂಬಂಧಿಗಳಿಂದ 1 ರೂಪಾಯಿ ಪಡೆದು ಒಂದು ಆಕ್ಸಿಜನ್​ ಸಿಲಿಂಡರ್​ ತುಂಬಿಸಿಕೊಡುತ್ತಿದ್ದಾರೆ.

    ಹೆಚ್ಚಿನ ಹಣ ಕೊಟ್ಟು ಆಕ್ಸಿಜನ್​ ಸಿಲಿಂಡರ್​ ಖರೀದಿಸಲಾಗದ ಸಾಕಷ್ಟು ಬಡವರು ಮನೋಜ್​ ಬಳಿ ಬಂದು ಆಕ್ಸಿಜನ್​ ಪಡೆದು ಹೋಗುತ್ತಿದ್ದಾರೆ. ಸೋಂಕಿತರ ಆರ್​ಟಿಪಿಸಿಆರ್​ ವರದಿ ತೋರಿಸಿದವರಿಗೆ ಆಕ್ಸಿಜನ್​ ಕೊಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ! ರಾಜ್​ಕುಮಾರ್​ ಬರ್ತ್​ಡೇ ವಿಷ್​ ಮಾಡಿದ ಆರ್​ಸಿಬಿ

    ಐ ಡ್ರಾಪ್​ ಬದಲು ನೈಲ್​ ಗ್ಲ್ಯೂವನ್ನು ಕಣ್ಣಿಗೆ ಹಾಕಿಕೊಂಡ ಮಹಿಳೆ! ಆಮೇಲೆ ಏನಾಯ್ತು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts