More

    ತಾಕತ್ತಿದ್ರೆ ಹಿಡಿರಿ ನೋಡೋಣ…! ಹುಲಿಗಳನ್ನೇ ಯಾಮಾರಿಸಿದ ಚಿಂಪಾಂಜಿ…

    ಅಸ್ಸಾಂ: ಹುಲಿ ಎಂದರೆ ಸಾಮಾನ್ಯವಾಗಿ ಎಲ್ಲಾ ಪ್ರಾಣಿಗಳೂ ಭಯ ಬೀಳುತ್ತವೆ. ಆದರೆ ಇಲ್ಲೊಂದು ಗಿಬ್ಬನ್‌ (ಚಿಂಪಾಂಜಿ ಜಾತಿಗೆ ಸೇರಿದ್ದು), ಹುಲಿಯನ್ನೇ ಯಾಮಾರಿಸಿದೆ!
    ಎರಡು ಹುಲಿಗಳನ್ನು ಕಾಡಿ, ಕೆಣಕಿದ ಈ ಗಿಬ್ಬನ್‌, ಹುಲಿಗಳನ್ನೇ ಸುಸ್ತು ಮಾಡಿದೆ. ಅವುಗಳನ್ನು ಛೇಡಿಸಿದ ಕಾರಣ ಸಿಟ್ಟಿಗೆದ್ದ ಹುಲಿಗಳು ಅದನ್ನು ಹಿಡಿಯಲು ಹೋದಾಗ ಮರದಿಂದ ಮರಕ್ಕೆ ಹಾರಿ ತಪ್ಪಿಸಿಕೊಂಡು ಹುಲಿಗಳನ್ನು ಬೇಸ್ತು ಬೀಳಸಿದೆ.

    ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್‌ ಮಾಡಿದ್ದು, ಅದೀಗ ವೈರಲ್‌ ಆಗಿದೆ. ಅಸ್ಸಾಂನಲ್ಲಿ ಕಂಡುಬಂದಿರುವ ಈ ದೃಶ್ಯವನ್ನು ಇವರು ವಿಡಿಯೋ ಮಾಡಿ ಶೇರ್‌ ಮಾಡಿದ್ದಾರೆ.

    ಕೇವಲ 54 ಸೆಕೆಂಡ್‌ಗಳ ಈ ವಿಡಿಯೋ ನೋಡಿ ನಕ್ಕು ನಕ್ಕೂ ಸುಸ್ತಾಗುವಂತಿದೆ. ಗಿಬ್ಬನ್ ಮರದ ಮೇಲಿದ್ದು, ಹುಲಿಗಳು ಕೆಳಗೆ ಇವೆ. ಗಿಬ್ಬನ್‌, ಮರದ ಕೊಂಬೆಗಳನ್ನು ಹಿಡಿದು ಕೆಳಗೆ ಜೋತಾಡಿ ಹುಲಿಗಳ ತಲೆಗೆ ಹೊಡೆಯುತ್ತದೆ. ಅನೇಕ ಬಾರಿ ಈ ರೀತಿ ಮಾಡಿ ಹುಲಿಗಳನ್ನು ಕೆಣಕಿದೆ. ಆದರೆ ಹುಲಿಗಳು ಎಷ್ಟೇ ಹಿಡಿಯಲು ಹೋದರೂ ಅದು ಕೈಗೆ ಸಿಕ್ಕಿಲ್ಲ.

    ಜುಲೈ 5ರಂದು ಅಪ್ಲೋಡ್ ಮಾಡಿದ ಈ ವಿಡಿಯೋಗೆ ಭಾರಿ ಮೆಚ್ಚುಗೆ ಕಳಿಸಿದೆ. 10 ಸಾವಿರಕ್ಕೂ ಅಧಿಕ ಮಂದಿ ಇದರ ವೀಕ್ಷಣೆ ಮಾಡಿದ್ದರೆ, ನೂರಾರು ಕಮೆಂಟ್ ಗಳು ಬಂದಿವೆ.

    ಭಾರತವನ್ನು ಅಲ್ಲಾಡಿಸಲು ನೇಪಾಳವನ್ನು ಛೂಬಿಟ್ಟ ಚೀನಾ! ಏನಿದು ಹೊಸ ಕುತಂತ್ರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts