More

    ಯುಪಿಎಸ್​ಸಿಯಿಂದ ಸಿಎಂಎಸ್​ ನೇಮಕಾತಿ ಅಧಿಸೂಚನೆ ವಿಳಂಬ

    ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ಕಂಬೈನ್ಡ್​ ಮೆಡಿಕಲ್​ ಸರ್ವೀಸ್​ ಪರೀಕ್ಷೆಗಾಗಿ ಅಧಿಸೂಚನೆ ಹೊರಡಿಸುವುದನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದೆ.

    ಯುಪಿಎಸ್​ಸಿಯ ನಿಗದಿತ ವೇಳಾಪಟ್ಟಿಯಂತೆ ಏಪ್ರಿಲ್​ 8ರಂದು ಅಧಿಸೂಚನೆ ಹೊರಡಿಸಬೇಕಾಗಿತ್ತು. ಅರ್ಜಿ ಸಲ್ಲಿಸಲು ಏಪ್ರಿಲ್​ 28 ಕೊನೆಯ ದಿನವಾಗಿತ್ತು. ಆದರೆ, ದೇಶಾದ್ಯಂತ ಲಾಕ್​ಡೌನ್​ ಹಿನ್ನೆಲೆಯಲ್ಲಿ ಅಧಿಸೂಚನೆ ಹೊರಡಿಸುವುದನ್ನು ಮುಂದಕ್ಕೆ ಹಾಕಿದೆ.

    ಯುಪಿಎಸ್​ಸಿ ಈಗಾಗಲೇ ರಾಷ್ಟ್ರೀಯ ಸೇನಾ ಅಕಾಡೆಮಿ ಹಾಗೂ ನೌಕಾ ಅಕಾಡೆಮಿ ಪ್ರವೇಶಕ್ಕೆ ಅಧಿಸೂಚನೆ ಹೊರಡಿಸುವುದನ್ನು ಮುಂದೂಡಿದೆ. ಇದಲ್ಲದೇ, ಹಲವು ನೇರ ನೇಮಕಾತಿಗಳನ್ನು ಸ್ಥಗಿತಗೊಳಿಸಿದೆ. ಅಖಿಲ ಭಾರತ ನಾಗರಿಕ ಸೇವಾ ಹುದ್ದೆಗಳ ಭರ್ತಿಗಾಗಿ ಚಾಲ್ತಿಯಲ್ಲಿದ್ದ ಸಂದರ್ಶನವನ್ನು ನಿಲ್ಲಿಸಿದೆ.

    ಯುಪಿಎಸ್​ಸಿ ವಾರ್ಷಿಕ ವೇಳಾಪಟ್ಟಿಯನ್ವಯ ಏಪ್ರಿಲ್​ 22ರಂದು ಕೇಂದ್ರೀಯ ಸಶಸ್ತ್ರ ಪೊಲೀಸ್​ ಪಡೆಯ ಅಸಿಸ್ಟೆಂಟ್​ ಕಮಾಡೆಂಟ್​ ನೇಮಕಕ್ಕೆ ಅಧಿಸೂಚನೆ ಪ್ರಕಟಗೊಳ್ಳಬೇಕಿದೆ. ಇದನ್ನು ಮುಂದೂಡುವ ಸಾಧ್ಯತೆ ಅಧಿಕವಾಗಿದೆ. (ಏಜೆನ್ಸೀಸ್)

    ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಪದವಿ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ಬಡ್ತಿ ನೀಡಿ…. ವಿಶ್ವವಿದ್ಯಾಲಯಕ್ಕೆ ಪಾಧ್ಯಾಪಕರಿಂದಲೇ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts