More

    ಮಿಸಸ್ ಚಟರ್ಜಿ v/s ನಾರ್ವೆ; ನೈಜ ಘಟನೆಯಾಧಾರಿತ ಸಿನಿಮಾದಲ್ಲಿ ರಾಣಿ ಮುಖರ್ಜಿ

    ಬಯೋಪಿಕ್​ಗಳು ಹಾಗೂ ನೈಜ ಘಟನೆಯಾಧಾರಿತ ಚಿತ್ರಗಳಿಗೆ ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಹೆಚ್ಚಿದೆ. ಹೀಗಾಗಿಯೇ ದೇಶ, ವಿದೇಶಗಳಲ್ಲಿ ನಡೆದ ಘಟನೆಗಳನ್ನು ಹುಡುಕಿ, ಜಾಲಾಡಿ ಹೊಸ ಹೊಸ ವಿಷಯಗಳನ್ನು ಹೆಕ್ಕಿ ತೆಗೆಯುವ ಕೆಲಸಗಳು ನಡೆಯುತ್ತಿವೆ. ಅಂಥದ್ದೇ ಒಂದು ಘಟನೆ ಇದೀಗ ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೆ’ ಸಿನಿಮಾ ರೂಪ ಪಡೆದಿದೆ. 2011ರಲ್ಲಿ ನಾರ್ವೆ ದೇಶದಲ್ಲಿ

    ಭಾರತೀಯ ದಂಪತಿಯ ಮಕ್ಕಳನ್ನು ಸರ್ಕಾರ ವಶಕ್ಕೆ ಪಡೆಯುತ್ತದೆ. ಬಳಿಕ ಭಾರತೀಯ ದಂಪತಿ ಮಕ್ಕಳನ್ನು ವಾಪಸ್ ಪಡೆಯಲು ಹೇಗೆಲ್ಲಾ ಕಾನೂನು ಹೋರಾಟ ಮಾಡುತ್ತಾರೆ ಎಂಬುದರ ಸುತ್ತ ಕಥೆ ಹೆಣೆಯಲಾಗಿದ್ದು, ಆಶಿಮಾ ಛಿಬ್ಬರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ಮಾರ್ಚ್ 17ರಂದು ಬಿಡುಗಡೆಯಾಗುತ್ತಿದೆ.

    2021ರಲ್ಲಿ ‘ಬಂಟಿ ಔರ್ ಬಬ್ಲಿ 2’ ಚಿತ್ರದಲ್ಲಿ ನಟಿಸಿದ ಬಳಿಕ ರಾಣಿ ಮುಖರ್ಜಿ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಎರಡು ವರ್ಷಗಳ ನಂತರ ವಾಪಸ್ಸಾಗಿರುವ 44 ವರ್ಷದ ರಾಣಿ ಮುಖರ್ಜಿ ಈ ಬಯೋಪಿಕ್ ಮೂಲಕ ನಿರೀಕ್ಷೆ ಮೂಡಿಸಿದ್ದಾರೆ. ಜತೆಗೆ ಮಾರ್ಚ್ 21ರಂದು ರಾಣಿ ಮುಖರ್ಜಿಯ ಬಯೋಗ್ರಫಿ ಕೂಡ ಬಿಡುಗಡೆಯಾಗಲಿದೆ. ತಮ್ಮ 25 ವರ್ಷಗಳ ಸಿನಿಮಾ ಕರಿಯರ್​ನಲ್ಲಿ ಕಂಡ ಏಳು, ಬೀಳುಗಳು, ವಿವಾದಗಳ ಕುರಿತು ಪುಸ್ತಕದಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. –ಏಜೆನ್ಸೀಸ್

    ಈತನ ಪತ್ತೆಗೆ ಸುಳಿವು ಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ!

    ಹೃದಯಾಘಾತಕ್ಕೆ ಮತ್ತೊಂದು ಬಲಿ; ತಂದೆ-ತಾಯಿಯ ಏಕೈಕ ಪುತ್ರ, ಜೆಡಿಎಸ್​ ಯುವ ಮುಖಂಡ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts