More

    ಕೊವಿಡ್​-19ಗೆ ಇನ್ನೊಂದು ಹೆಸರಿಟ್ಟ ಯುಎಸ್​ ಅಧ್ಯಕ್ಷ ಟ್ರಂಪ್​; ಮತ್ತೆ ಚೀನಾ ವಿರುದ್ಧ ಕುಹಕದ ಮಾತುಗಳು

    ನವದೆಹಲಿ: ಜಗತ್ತನ್ನು ಅತಿಕ್ರಮಿಸಿರುವ ಕರೊನಾ ವೈರಸ್​ ಅಮೆರಿಕದಲ್ಲಿ ತುಂಬ ಹೆಚ್ಚಾಗಿ ಬಾಧಿಸಿದೆ. ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಂತೂ ಕೊವಿಡ್​-19 ವಿಚಾರವಾಗಿ ಚೀನಾ ವಿರುದ್ಧ ಮೊದಲಿನಿಂದಲೂ ಕಿಡಿಕಾರುತ್ತಲೇ ಇದ್ದಾರೆ.

    ಪ್ರಾರಂಭದಲ್ಲಿ ಇದನ್ನು ವುಹಾನ್​ ವೈರಸ್​ ಎಂದೇ ಟ್ರಂಪ್ ಕರೆಯುತ್ತಿದ್ದರು. ಬಳಿಕ ವುಹಾನ್​ ವೈರಸ್​ ಎಂದು ಕರೆಯದಂತೆ ಚೀನಾ ಜಗತ್ತಿಗೇ ಮನವಿ ಮಾಡಿತ್ತು. ಅದಾದ ಮೇಲೆ ಟ್ರಂಪ್​ ಕೂಡ ವುಹಾನ್​ ವೈರಸ್​ ಎಂದು ಉಲ್ಲೇಖಿಸುವುದನ್ನ ನಿಲ್ಲಿಸಿದ್ದರು.
    ಆದರೆ ಇದೀಗ ಮತ್ತೊಮ್ಮೆ ಡೊನಾಲ್ಡ್​ ಟ್ರಂಪ್​ ಅವರು ಚೀನಾ ವಿರುದ್ಧ ಆಕ್ರೋಶ ಭರಿತ ಮಾತುಗಳನ್ನಾಡುತ್ತಿದ್ದಾರೆ. ಇಂದು ವೈಟ್​ ಹೌಸ್​​ನಲ್ಲಿ ಮಾತನಾಡಿದ ಟ್ರಂಪ್​, ಕೊವಿಡ್​-19ನ್ನು ಚೀನಾದಿಂದ ಬಂದ ಪ್ಲೇಗ್​ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಅದು ಇಷ್ಟು ದೊಡ್ಡ ಮಟ್ಟರದಲ್ಲಿ ಹರಡಲು ಅವಕಾಶ ಮಾಡಿಕೊಟ್ಟಿದ್ದೇ ಬೀಜಿಂಗ್​ ಎಂದಿದ್ದಾರೆ. ಇದನ್ನೂ ಓದಿ:ಸಿಡಿಲು ಬಡಿತಕ್ಕೆ ಇಂದು ಒಂದೇ ದಿನ 22 ಮಂದಿ ಸಾವು; ಮೃತರ ಕುಟುಂಬಕ್ಕೆ 4 ಲಕ್ಷ ರೂ.ಪರಿಹಾರ

    ಭಾರತ ಸೇರಿ ಹಲವು ರಾಷ್ಟ್ರಗೊಳೊಂದಿಗೆ ಚೀನಾ ಗಡಿ, ಭೂಪ್ರದೇಶಕ್ಕೆ ಸಂಬಂಧಪಟ್ಟ ಸಂಘರ್ಷವನ್ನು ಹೊಂದಿದೆ. ಆಕ್ರಮಣಕಾರಿ ಮನೋಭಾವ ತೋರಿಸುತ್ತಿದೆ. ಇದು ಕಮ್ಯುನಿಸ್ಟ್​ ಪಕ್ಷದ ನಿಜ ಸ್ವಭಾವ ಎಂಬುದು ಸ್ಪಷ್ಟವಾಗುತ್ತದೆ ಎಂದು ಈ ಹಿಂದೆ ಟ್ರಂಪ್​ ಚೀನಾ ವಿರುದ್ಧ ಮಾತನಾಡಿದ್ದರು.

    ಅಲ್ಲದೆ, ಮಂಗಳವಾರ ಟ್ವೀಟ್​ ಮಾಡಿ, ಕರೊನಾ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹರಡುತ್ತಿರುವ ಬೆನ್ನಲ್ಲೇ, ಚೀನಾದ ಮೇಲಿನ ಸಿಟ್ಟು ಕೂಡ ಹೆಚ್ಚುತ್ತಿದೆ ಎಂದಿದ್ದರು. (ಏಜೆನ್ಸೀಸ್​)

    ಇಲ್ಲಸಲ್ಲದ ಆರೋಪ ಮಾಡಿದ ಪಾಕಿಸ್ತಾನಕ್ಕೆ ಭಾರತದ ಖಡಕ್​ ಪ್ರತ್ಯುತ್ತರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts