More

    ಕೇಂದ್ರ ಸಚಿವ ಅಶ್ವಿನಿ ಕುಮಾರ್​ ಚೌಬೆ ಸಹೋದರ ಆಸ್ಪತ್ರೆಯಲ್ಲಿ ನಿಧನ: ನಿರ್ಲಕ್ಷ್ಯ ಆರೋಪ, ಇಬ್ಬರು ವೈದ್ಯರು ಸಸ್ಪೆಂಡ್​

    ನವದೆಹಲಿ: ಕೇಂದ್ರ ಸಚಿವ ಅಶ್ವಿನಿ ಕುಮಾರ್​ ಚೌಬೆ ಅವರ ಸಹೋದರ ನಿರ್ಮಲ್​ ಚೌಬೆ ಬಿಹಾರದ ಭಗಲ್ಪುರನಲ್ಲಿರುವ ಮಾಯಗಂಜ್​ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಸಂಬಂಧಿಕರು ಆರೋಪ ಮಾಡಿದ್ದು, ಇಬ್ಬರು ವೈದ್ಯರನ್ನು ಅಮಾನತು ಮಾಡಲಾಗಿದೆ.

    ಚೌಬೆ ಅವರು ದೈಹಿಕ ಅಸ್ವಸ್ಥತೆಯಿಂದ ಬಳಲಿದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆತಂದೆವು. ಆದರೆ, ಆಸ್ಪತ್ರೆಯಲ್ಲಿ ವೈದ್ಯರಿರಲಿಲ್ಲ ಎಂದು ಸಂಬಂಧಿ ಚಂದನ್ ಆರೋಪ ಮಾಡಿದ್ದಾರೆ.

    ಭಾರತೀಯ ಜನತಾ ಪಕ್ಷದ ಸಂಸದ ಅಶ್ವಿನಿ ಕುಮಾರ್ ಚೌಬೆ ಅವರು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಚಿಕಿತ್ಸೆ ವೇಳೆ ನಿರ್ಮಲ್ ಚೌಬೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಚೌಬೆ ಅವರ ಸಾವು, ಭಾಗಲ್ಪುರದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು (JLNMCH) ಎಂದೂ ಕರೆಯಲ್ಪಡುವ ಸುಪ್ರಸಿದ್ಧ ಮಾಯಾಗಂಜ್ ಆಸ್ಪತ್ರೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಆಸ್ಪತ್ರೆಯ ಅಧೀಕ್ಷಕರು ಕೂಡ ಸ್ಥಳಕ್ಕೆ ಆಗಮಿಸಿದರು. ಹೆಚ್ಚಿನ ಗಲಾಟೆ ಆಗಬಾರದೆಂಬ ಕಾರಣಕ್ಕೆ ಆಸ್ಪತ್ರೆಯ ಸುತ್ತ ಬಿಗಿ ಪೊಲೀಸ್​ ಬಂದೋಬಸ್ತ್​ ಸಹ ಮಾಡಲಾಗಿದೆ.

    ಕೇಂದ್ರ ಸಚಿವ ಚೌಬೆ ಅವರ 65 ವರ್ಷದ ಸಹೋದರ ನಿರ್ಮಲ್​ ಚೌಬೆ ಅವರು ಸೇನೆಯಿಂದ ನಿವೃತ್ತರಾಗಿದ್ದರು. (ಏಜೆನ್ಸೀಸ್​)

    ನಾನೂ ಪರಶುರಾಮನ ಭಕ್ತ: ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ; ಕಾರ್ಕಳದಲ್ಲಿ ಥೀಂ ಪಾರ್ಕ್ ಉದ್ಘಾಟನೆ

    ಮಿಸಸ್ ಚಟರ್ಜಿ v/s ನಾರ್ವೆ; ನೈಜ ಘಟನೆಯಾಧಾರಿತ ಸಿನಿಮಾದಲ್ಲಿ ರಾಣಿ ಮುಖರ್ಜಿ

    ಇವತ್ತ ರಥಸಪ್ತಮಿಗೆ ನನಗ ಯಾಕ ಕರಿ ಎರಿಲಿಲ್ಲಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts