More

    ಕರೊನಾ ಪ್ರತ್ಯೇಕ ವಾರ್ಡಿನಲ್ಲಿ 2 ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ

    ಕೇಪ್​ಟೌನ್​: ಕರೊನಾ ವೈರಸ್​ ಪ್ರತ್ಯೇಕ ವಾರ್ಡಿನಲ್ಲಿ ಎರಡು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆದಿರುವ ಅಮಾನವೀಯ ಘಟನೆ ದಕ್ಷಿಣ ಆಫ್ರಿಕಾದ ಆಸ್ಪತ್ರೆಯೊಂದರಲ್ಲಿ ನಡೆದಿದೆ.

    ಪ್ರೆಟೋರಿಯಾದ ಡಾ. ಜಾರ್ಜ್​ ಮುಖರಿ ಅಕಾಡೆಮಿ ಆಸ್ಪತ್ರೆಯ ಕೋವಿಡ್​ 19 ಪ್ರತ್ಯೇಕ ವಾರ್ಡಿನಲ್ಲಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪ ಕೇಳಿಬಂದಿದ್ದು, ಪೊಲೀಸ್​ ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿ ಈ ಬಗ್ಗೆ ತನಿಖೆ ನಡೆಸುತ್ತಿದೆ.

    ಇದನ್ನೂ ಓದಿ: ಪ್ರೀತಿಯ ಮಗನನ್ನೇ ಕತ್ತು ಹಿಸುಕಿ ಕೊಲೆಗೈದ ತಾಯಿ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ…!

    ಕರೊನಾ ರೋಗ ಲಕ್ಷಣಗಳು ಕಂಡಬಂದ ಹಿನ್ನೆಲೆಯಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷಿಸಿದ ವೈದ್ಯರು ಮಗುವಿಗೆ ಪ್ರತ್ಯೇಕ ವಾರ್ಡಿನ ಅವಶ್ಯಕತೆ ಇದೆ ಎಂದು ಹೇಳಿದ್ದಾಗಿ ಮಗುವಿನ ತಾಯಿ ತಿಳಿಸಿದ್ದಾರೆ.

    ಪ್ರತ್ಯೇಕ ವಾರ್ಡಿನಲ್ಲಿ ಮಗುವನ್ನು ಬಿಟ್ಟು ತಾಯಿ ಮನೆಗೆ ಹೋಗಿದ್ದಾಳೆ. ಸಂಜೆ ಬಂದು ನೋಡಿದಾಗ ಮಗು ನೋವಿನಿಂದ ಅಳುತ್ತಿರುವುದು ತಾಯಿಯ ಗಮನಕ್ಕೆ ಬಂದಿದೆ. ಆದರೆ, ಏನಾಗಿದೆ ಎಂದು ಗೊತ್ತಾಗಲಿಲ್ಲ. ಬಳಿಕ ರಾತ್ರಿ 11 ಗಂಟೆ ಸುಮಾರಿಗೆ ಆಸ್ಪತ್ರೆಗೆ ಕರೆ ಮಾಡಿದಾಗ ಮಗು ಮಲಗಿದೆ ಎಂದು ಹೇಳಿದ್ದಾರೆ. ಮಾರನೇ ದಿನ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿ, ಮಗುವಿನ ವರದಿ ನೆಗಿಟಿವ್​ ಬಂದಿದೆ. ಹೀಗಾಗಿ ಡಿಸ್ಚಾರ್ಜ್​ ಮಾಡಲಾಗಿದೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ.

    ಬಳಿಕ ಮಗುವಿನ ಚಿಕ್ಕಮ್ಮ ಆಸ್ಪತ್ರೆಗೆ ಬಂದು ಮಗುವನ್ನು ಎತ್ತಿಕೊಂಡು ಮನೆ ಹೋಗಿದ್ದಾರೆ. ಇದೇ ವೇಳೆ ಮಗು ನಡೆದಾಡಲು ತುಂಬಾ ಕಷ್ಟಪಡುತ್ತಿದ್ದುದ್ದನ್ನು ಚಿಕ್ಕಮ್ಮ ಗಮನಿಸಿದ್ದಾರೆ. ಮಗುವಿಗೆ ಏನೋ ಸಮಸ್ಯೆಯಾಗಿದೆ ಎಂಬುದು ಗೊತ್ತಾಗಿದೆ. ಈ ವೇಳೆ ತಾಯಿ ಮಗುವಿನ ನ್ಯಾಪ್ಕಿನ್​ ಬದಲಾಯಿಸುವಾಗ ಮಗುವಿನ ಜನನಾಂಗದಲ್ಲಿ ಬಿಳಿ ಬಣ್ಣದ ಅಂಟು ದ್ರವವನ್ನು ಗಮನಿಸಿದ್ದಾರೆ.

    ಇದನ್ನೂ ಓದಿ: ಕನ್ನಡದ ಕಿರುತೆರೆ ನಟ ಸುಶೀಲ್​ ಗೌಡ ಆತ್ಮಹತ್ಯೆ!; ಸಾವಿಗೆ ಕಾರಣವಾಗಿದ್ದೇನು?

    ಪ್ರಾರಂಭದಲ್ಲಿ ಇದೊಂದು ವೈದ್ಯಕೀಯ ಚಿಕಿತ್ಸೆ ಇರಬಹುದು ಎಂದಷ್ಟೇ ತಾಯಿ ಭಾವಿಸಿದ್ದಾಳೆ. ಆದರೆ, ಮಾರನೇ ದಿನ ಬಿಳಿ ದ್ರಾವಣ ಇನ್ನಷ್ಟು ಹೊರಗೆ ಬರುವುದನ್ನು ಚಿಕ್ಕಮ್ಮ ಗಮನಿಸಿದ್ದಾಳೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಮಗುವಿನ ಮೇಲೆ ಅತ್ಯಾಚಾರ ನಡೆದಿದೆ ಎಂದು ದೃಢಪಡಿಸಿದ್ದಾರೆ.

    ಇದೀಗ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆಯ ಆಡಳಿತ ಮಂಡಳಿಯೂ ಸಹ ಈ ಸಂಬಂಧ ತನಿಖೆ ನಡೆಸುತ್ತಿದೆ.

    ಅಂದಹಾಗೆ ಮಗುವನ್ನು ಜೂನ್​ 15ರಂದು ಸ್ಥಳೀಯ ಸೊಶಂಗಾವೆಯ ಕೆ.ಟಿ. ಮೊಟುಬಾಸ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಪ್ರೆಟೋರಿಯಾದ ಡಾ. ಜಾರ್ಜ್​ ಮುಖರಿ ಅಕಾಡೆಮಿ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. ಉಸಿರಾಟದಲ್ಲಿ ತೊಂದರೆ ಉಂಟಾದ್ದರಿಂದ ಕರೊನಾ ವೈರಸ್​ ಪರೀಕ್ಷಿಸಲು ಜಾರ್ಜ್​ ಮುಖರಿ ಆಸ್ಪತ್ರೆಗೆ ದಾಖಲಿಸಲಾಯಿತು. (ಏಜೆನ್ಸೀಸ್​)

    ತಾಕತ್ತಿದ್ರೆ ಹಿಡಿರಿ ನೋಡೋಣ…! ಹುಲಿಗಳನ್ನೇ ಯಾಮಾರಿಸಿದ ಚಿಂಪಾಂಜಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts