More

    ಐಸಿಯುನಿಂದ ಹೊರಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್​: ಆರೋಗ್ಯದಲ್ಲಿ ಸುಧಾರಣೆ

    ಲಂಡನ್​: ಯುನೈಟೆಡ್ ಕಿಂಗ್ಡಂನ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರನ್ನು ಇಂಟೆನ್ಸಿವ್ ಕೇರ್ ಯುನಿಟ್​(ಐಸಿಯು)ನಿಂದ ವಾರ್ಡ್​ಗೆ ಗುರುವಾರ ಸಂಜೆ ಸ್ಥಳಾಂತರಿಸಲಾಗಿದೆ. ಕರೊನಾ ಸೋಂಕುಪೀಡಿತರಾಗಿದ್ದ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ ಪಿಎಂ ಕಚೇರಿ ವಕ್ತಾರ ತಿಳಿಸಿದ್ದಾರೆ. ಇದೇ ವೇಳೆ ಅಲ್ಲಿನ ವಿವಿಧ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿಗೆ ಒಳಗಾಗಿ ಸಾವಿಗೀಡಾದವರ ಸಂಖ್ಯೆ 8,000ದ ಗಡಿ ದಾಟಿದೆ.

    ಪ್ರಧಾನಮಂತ್ರಿ ಅವರ ಆರೋಗ್ಯವನ್ನು ಪರಿಣತ ವೈದ್ಯರ ತಂಡ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಆರಂಭಿಕ ಹಂತದಲ್ಲಿಯೇ ಸೋಂಕು ಗುರುತಿಸಿದ ಕಾರಣ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಚಿಕಿತ್ಸೆಗಳಿಗೂ ಅವರು ಅತ್ಯುತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಪಿಎಂ ಕಚೇರಿ ವಕ್ತಾರ ಸ್ಪಷ್ಟಪಡಿಸಿದ್ದಾರೆ.

    ಕರೊನಾ ವೈರಸ್ ಸೋಂಕಿನ ಗುಣಲಕ್ಷಣಗಳು ಹೆಚ್ಚಾಗಿ ಆರೋಗ್ಯ ಹದಗೆಟ್ಟ ಕಾರಣ ಮೂರು ದಿನಗಳ ಹಿಂದೆ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ಎರಡು ವಾರಗಳ ಹಿಂದೆ ಅವರಿಗೆ COVID19 ಟೆಸ್ಟ್ ಪಾಸಿಟಿವ್ ಬಂದಿತ್ತು. ಆರಂಭದಲ್ಲಿ ಬಹಳ ಮೈಲ್ಡ್ ಆಗಿರುವ ಲಕ್ಷಣಗಳಷ್ಟೇ ಗೋಚರಿಸಿದ್ದವು. ಬೋರಿಸ್ ಜಾನ್ಸನ್​ ಅವರ ಆರೋಗ್ಯ ಸ್ಥಿತಿ ಕುರಿತು ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಡೊಮ್ನಿಕ್​ ರಾಬ್​ ಪ್ರತಿಕ್ರಿಯಿಸಿದ್ದು, ಜಾನ್ಸನ್ ಅವರ ಆರೋಗ್ಯದಲ್ಲಿ ಸುಧಾರಣೆ ಇದ್ದು, ಅವರು ಆರೋಗ್ಯವಂತರಾಗುವತ್ತ ಹೆಜ್ಜೆ ಇರಿಸಿದ್ದಾರೆ. ಸೇಂಟ್ ಥಾಮಸ್ ಹಾಸ್ಪಿಟಲ್​ನಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಅಸಹ್ಯ! ಲಾಕ್​ಡೌನ್ ನಿಯಮ ಗಾಳಿಗೆ ತೂರಿ ಬಯಲಿಗೆ ಬಂತು ಜೋಡಿ- ಅವರ ಕಾಮದಾಟ ನೋಡಿ ಸುತ್ತಮುತ್ತಲಿನವರು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts